• Home
 • »
 • News
 • »
 • vijayapura
 • »
 • Vijayapura: ಭ್ರಷ್ಟರ ವಿರುದ್ಧ ದೂರು ನೀಡಲು ಸುವರ್ಣಾವಕಾಶ

Vijayapura: ಭ್ರಷ್ಟರ ವಿರುದ್ಧ ದೂರು ನೀಡಲು ಸುವರ್ಣಾವಕಾಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ಕಾರಿ ಕಚೇರಿಗಳಲ್ಲಿ ಜನರ ಅಧಿಕೃತ ಕೆಲಸಗಳನ್ನು ಮಾಡಿಕೊಡಲು ಲಂಚ ಕೇಳುತ್ತಿದ್ದರೆ ಮತ್ತು ವಿನಾಕಾರಣ ಅಧಿಕಾರಿಗಳು ವಿಳಂಬ ಮಾಡುತ್ತಿದ್ದರೆ ಅಹವಾಲು ಸಲ್ಲಿಸಬಹುದಾಗಿದೆ.

 • News18 Kannada
 • Last Updated :
 • Bijapur, India
 • Share this:

  ವಿಜಯಪುರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಅಕ್ಟೋಬರ್ 31ರಂದು ವಿಜಯಪುರ ಜಿಲ್ಲೆಯ (Vijayapura News) ವಿವಿಧ ತಾಲೂಕಾ ಕೇಂದ್ರಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಲಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯದಲ್ಲಿ ಅಕ್ಟೋಬರ್ 31ರ ಬೆಳಗ್ಗೆ 10.30ಕ್ಕೆ ಆರಂಭವಾಗಿ ಅಪರಾಹ್ನ 2 ಗಂಟೆಯ ವರೆಗೆ ಕರ್ನಾಟಕ ಲೋಕಾಯುಕ್ತ (Karnataka Lokayukta) ವಿಜಯಪುರ ಪೊಲೀಸ್ ಉಪ ಅಧೀಕ್ಷಕರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.

  ಇಂಡಿ ಪ್ರವಾಸಿ ಮಂದಿರದಲ್ಲಿ ಅಕ್ಟೋಬರ್ 31ರ ಬೆಳಗ್ಗೆ 10.30 ರಿಂದ ಮದ್ಯಾಹ್ನ 2 ಗಂಟೆಯವರೆಗೆ ಪೊಲೀಸ್ ನೀರಿಕ್ಷಕರು ಅಹವಾಲು ಸ್ವೀಕರಿಸಲಿದ್ದಾರೆ.


  ಕೋಲ್ಹಾರದ ತಹಸೀಲ್ದಾರ ಕೇಂದ್ರದಲ್ಲಿ ಈ ಸಮಯಕ್ಕೆ
  ಕೋಲ್ಹಾರದ ತಹಸೀಲ್ದಾರ ಕಾರ್ಯಾಲಯದಲ್ಲಿ ಅಕ್ಟೋಬರ್ 31ರ ಬೆಳಗ್ಗೆ 10.30 ರಿಂದ ಮದ್ಯಾಹ್ನ 2 ಗಂಟೆಯವರೆಗೆ ಪೊಲೀಸ್ ನೀರಿಕ್ಷಕರು ಅಹವಾಲು ಸ್ವೀಕರಿಸಲಿದ್ದಾರೆ.
  ವಿಜಯಪುರ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಸಾರ್ವಜನಿಕರಿಂದ ಅಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2ಗಂಟೆಯವರೆಗೆ ಅಧಿಕಾರಿಗಳು ಅರ್ಜಿ ಸ್ವೀಕರಿಸಲಿದ್ದಾರೆ.


  ಇದನ್ನೂ ಓದಿ: Lumpy Skin Disease: ದನಕರು ರಕ್ಷಣೆಗೆ ವಿಜಯನಗರದಲ್ಲಿ ಅಜ್ಜಿ ಆಚರಣೆ!


  ಸರ್ಕಾರಿ ಕಚೇರಿಗಳಲ್ಲಿ ಜನರ ಅಧಿಕೃತ ಕೆಲಸಗಳನ್ನು ಮಾಡಿಕೊಡಲು ಲಂಚ ಕೇಳುತ್ತಿದ್ದರೆ ಮತ್ತು ವಿನಾಕಾರಣ ಅಧಿಕಾರಿಗಳು ವಿಳಂಬ ಮಾಡುತ್ತಿದ್ದರೆ ಜನರಿಗೆ ಇನ್ನಿತರೆ ತೊಂದರೆಯನ್ನ ನೀಡುತ್ತಿರುವ ಅಧಿಕಾರಿಗಳಿದ್ದರೆ ಅಂತವರ ಬಗ್ಗೆ ಸಾರ್ವಜನಿಕರು ದೂರುಗಳನ್ನ ನೀಡಬಹುದಾಗಿದೆ.


  ಇದನ್ನೂ ಓದಿ: Ilkal Saree Special: ಇಳಕಲ್ ಸೀರೆ ಹೀಗೆ ತಯಾರಾಗುತ್ತೆ! ನೀವೂ ಮಿರಮಿರ ಮಿಂಚಿ!


  ದೂರು ನೀಡಿದ ದೂರುದಾರರ ಹೆಸರುಗಳನ್ನ ಗೌಪ್ಯವಾಗಿಡಲಾಗುವುದು. ಹೆಚ್ಚಿನ ಮಾಹಿತಿಗೆ ಲೋಕಾಯುಕ್ತ ಕಚೇರಿಯ ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನ ಪಡೆಯಬಹುದು. ಕಚೇರಿ ಸಂಖ್ಯೆ 08352-255333 . ಈ ಮಾಹಿತಿಯನ್ನ ಕರ್ನಾಟಕ ಲೋಕಾಯುಕ್ತ ವಿಜಯಪುರ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


  ವರದಿ ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ಡಿಜಿಟಲ್ ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: