• Home
 • »
 • News
 • »
 • vijayapura
 • »
 • Korthi Kolhar Bridge: ಜನಮನ ಸೆಳೆಯುತ್ತಿದೆ ಕೊರ್ತಿ-ಕೊಲ್ಹಾರ ಸೇತುವೆ, ಏನಿದರ ವಿಶೇಷತೆ?

Korthi Kolhar Bridge: ಜನಮನ ಸೆಳೆಯುತ್ತಿದೆ ಕೊರ್ತಿ-ಕೊಲ್ಹಾರ ಸೇತುವೆ, ಏನಿದರ ವಿಶೇಷತೆ?

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ರಾಷ್ಟ್ರೀಯ ಹೆದ್ದಾರಿ 218 ರ ಮೇಲೆ ನಿರ್ಮಿಸಲಾದ ಈ ಸೇತುವೆ ರಾಜ್ಯದ ಅತಿ ಉದ್ದದ ಸೇತುವೆ ಅನ್ನೋ ಹೆಸರಿಗೆ ಪಾತ್ರವಾಗಿದೆ.

 • News18 Kannada
 • Last Updated :
 • Bijapur, India
 • Share this:

  ವಿಜಯಪುರ: ಇದು ಜಿಲ್ಲೆಯಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸೋ ಸೇತುವೆ. ಆದ್ರೆ ಸವಾರರ ಪಾಲಿಗೆ ಇದೊಂಥರ ಸೆಲ್ಫೀ ಸ್ಪಾಟ್. ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳೋದಕ್ಕಂತೂ ಇದು ಸೂಪರ್ ಪ್ಲೇಸ್. ಕಣ್ಣಾಯಿಸಿದಷ್ಟು ದೂರ ನದಿ ಜಲದ ಆಕರ್ಷಣೆ ಹೊಂದಿರೋ ಈ ಸೇತುವೆ ರಾಜ್ಯದ ಹೆಗ್ಗಳಿಕೆಯೂ ಹೌದು.
  ಯೆಸ್, ವಿಜಯಪುರ ಮತ್ತು ಹುಬ್ಬಳ್ಳಿ  (Vijayapura To Hubballi)ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ವಿಶೇಷ ಕೊರ್ತಿ-ಕೊಲ್ಹಾರ್ (Korthi Kolhar Bridge) ಸೇತುವೆಯಿದೆ.


  ರಾಷ್ಟ್ರೀಯ ಹೆದ್ದಾರಿ 218 ರ ಮೇಲೆ ನಿರ್ಮಿಸಲಾದ ಈ ಸೇತುವೆ ರಾಜ್ಯದ ಅತಿ ಉದ್ದದ ಸೇತುವೆ ಅನ್ನೋ ಹೆಸರಿಗೆ ಪಾತ್ರವಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಸರಿ ಸುಮಾರು ಮೂರು ಕಿಲೋಮೀಟರ್ ಉದ್ದವಾಗಿದೆ ಈ ಸೇತುವೆ. ಅಷ್ಟೇ ಅಲ್ಲದೆ ದೇಶದ ಪ್ರಮುಖ 20 ಉದ್ದನೆಯ ಸೇತುವೆಗಳಲ್ಲಿ ಈ ಕೊರ್ತಿ ಕೊಲ್ಹಾರ ಸೇತುವೆ ಕೂಡಾ ಒಂದಾಗಿದೆ.


  ಎಲ್ಲಿಂದ ಎಲ್ಲಿಗೆ ಸಂಪರ್ಕ ಕಲ್ಪಿಸುತ್ತೆ?
  ಈ ಸೇತುವೆಯು ಬಾಗಲಕೋಟೆ ಜಿಲ್ಲೆಯ ಕೊರ್ತಿ ಗ್ರಾಮದಿಂದ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣಕ್ಕೆ ನೇರ ಸಂಪರ್ಕ ಕಲ್ಪಿಸುತ್ತೆ. ಆಲಮಟ್ಟಿಯ ಕೃಷ್ಣಾ ನದಿ ಅಣೆಕಟ್ಟೆಯ ಹಿನ್ನೀರಿಗೆ ಈ ಸೇತುವೆ ನಿರ್ಮಿಸಲಾಗಿದೆ.
  ಇದನ್ನೂ ಓದಿ: Siddeshwar Swamiji: ದಾಸೋಹಿಗೆ ಅಕ್ಕಿಯ ನಮನ! ಇಲ್ಲಿದೆ ನೋಡಿ ಭಾವನಾತ್ಮಕ ವಿಡಿಯೋ


  ಪ್ರವಾಸಿಗರಿಗೆ ನೆಚ್ಚಿನ ತಾಣ
  2016ರಲ್ಲಿ ಸಂಚಾರ ಸಂಚಾರ ಮುಕ್ತವಾ ಈ ಸೇತುವೆಯು ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಸದ್ಯ ಈ ಸೇತುವೆ ಬಾಗಲಕೋಟೆ, ವಿಜಯಪುರ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ನೆಚ್ಚಿನ ತಾಣವೂ ಆಗಿದೆ. ಬೈಕ್ ಸವಾರರಂತೂ ಅಲ್ಲೇ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ರೆ, ಮತ್ತೊಂದಿಷ್ಟು ಹೊತ್ತು ಸೇತುವೆ ಸಮೀಪದಲ್ಲೇ ಕಳೆಯುತ್ತಾರೆ. ಸೆಲ್ಫೀ ಕ್ಲಿಕ್ಕಿಸುತ್ತಾ ಎಂಜಾಯ್ ಮಾಡ್ತಾರೆ.


  ಇದನ್ನೂ ಓದಿ: Winter Food: ಚಳಿಗಾಲದಲ್ಲಿ ಹೆಚ್ಚು ಚಿಪ್ಸ್ ತಿನ್ಬೇಕು ಅನಿಸೋದ್ಯಾಕೆ? ಕೈ ಬೀಸಿ ಕರೆಯೋ ತಿಂಡಿ ಅಂಗಡಿಯ ಸಕ್ಸಸ್ ಸ್ಟೋರಿ

  ಇನ್ನು ಈ ರಸ್ತೆ ಸೇತುವೆ ಮೇಲೆ ನಿಂತು ಕೃಷ್ಣಾ ನದಿಯ ಸೊಬಗು, ಬೆಳಗಿನ ಜಾವದ ಸೂರ್ಯೋದಯ, ಸಂಜೆಯಾಗುತ್ತಲೇ ಸೂರ್ಯಾಸ್ತ ಕಣ್ತುಂಬಿಕೊಳ್ಳಲು ನೂರಾರು ಜನರು ಹಾಜರಾಗ್ತಾರೆ. ಜೊತೆಗೆ ಕಣ್ಣು ಹಾಯಿಸಿದಷ್ಟು ಕೃಷ್ಣ ನದಿಯ ಜಲರಾಶಿಯ ಶಾಂತವಾದ ಹರಿವು ಇನ್ನಷ್ಟು ಮುದ ನೀಡುತ್ತದೆ.


  ವರದಿ: ಪ್ರಶಾಂತ ಹೂಗಾರ, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: