• Home
  • »
  • News
  • »
  • vijayapura
  • »
  • Vijayapura: ರೋಚಕ ಖೋಖೋ ಪಂದ್ಯಾವಳಿಗೆ ಕ್ಷಣಗಣನೆ! ಹೀಗೆ ನೀವೂ ವೀಕ್ಷಿಸಬಹುದು

Vijayapura: ರೋಚಕ ಖೋಖೋ ಪಂದ್ಯಾವಳಿಗೆ ಕ್ಷಣಗಣನೆ! ಹೀಗೆ ನೀವೂ ವೀಕ್ಷಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜಯಪುರ ಜಿಲ್ಲೆಯ ಜನರು ಈ ಕ್ರೀಡಾಕೂಟವನ್ನ ಕಣ್ಣುತುಂಬಿಕೊಳ್ಳಲು ಸಾರ್ವಜನಿಕರಿಗೆ ವ್ಯವಸ್ಥೆಯನ್ನ ಮಾಡಲಾಗಿದೆ.

  • Share this:

    ವಿಜಯಪುರ ನಗರದಲ್ಲಿ (Vijayapura News) ನವೆಂಬರ್ 9 ಮತ್ತು 10 ರಂದು ಎರಡು ದಿನಗಳ ಕಾಲ ಪಿಯು ಕಾಲೇಜುಗಳ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ (Kho Kho Tournament) ನಡೆಯಲಿದೆ.  ಹೊನಲು ಬೆಳಕಿನ ಖೋಖೋ ಪಂದ್ಯಾವಳಿ ಇದಾಗಿದ್ದು, ಕ್ರೀಡಾಕೂಟಕ್ಕಾಗಿ 6 ಮೈದಾನಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಕ್ರೀಡಾಕೂಟದಲ್ಲಿ 32 ಶೈಕ್ಷಣಿಕ ಜಿಲ್ಲೆಗಳಿಂದ 32 ಬಾಲಕ ಮತ್ತು 32 ಬಾಲಕಿಯರ ತಂಡಗಳ 863 ಕ್ರೀಡಾಪಟುಗಳು ಹಾಗೂ 80 ತರಬೇತಿದಾರರು ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ. ಕ್ರೀಡಾಪಟುಗಳು ಮತ್ತು ಸಿಬ್ಬಂದಿಗಾಗಿ ಬಿಎಲ್​ಡಿಇ ಸಂಸ್ಥೆಯ ವತಿಯಿಂದ ಮೂರು ದಿನಗಳ ಕಾಲ ಕ್ರೀಡಾಪಟುಗಳಿಗಾಗಿ ವಿಜಯಪುರ ಶೈಲಿಯ (Vijayapura Food) ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿದೆ.


    ಇದೇ ಮೊದಲ ಬಾರಿಗೆ ಈ ಪಂದ್ಯಾವಳಿಯ ಆಯೋಜಕತ್ವ ವಿಜಯಪುರ ಜಿಲ್ಲೆಗೆ ಸಿಕ್ಕಿದೆ. ಬಿಎಲ್​ಡಿಇ ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಾವಳಿ ಯಶಸ್ಸಿಗಾಗಿ 12 ನಾನಾ ಸಮಿತಿಗಳನ್ನ ರಚಿಸಲಾಗಿದೆ.


    ಇದನ್ನೂ ಓದಿ: Vijayapura: ವರ್ಷದ 6 ತಿಂಗಳು ಮಾತ್ರ ಇವರು ರೈತರು!


    ಅಲ್ಲದೇ, ಕ್ರೀಡಾಕೂಟದ ಯಶಸ್ಸಿಗಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಪಂದ್ಯಾವಳಿಗಾಗಿ ಬಿಎಲ್​ಡಿಇ ಸಂಸ್ಥೆಯ ವತಿಯಿಂದ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಐ. ಎಸ್. ಕಾಳಪ್ಪನವರ ತಿಳಿಸಿದ್ದಾರೆ.


    ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆ
    ಈ ಕ್ರೀಡಾಕೂಟಕ್ಕೆ ಆಗಮಿಸುವ ಕ್ರೀಡಾಪಟುಗಳು ಮತ್ತು ತರಬೇತಿದಾರರಿಗೆ ವಿಜಯಪುರ ನಗರದ 8 ನಾನಾ ಪಿಯು ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು, ಎಸ್. ಬಿ. ಆರ್ಟ್ಸ್ ಮತ್ತು ಕೆಸಿಪಿ ಸೈನ್ಸ್ ಕಾಲೇಜು, ಬಿ ಎಲ್ ಡಿ ಇ ನರ್ಸಿಂಗ್ ಕಾಲೇಜು, ರೂಪಾದೇವಿ ಪಿಯು ಕಾಲೇಜು, ಚೇತನಾ ಪಿಯು ಕಾಲೇಜು, ಚೈತನ್ಯಾ ಪಿಯು ಕಾಲೇಜು, ಎಕ್ಸಲೆಂಟ್ ಪಿಯು ಕಾಲೇಜು ಮತ್ತು ತುಂಗಳ ಸೈನ್ಸ್ ಪಿಯು ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.


    ಕ್ರೀಡಾಕೂಟ ವಿಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ
    ವಿಜಯಪುರ ಜಿಲ್ಲೆಯ ಜನರು ಈ ಕ್ರೀಡಾಕೂಟವನ್ನ ಕಣ್ಣುತುಂಬಿಕೊಳ್ಳಲು ಸಾರ್ವಜನಿಕರಿಗೆ ವ್ಯವಸ್ಥೆಯನ್ನ ಮಾಡಲಾಗಿದೆ. ಕ್ರೀಡಾಂಗಣಕ್ಕೆ ಬರುವ ಆಸಕ್ತರು ದಯವಿಟ್ಟು ಶಾಂತತೆಯನ್ನ ಕಾಪಾಡಿಕೊಳ್ಳುವುದರೊಂದಿಗೆ ಕ್ರೀಡಾಪಟುಗಳನ್ನ ಹುರಿದುಂಬಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.


    ಆಗಮಿಸಲು ಬಸ್​ಗಳ ವ್ಯವಸ್ಥೆ
    ಅಲ್ಲದೇ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ಕ್ರೀಡಾಂಗಣಕ್ಕೆ ಆಗಮಿಸಲು ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.


    ಇದನ್ನೂ ಓದಿ: Good News: ಅಯ್ಯಪ್ಪ ಭಕ್ತರಿಗೆ ಶುಭಸುದ್ದಿ; ಉತ್ತರ ಕರ್ನಾಟಕದಿಂದ ವಿಶೇಷ ರೈಲು ಘೋಷಣೆ


    ಈ ಕ್ರೀಡಾಕೂಟಕ್ಕಾಗಿ ಸರಕಾರದಿಂದ ರೂ. 11.75 ಲಕ್ಷ ಅನುದಾನ ಬಂದಿದೆ. ಈ ಹಣವನ್ನು ಕ್ರೀಡಾಪಟುಗಳು ಸಿಬ್ಬಂದಿಯ ಟಿಎ ಮತ್ತು ಡಿಎಗಾಗಿ ವ್ಯಯಿಸಲಾಗುವುದು. ಇನ್ನೂ ರೂ. 1 ಲಕ್ಷ ಅನುದಾನದ ಅಗತ್ಯವಿದ್ದು ಸರಕಾರದಿಂದ ಈ ಹಣ ಪಡೆಯಲು ಪತ್ರ ಬರೆಯಲಾಗಿದೆ ಎಂದು ವಿಜಯಪುರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್. ಎನ್. ಬಗಲಿ ಮಾಹಿತಿ ನೀಡಿದರು.


    ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: