Vijayapura: ದುಬೈನಲ್ಲಿ ಉದ್ಯೋಗಾವಕಾಶ! ಈಗಲೇ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ!

ಉದ್ಯೋಗಾಕಾಂಕ್ಷಿಗಳಿಗೆ ಉಚಿತ ತರಬೇತಿ ಸೌಲಭ್ಯದೊಂದಿಗೆ, ನಿರ್ದಿಷ್ಠ ವೇತನ, ಉಚಿತ ಊಟ, ವಸತಿ, ಪ್ರಯಾಣ ಭತ್ಯೆ, ವೈದ್ಯಕೀಯ ಸೌಲಭ್ಯ, ವೀಸಾ ವ್ಯವಸ್ಥೆ, ವಿಮಾನ ಪ್ರಯಾಣ, ಹೆಚ್ಚುವರಿ ಸಮಯ ಭತ್ಯೆ ಮತ್ತು ಇತರೆ ಸೌಲಭ್ಯಗಳನ್ನು ಸಹ ಸದರಿ ಪ್ರತಿಷ್ಠಿತ ಕಂಪನಿಯು ಒದಗಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿಜಯಪುರ: ಅಂತಾರಾಷ್ಟ್ರೀಯ ವಲಸೆ ಕೇಂದ್ರ ಕರ್ನಾಟಕವನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಡಿ ಸ್ಥಾಪಿಸಲಾಗಿದೆ. ಅದರಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು (Karnataka Skill Development Board) ಕೇಂದ್ರ ಸರ್ಕಾರದ ವಿದೇಶಾಂಗ ಮಂತ್ರಾಲಯದಿಂದ ಅಧಿಕೃತ ವಿದೇಶಿ ನೇಮಕಾತಿ ಏಜೆನ್ಸಿಯಾಗಿ ನೋಂದಣಿಗೊಂಡು ಕಾರ್ಯನಿರ್ವಹಿಸುತ್ತಿದೆ. ಅದರಂತೆ ಕರ್ನಾಟಕ ರಾಜ್ಯದ ಕಾರ್ಮಿಕರಿಗೆ (Karnataka Labours) ಉತ್ತಮ ರೀತಿಯ ಉದ್ಯೋಗಾವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ನಿಗಮವು ವಿದೇಶದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳನ್ನು (Foreign Jobs) ಬಳಸಿಕೊಳ್ಳಲು ಸುವರ್ಣ ಅವಕಾಶವನ್ನು ಒದಗಿಸುತ್ತಿದೆ.  ಉದ್ಯೋಗದ ಸ್ಥಳದುಬೈಯ ಪ್ರತಿಷ್ಠಿತ ಕಂಪನಿಗಳು
  ವಯೋಮಿತಿ18 ರಿಂದ 23 ವರ್ಷ
  ಅರ್ಜಿ ಸಲ್ಲಿಸಲು ಕೊನೆಯ ದಿನಆಗಸ್ಟ್ 7
  ಸಂಬಳಅರ್ಹತೆಗೆ ಅನುಗುಣವಾಗಿ
  ಹೇಗೆ ಅರ್ಜಿ ಸಲ್ಲಿಸುವುದು?ಇಲ್ಲಿ ಕ್ಲಿಕ್ ಮಾಡಿ

  ದುಬೈನ ಪ್ರತಿಷ್ಠಿತ ಕಂಪನಿಯು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತದೆ. ಈ ಪ್ರಸ್ತಾವನೆಯಂತೆ 2 ವರ್ಷಕ್ಕಿಂತ ಹೆಚ್ಚು ಅನುಭವ ಉಳ್ಳವರಿಗೆ 24 ರಿಂದ 34 ವಯೊಮಿತಿ ಹಾಗೂ ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ 18 ರಿಂದ 23 ವರ್ಷಗಳನ್ನು ನಿಗದಿಪಡಿಸಲಾಗಿದ್ದು, ನುರಿತ ಉದ್ಯೋಗಾಕಾಂಕ್ಷಿಗಳು ಟೈಲ್ಸ್ ಮ್ಯಾಸನ್ಸ್, ಬ್ಲಾಕ್ ಮ್ಯಾಸನ್ಸ್, ಮಾರ್ಬಲ್ ಮ್ಯಾಸನ್ಸ್ ವೃತ್ತಿಗಳಿಗೆ ತಲಾ 100 ರಂತೆ ಒಟ್ಟು 300 ಹುದ್ದೆಗಳಿವೆ.

  ಈ ಸೌಲಭ್ಯಗಳೂ ಇವೆ
  ಉದ್ಯೋಗಾಕಾಂಕ್ಷಿಗಳಿಗೆ ಉಚಿತ ತರಬೇತಿ ಸೌಲಭ್ಯದೊಂದಿಗೆ, ನಿರ್ದಿಷ್ಠ ವೇತನ, ಉಚಿತ ಊಟ, ವಸತಿ, ಪ್ರಯಾಣ ಭತ್ಯೆ, ವೈದ್ಯಕೀಯ ಸೌಲಭ್ಯ, ವೀಸಾ ವ್ಯವಸ್ಥೆ, ವಿಮಾನ ಪ್ರಯಾಣ, ಹೆಚ್ಚುವರಿ ಸಮಯ ಭತ್ಯೆ ಮತ್ತು ಇತರೆ ಸೌಲಭ್ಯಗಳನ್ನು ಸಹ ಸದರಿ ಪ್ರತಿಷ್ಠಿತ ಕಂಪನಿಯು ಒದಗಿಸುತ್ತದೆ.

  ಯಾರನ್ನು ಸಂಪರ್ಕಿಸಬೇಕು?
  ಆಸಕ್ತ ಅಭ್ಯರ್ಥಿಗಳು ಆಗಸ್ಟ್ 7ರೊಳಗೆ ಟೆಕ್ನಿಕಲ್ ಟ್ರೆನಿಂಗ್ ಇನ್‌ಸ್ಟಿಟ್ಯೂಟ್ ಪ್ರೈವೆಟ್ ಲಿಮಿಟೆಡ್ ಸರ್ವೇ ನಂ.3 ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ ಸೆಕೆಂಡ್ ಸ್ಟೇಜ್‌ನಿಯರ್ ಬೆಲೂರು ಕ್ರಾಸ್, ಮೈಲಾರಲಿಂಗ ದಾಲ್‌ಮಿಲ್ ಕಂಪೌಂಡ್ ಉಪಲೋನ ಕಲಬುರಗಿಯಲ್ಲಿ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

  ಆಸಕ್ತರು ಲಿಂಕ್ ಮೂಲಕ ನೋಂದಾಯಿಸಬಹುದು. ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

  ಹೆಚ್ಚಿನ ಮಾಹಿತಿಗಾಗಿ ಜಾಲತಾಣಕ್ಕೆ ಭೇಟಿ ನೀಡಬಹುದು. ವೆಬ್​​ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

  ಇದನ್ನೂ ಓದಿ: Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

  ವಿಳಾಸ ಇಲ್ಲಿದೆ
  ಅಥವಾ ನೇರವಾಗಿ ಜಿಲ್ಲಾಕೌಶಲ್ಯಾಭಿವೃದ್ಧಿ ಕಚೇರಿ, ರಾಘವೇಂದ್ರ ಕಾಲೋನಿ, ಮಹಾನಗರ ಪಾಲಿಕೆ ಎದುರು, ಬಾಗಲಕೋಟ ರಸ್ತೆ ವಿಜಯಪುರ ಅಥವಾ ಕಚೇರಿ.

  ದೂರವಾಣಿ ಸಂಖ್ಯೆ 08352-297019, 9353433320

  ಇದನ್ನೂ ಓದಿ: Vijayapura: ಹೆಣ್ಮಕ್ಳೇ ಸ್ಟ್ರಾಂಗು ಗುರು! ಈ ವಿದ್ಯಾರ್ಥಿನಿಯರು ಡ್ರೋನ್​ನ್ನೂ ಹಾರಿಸ್ತಾರೆ!

  ಇ ಮೇಲ್‌ವಿಳಾಸ ಇಲ್ಲಿದೆ: bijapurmicdc1@gmail.com, bijapurmicdc2@gmail.com ಸಂಪರ್ಕಿಸಿ ಸೇವೆಗಳನ್ನು ಪಡೆಯಬಹುದು ಎಂದು ಜಿಲ್ಲಾಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀಗುರುಪಾದಯ್ಯ ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
  Published by:guruganesh bhat
  First published: