ವಿಜಯಪುರ: ಕತ್ನಳ್ಳಿ ಗ್ರಾಮದ ಗುರು ಚಕ್ರವರ್ತಿ ಸದಾಶಿವ ಜಾತ್ರೆ ಮಾರ್ಚ್ 21 ರಿಂದ ಐದು ದಿವಸಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ ಹಾಗೂ ಭಕ್ತರ ಅಭಿವೃದ್ಧಿಗಾಗಿ ನಡೆಯುವ ಏಕೈಕ ಜಾತ್ರೆ ಇದಾಗಿದ್ದು, ಅಪಾರ ಸಂಖ್ಯೆಯ ಭಕ್ತಗಣವು ಕತ್ನಳ್ಳಿಯ ಗುರು ಚಕ್ರವರ್ತಿ ಸದಾಶಿವ ಜಾತ್ರೆ (Guru Chakravarti Sadashiva Jatra) ಸಾಕ್ಷಿಯಾಗಲಿದೆ.
ಊಟ ಬಡಿಸುವಲ್ಲಿ ಸಂಪ್ರದಾಯ
ಮಠದಲ್ಲಿ ನಡೆಯುವ ಜಾತ್ರೆಯ ಎಲ್ಲ ಚಟುವಟಿಕೆಗಳು ಭಕ್ತರಿಂದಲೇ ನಡೆಯುತ್ತದೆ. ಆಹಾರ ಪದಾರ್ಥ ನೀಡುವುದು, ಆಹಾರ ತಯಾರಿ, ಊಟ ಬಡಿಸುವುದು ಸೇರಿದಂತೆ ಎಲ್ಲವನ್ನು ಭಕ್ತರೇ ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುತ್ತಾರೆ. ಇಲ್ಲಿ ಮಹಿಳೆಯರಿಗೆ ಮಹಿಳೆಯರೇ ಹಾಗೂ ಪುರುಷರಿಗೆ ಪುರುಷರೇ ಊಟ ಬಡಿಸುವ ಸಂಪ್ರದಾಯವಿದೆ.
ಯಾವಾಗ ಜಾತ್ರೆ?
ಮಾರ್ಚ್ 21 ರಿಂದ ಆರಂಭವಾಗುವ ಜಾತ್ರಾ ಮಹೋತ್ಸವವು ಮಾರ್ಚ್ 25 ರವರೆಗೆ ಸಡಗರ ಸಂಭ್ರಮದಿಂದ ನಡೆಯಲಿದೆ.
ಇದನ್ನೂ ಓದಿ: Vijayapura: ರಂಗೋಲಿ ಬಿಡಿಸಿ, ಬಂಪರ್ ಬಹುಮಾನ ಗೆಲ್ಲಿ!
ಜ್ಞಾನ ದೀಪೋತ್ಸವ
ಇದೇ ಮೊದಲ ಬಾರಿಗೆ ಸದಾಶಿವ ಜಾತ್ರಾ ಮಹೋತ್ಸವದಲ್ಲಿ ಜ್ಞಾನ ದೀಪೋತ್ಸವ ನಡೆಯಲಿದೆ. ಜ್ಞಾನ ದೀಪೋತ್ಸವದ ವಿಶೇಷ ಎಂದರೆ ಗ್ರಾಮದ ಪ್ರತಿ ಮನೆ ಹಾಗೂ ವಿವಿಧೆಡೆ ನೆಲೆಸಿರುವ ಭಕ್ತರ ಮನೆಗಳಲ್ಲಿ ದೀಪವನ್ನು ಜಾತ್ರೆ ಮುಗಿಯುವವರೆಗೆ ಬೆಳಗಿಸಲಿದ್ದಾರೆ. ಅಜ್ಞಾನದಿಂದ ಕತ್ತಲೆ ಹೋಗಿ ಸುಜ್ಞಾನ ಬೆಳಗಲಿ ಎನ್ನುವ ಉದ್ದೇಶವಿದೆ. ಜ್ಞಾನ ದೀಪೋತ್ಸವ ಹಚ್ಚುವುದೆಂದರೆ ಪ್ರತಿಯೊಬ್ಬರಲ್ಲಿ ಹುಚ್ಚು ಇರಬೇಕು. ಅದು ಹೇಗೆ ಇರಬೇಕು ಎಂದರೆ ಮತ್ತೊಬ್ಬರು ಮೆಚ್ಚುವಂತಿರಬೇಕು ಎಂದು ಶ್ರೀಗಳು ಕರೆ ನೀಡಿದ್ದಾರೆ.
ಇದನ್ನೂ ಓದಿ: Success Story: 40 ಸಾವಿರ ಖರ್ಚು, ಒಂದೂವರೆ ಲಕ್ಷ ಆದಾಯ! ಜೇಬು ತುಂಬಿಸುತ್ತಿದೆ ಈ ಬೆಳೆ
ಜಾತ್ರೆಯ ವಿಶೇಷತೆ ಏನು?
ಐದು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಪ್ರತಿ ದಿನ ವಿವಿಧ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ (ಮಾರ್ಚ್ 21) ಬೆಳಗ್ಗೆ ಜಾನುವಾರು ಜಾತ್ರೆ, ಕೃಷಿ ಮೇಳ, ಕೆಸರಿನಲ್ಲಿ ಓಟ, ಜ್ಞಾನ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮಾರ್ಚ್ 22ಕ್ಕೆ ಕೃತ ಗದ್ದುಗೆ ರುದ್ರಾಭಿಷೇಕ, ಕುಂಬಾಭಿಷೇಕ, ರಸಪ್ರಶ್ನೆ ಸ್ಪರ್ಧೆ, ಮಾರ್ಚ್ 23ಕ್ಕೆ ಪಲ್ಲಕ್ಕಿ ಉತ್ಸವ, ಉಚಿತ ಆರೋಗ್ಯ ಶಿಬಿರ, ರಥೋತ್ಸವ ಜರುಗಲಿದೆ ಮಾರ್ಚ್ 24ಕ್ಕೆ ಸರಳ ಸಾಮೂಹಿಕ ವಿವಾಹ, ಮಾರ್ಚ್ 25ಕ್ಕೆ ಭಾರ ಎತ್ತುವ ಸ್ಪರ್ಧೆ, ಸುಪ್ರಸಿದ್ಧ ಜಂಗಿ ಕುಸ್ತಿಗಳು, ಜಾನುವಾರುಗಳಿಗೆ ಪ್ರಶಸ್ತಿ, ಬಹುಮಾನ ವಿತರಣೆ ನಡೆಯಲಿದೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ