ಬಾಗಲಕೋಟೆ: ಬಾನಂಗಳದಿ ಮೀನುಗಳಂತೆ ತೇಲುತ್ತಿರೋ ಪತಂಗಗಳು. ಡಿಸೈನ್ ಡಿಸೈನ್ ಪಟ ಹಾರಿಸಿ (Kite Festival) ಖುಷಿಪಟ್ಟ ವಿದ್ಯಾರ್ಥಿಗಳು. ಆಗಸದೆತ್ತರಕ್ಕೆ ಹಾರುತ್ತಾ ಕಲರ್ ಫುಲ್ ಚಿತ್ತಾರ (Kite Festival In Bagalkot) ಮೂಡಿಸಿತು ನೋಡಿ ಗಾಳಿಪಟಗಳು.
ಸುಡು ಬಿಸಿಲಲ್ಲೂ ಸಂಭ್ರಮ!
ಯೆಸ್, ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯ ಅಂಬೇಡ್ಕರ್ ಮೈದಾನದಲ್ಲಿ. ಸುಡು ಬಿಸಿಲನ್ನೂ ಲೆಕ್ಕಿಸದೇ ಒಂದು ಕೈಯಲ್ಲಿ ದಾರ, ಇನ್ನೊಂದು ಕೈಯಲ್ಲಿ ಪತಂಗವನ್ನ ಹಿಡಿದುಕೊಂಡು ಹಾರಾಡಿಸುತ್ತ ಮಕ್ಕಳು ಸಂಭ್ರಮಿಸಿದರು. ಆಕಾಶದ ಎತ್ತರಕ್ಕೆ ಏರಿ ಭೂಮಿಯತ್ತ ಗಿರ, ಗಿರನೇ ಸಾಗುತ್ತ ಬಂದು ಜನರನ್ನು ರೋಮಾಂಚನಗೊಳಿಸುತ್ತಿದ್ದ ಪತಂಗಗಳು, ಆಕಾಶದಲ್ಲಿ ಬಣ್ಣ, ಬಣ್ಣದ ಚಿತ್ತಾರ ಬಿಡಿಸಿದವು.
ಪವರ್ ಸ್ಟಾರ್, ಸಿದ್ದಲಿಂಗ ಸ್ವಾಮಿ ದರ್ಶನ
ಬೃಹದಾಕಾರದ ಅಕ್ಟೋಪಸ್, ಡ್ರ್ಯಾಗನ್ ಜೊತೆಗೆ ಬಾನಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮಿಗಳು ಜನರಿಗೆ ದರ್ಶನ ನೀಡಿದರು. ಎರಡು ದಿನಗಳ ಕಾಲ ನಡೆದ ಗಾಳಿಪಟ ಉತ್ಸವದಲ್ಲಿ ಮಕ್ಕಳ ಜೊತೆಗೆ ಹಿರಿಯರು ಕೂಡಾ ಪಟ ಹಾರಿಸಿ ಖುಷಿಪಟ್ಟರು. ವಿವಿಧ ಶಾಲೆಯ ವಿದ್ಯಾರ್ಥಿಗಳು ತಂಡ, ತಂಡವಾಗಿ ಬಂದು ಬಾನಂಗಳದತ್ತ ಚಿತ್ತ ಹರಿಸುವಂತೆ ಮಾಡಿದರು.
ಇದನ್ನೂ ಓದಿ: Vijayapura: ಇಲ್ಲಿ ಐದು ರೂಪಾಯಿಗೆ ಸಿಗುತ್ತೆ ಬೆಳಗಿನ ತಿಂಡಿ! ಜನ ನೋಡಿದ್ರೆ ಜಾತ್ರೆ ನೆನಪಾಗುತ್ತೆ!
ನೂರಾರು ಸ್ಪರ್ಧಿಗಳು
ಬಾಗಲಕೋಟೆ ಮಾತ್ರವಲ್ಲದೇ, ವಿಜಯಪುರ, ಬೆಳಗಾವಿ, ಬೆಂಗಳೂರು, ದೊಡ್ಡಬಳ್ಳಾಪುರ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಾಳುಗಳು ಕೋಟೆನಾಡಿಗೆ ಆಗಮಿಸಿ, ತಮ್ಮ ಕೌಶಲ ಪ್ರದರ್ಶಿಸಿದರು. ಹುಲಿ, ಆನೆ ಮುಖ, ರಿಂಗ್ ಕೈಟ್ ಸೇರಿದಂತೆ ಹತ್ತಾರು ಜನರು ಹೊರುವಷ್ಟು ಬೃಹದಾದ ಪತಂಗಗಳು ನೋಡುಗರ ಕಣ್ಮನ ಸೆಳೆಯಿತು.
ಇದನ್ನೂ ಓದಿ: Bagalkot Viral Video: ಮದುವೆ ಅರಿಶಿನ ಶಾಸ್ತ್ರದಲ್ಲಿ ವಿದೇಶಿ ಪ್ರಜೆಗಳು!
ಒಟ್ಟಿನಲ್ಲಿ ಪತಂಗಗಳ ಹಾರಾಟ ಬಾನಂಗಳದಲ್ಲಿ ಚಿತ್ರ ಚಿತ್ತಾರ ಮೂಡಿಸಿದರೆ, ನೋಡುಗರ ಕಣ್ಣಿಗೆ ಮುದ ನೀಡುವಂತಿತ್ತು.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ