• Home
  • »
  • News
  • »
  • vijayapura
  • »
  • Startup Success Story: ಗಾಣದಿಂದ ಎಣ್ಣೆ ಉತ್ಪಾದಿಸೋ ಬಾಗಲಕೋಟೆಯ ಸ್ಟಾರ್ಟ್​ಅಪ್; ಸಾಂಪ್ರದಾಯಕ ಉದ್ಯಮಕ್ಕೆ ಆಧುನಿಕ ಟಚ್

Startup Success Story: ಗಾಣದಿಂದ ಎಣ್ಣೆ ಉತ್ಪಾದಿಸೋ ಬಾಗಲಕೋಟೆಯ ಸ್ಟಾರ್ಟ್​ಅಪ್; ಸಾಂಪ್ರದಾಯಕ ಉದ್ಯಮಕ್ಕೆ ಆಧುನಿಕ ಟಚ್

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಕೆಂಚನ್ನವರ ಗಾಣದ ಎಣ್ಣೆ ಬಾಗಲಕೋಟೆ ಜಿಲ್ಲೆಯಷ್ಟೇ ಅಲ್ಲದೇ, ಬೆಂಗಳೂರು, ಮೈಸೂರು, ಚೆನ್ನೈ, ದೆಹಲಿ ಹೀಗೆ ವಿವಿಧೆಡೆ ಸರಬರಾಜಾಗ್ತಿದೆ. ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಅಂತ ಹಿಂಡಿಯನ್ನೂ ತಯಾರಿಸಲಾಗ್ತಿದೆ.

  • News18 Kannada
  • Last Updated :
  • Bagalkot, India
  • Share this:

    ಬಾಗಲಕೋಟೆ: ಒಂದು ಸೆಕೆಂಡೂ ಬಿಡುವಿಲ್ಲದಂತೆ ತಿರುಗೋ ಗಾಣಗಳು, ಕುಸುಬಿ, ಶೇಂಗಾ, ಕೊಬ್ಬರಿ ಹೀಗೆ ಯಾವ ಎಣ್ಣೆ ಬೇಕು? ಎಲ್ಲಾ ಎಣ್ಣೆಗಳೂ ತಯಾರಾಗೋದು ಇಲ್ಲೇ! ನಿಮ್ಗೆ ಎಷ್ಟು ಬೇಕು ಅಷ್ಟೇ ಪರಿಶುದ್ಧ ಎಣ್ಣೆನ ಮನೆಗೊಯ್ಯಬಹುದು, ಅಂದ್ಹಾಗೆ ಇದು ಪರಿಶುದ್ಧ ಎಣ್ಣೆ ತಯಾರಿಸೋ ಗ್ರಾಮೀಣ ಸ್ಟಾರ್ಟ್ಅಪ್ಒಂದರ (Rural Startup Success Story) ಸಕ್ಸಸ್ ಸ್ಟೋರಿ. ಬಾಗಲಕೋಟೆಯ (Bagalakote News) ನವನಗರದಲ್ಲಿರುವ ಕೆಂಚನ್ನವರ ಗಾಣದ ಅಡುಗೆ ಎಣ್ಣೆ ಅಂದ್ರೆ ರಾಜ್ಯ, ಹೊರ ರಾಜ್ಯಗಳಲ್ಲೂ ಭಾರೀ ಫೇಮಸ್ಸು.


    ಹಿಂದೆ ಇಲ್ಲಿ ಜೋಡೆತ್ತುಗಳನ್ನ ಕಟ್ಟಿ ಗಾಣದ ಎಣ್ಣೆಯನ್ನು ತಗೆಯಲಾಗ್ತಿತ್ತು. ಈಗ ಎತ್ತುಗಳ ಬದಲು ವಿದ್ಯುತ್ ಚಾಲಿತ ಕಟ್ಟಿಗೆ ಗಾಣದಿಂದ ಎಣ್ಣೆಯನ್ನ ತೆಗೆಯಲಾಗ್ತಿದೆ. ಕೆಂಚನ್ನವರ ಗಾಣದ ಎಣ್ಣೆ ಅಂಗಡಿ ಮಾಲೀಕರು ಕಳೆದ ಮೂರ್ನಾಲ್ಕು ತಲೆಮಾರುಗಳಿಂದ ಈ ವ್ಯಾಪಾರವನ್ನ ನಡೆಸ್ತಿದ್ದಾರೆ. ಸದ್ಯ ಅಂಗಡಿ ಮಾಲೀಕರಾದ ಶಿವರಾಜ್ ಕೆಂಚಣ್ಣವರ ಕಲಬೆರಕೆ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸ್ತಾ ಸಾಂಪ್ರದಾಯಿಕ ರೀತಿಯಲ್ಲಿ ಆಹಾರದ ಎಣ್ಣೆಯನ್ನ ತಯಾರಿಸ್ತಿದ್ದಾರೆ.


    ದೂರ ದೂರದ ಊರಿಗಳಿಂದಲೂ ಹುಡುಕಿ ಬರ್ತಾರೆ
    ಕೆಲ ವರ್ಷಗಳ ಹಿಂದೆ ಗಾಣದ ಪರಿಶುದ್ಧ ಎಣ್ಣೆ ಹಲವೆಡೆ ಸಿಗ್ತಿತ್ತು. ಆದರೆ ಈಗ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಕಲಬೆರಕೆ ಎಣ್ಣೆ ಅಡುಗೆ ಮನೆಗೆ ನುಸುಳುತ್ತಿದೆ. ಆದ್ರೆ ಕೆಂಚನ್ನವರ ಗಾಣದ ಎಣ್ಣೆ ಮಿಲ್​ನಲ್ಲಿ ಪರಿಶುದ್ಧ ಅಡುಗೆ ಎಣ್ಣೆಯನ್ನ ಉತ್ಪಾದಿಸಲಾಗ್ತಿದೆ. ಇದೇ ಕಾರಣಕ್ಕೆ ದೂರ ದೂರದ ಊರುಗಳಿಂದಲೂ ಜನರು ಕೆಂಚನ್ನವರ ಎಣ್ಣೆ ಖರೀದಿಸೋಕೆ ಹುಡುಕಿ ಬರ್ತಿದ್ದಾರೆ.


    ಇದನ್ನೂ ಓದಿ: Positive Story: ಹೇರ್ ಕಟಿಂಗ್ ಸಲೂನ್​ನಲ್ಲಿ ಲೈಬ್ರರಿ! ಇದು ಕನ್ನಡಾಭಿಮಾನಿಯ ವಿಶಿಷ್ಟ ಪ್ರಯತ್ನ


    ಹಿಂಡಿಯೂ ತಯಾರಿ
    ಕೆಂಚನ್ನವರ ಗಾಣದ ಎಣ್ಣೆ ಬಾಗಲಕೋಟೆ ಜಿಲ್ಲೆಯಷ್ಟೇ ಅಲ್ಲದೇ, ಬೆಂಗಳೂರು, ಮೈಸೂರು, ಚೆನ್ನೈ, ದೆಹಲಿ ಹೀಗೆ ವಿವಿಧೆಡೆ ಸರಬರಾಜಾಗ್ತಿದೆ. ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಅಂತ ಹಿಂಡಿಯನ್ನೂ ತಯಾರಿಸಲಾಗ್ತಿದೆ. ಈ ಎರಡೂ ಉತ್ಪನ್ನಗಳಿಗೂ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದೆ.


    ಇದನ್ನೂ ಓದಿ: Positive Story: ಲಕ್ಷ ಲಕ್ಷ ಸ್ವಂತ ಹಣದಲ್ಲಿ ಊರು ಕ್ಲೀನ್ ಮಾಡೋ ವಿಜಯಪುರದ ಯುವಕರು!


    ಎಷ್ಟೇ ಆಧುನಿಕತೆ ಅಳವಡಿಸಿಕೊಂಡ್ರೂ ಅಡುಗೆ ಎಣ್ಣೆ ವಿಷ್ಯದಲ್ಲಿ ಕಾಂಪ್ರಮೈಸ್ ಆದ್ರೆ ಆರೋಗ್ಯ ಕೆಟ್ಟಂತೆ. ಇದನ್ನ ಅರಿತು ಹಲವರು ಪರಿಶುದ್ಧ ಗಾಣದ ಎಣ್ಣೆ ಹುಡುಕಿ ಬರ್ತಿದ್ದಾರೆ. ಸಾಂಪ್ರದಾಯಿಕ ಉದ್ಯಮಕ್ಕೆ ಆಧುನಿಕ ಟಚ್ ನೀಡಿದ ಬಾಗಲಕೋಟೆಯ ಕೆಂಚನ್ನವರ ಗಾಣದ ಎಣ್ಣೆಯೂ ಸಕ್ಸಸ್​ನತ್ತ ಹೆಜ್ಜೆ ಹಾಕುತ್ತಿದೆ.


    ವರದಿ: ಪ್ರಶಾಂತ ಹೂಗಾರ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: