ವಿಜಯಪುರ: ರಣ ಬಿಸಿಲಿನಲ್ಲೂ ಗುಂಪು ಗುಂಪಾಗಿ ಸಂಚರಿಸುತ್ತಿರುವ ಜನರು, ಸಾಲುದ್ದ ಕಾಣುವ ಮಳಿಗೆಗಳು, ಇತ್ತ ಹೊಸ ಹೊಸ ಮೋಟಾರ್ ಸೈಕಲ್, ಆಟೋರಿಕ್ಷಾ. ಮತ್ತೊಂದೆಡೆ ಕೃಷಿ ಯಂತ್ರೋಪಕರಣಗಳು, ದವಸ ಧಾನ್ಯಗಳು ಹೀಗೆ ಒಂದೇ ಮೇಳದಲ್ಲಿ ಇದೆಲ್ಲವೂ ಕಂಡು ಬಂದಿದ್ದು ವಿಜಯಪುರದ ಸೈನಿಕ ಶಾಲಾ ಮೈದಾನದಲ್ಲಿ.
ಫಲಾನುಭವಿಗಳಿಗೆ ಭರ್ಜರಿ ಗಿಫ್ಟ್!
ಯೆಸ್, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿಜಯಪುರ ಜಿಲ್ಲೆಯ ಫಲಾನುಭವಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನದಲ್ಲಿ ಹೀಗೆ ಒಂದೇ ಮೈದಾನದಲ್ಲಿ ಹತ್ತು ಹಲವು ಮಳಿಗೆಗಳು ಕಂಡು ಬಂದವು. ಆವರಣದ ಒಂದು ಕಡೆ ಆಟೋ, ಬೈಕ್, ಸ್ಕೂಟರ್, ಕಾರು ಹೀಗೆ ಹಲವಾರು ವಾಹನಗಳನ್ನ ಅರ್ಹ ಫಲಾನುಭವಿಗಳಿಗೆ ನೀಡಲಾಯ್ತು.
ವ್ಯಾಪಾರ ಜೋರು
ಜೊತೆಗೆ ಮೇಳದ ಭಾಗವಾಗಿ ವಿಜಯಪುರದ ಮಹಿಳೆಯರ ಸ್ವ ಸಹಾಯ ಗುಂಪುಗಳು ತಯಾರಿಸಿದ ಬ್ಯಾಗ್, ಕರವಸ್ತ್ರ, ಕಿಟಕಿಯ ಕರ್ಟನ್ ಹೀಗೆ ಹಲವಾರು ಗೃಹ ಬಳಕೆ ವಸ್ತುಗಳನ್ನ ತಯಾರಿಸಿ ಮಾರಾಟ ನಡೆಯಿತು. ಅಷ್ಟೇ ಅಲ್ಲದೇ ಗ್ರಾಹಕರಿಗಾಗಿ ಸಿರಿಧಾನ್ಯ ಮೇಳವನ್ನು ಸಹ ಆಯೋಜಿಸಲಾಗಿತ್ತು.
ಇದನ್ನೂ ಓದಿ: Vijayapura: ಕೆಟ್ಟ ಕೆಲಸ, ತಪ್ಪು ಮಾಡಿದ್ರೆ ಇಲ್ಲಿ ಹಸಿ ಬೆತ್ತದಿಂದ ಪೆಟ್ಟು ತಿನ್ಬೇಕಂತೆ!
ರಾಗಿ, ಬರಗು, ಸಜ್ಜೆ, ಸಾವೆ, ಜೋಳ ಸೇರಿದಂತೆ ಸುಮಾರು 20 ಬಗೆಯ ದವಸ ಧಾನ್ಯಗಳು ಇಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇನ್ನು ಅಲಂಕಾರಿಕ ಮೀನುಗಳ ಮತ್ಸ್ಯ ಮೇಳ ಕಣ್ಣು ತುಂಬಿಕೊಂಡ ವಿಜಯಪುರ ಮಂದಿ, ಮೀನು ಸಾಕಾಣಿಕೆ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಕಟ್ಲಾ, ಹುಲ್ಲು ಗೆಂಡೆ, ರೋಹು, ಮೃಗಾಲ್, ಬಾಂಗಡಾ ಹೀಗೆ ಸಾಕಷ್ಟು ಮೀನುಗಳ ಕುರಿತು ಜನರು ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: Success Story: 40 ಸಾವಿರ ಖರ್ಚು, ಒಂದೂವರೆ ಲಕ್ಷ ಆದಾಯ! ಜೇಬು ತುಂಬಿಸುತ್ತಿದೆ ಈ ಬೆಳೆ
ರೈತರಿಗೆ ಅನುಕೂಲ
ರೈತರಿಗೆ ಉಪಯೋಗವಾಗುವ ಕೃಷಿ ಯಂತ್ರೋಪಕರಣಗಳನ್ನ ಸಬ್ಸಿಡಿ ಮತ್ತು ಸಾಲ ರೂಪದಲ್ಲೂ ನೀಡಲು ಕೆಲವು ಕಂಪನಿಗಳು ಮುಂದೆ ಬಂದಿದ್ದು, ಯಂತ್ರದ ಬಳಕೆ ಮತ್ತು ಉಪಯೋಗದ ಕುರಿತು ಮಾಹಿತಿಯನ್ನು ನೀಡಲಾಯಿತು. ಒಟ್ಟಿನಲ್ಲಿ ಎರಡು ದಿನಗಳ ಕಾಲ ನಡೆದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ಸಮ್ಮೇಳನದಿಂದ ಜನರು ತಮಗೆ ಬೇಕಾದ ಪ್ರಯೋಜನ ಪಡೆದುಕೊಂಡರು.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ