Vijayapura: ಒಂದೇ ರೂಪಾಯಿಗೆ ವಿಧವಿಧದ ಸಸಿ! ಹೇಗೆ, ಎಲ್ಲಿ ಸಿಗುತ್ತೆ? ವಿಡಿಯೋ ನೋಡಿ

ರೈತರಿಗಾಗಿಯೇ 10 ಲಕ್ಷ ವಿವಿಧ ತಳಿಗಳ ಸಸಿಗಳನ್ನು ವಿತರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಈಗಾಗಲೇ ಟೋಕನ್ ಮಾದರಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಗಿಡಗಳನ್ನು ವಿತರಿಸುತ್ತಿದೆ. ಕನಿಷ್ಟ ₹1 ಕ್ಕೂ ಇಲ್ಲಿ ದುಬಾರಿ ಬೆಲೆಯ ಸಸಿಗಳನ್ನು ಪಡೆಯಬಹುದಾಗಿದೆ.

ಸಾಂದರ್ಭಿಕ

ಸಾಂದರ್ಭಿಕ ಚಿತ್ರ

 • Share this:

  ವಿಜಯಪುರ ಜಿಲ್ಲೆಯ ಆಲಮಟ್ಟಿಯ ಕೆಬಿಜೆಎನ್ಎಲ್ ಅರಣ್ಯ ಇಲಾಖೆ ಪ್ರತಿ ವರ್ಷದಂತೆ ವರ್ಷವು ರೈತರಿಗೆ ರಿಯಾಯಿತಿ ದರದಲ್ಲಿ 180 ಜಾತಿಯ 10 ಲಕ್ಷಕ್ಕೂ ಹೆಚ್ಚು ಸಸಿಗಳನ್ನ ವಿತರಣೆ ಮಾಡುತ್ತಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ (Vijayapura Almatti) ರೈತರಿಗಾಗಿಯೇ 10 ಲಕ್ಷ ವಿವಿಧ ತಳಿಗಳ ಸಸಿಗಳನ್ನು ವಿತರಿಸಲು ಅರಣ್ಯ ಇಲಾಖೆ (Forest Department) ಮುಂದಾಗಿದೆ. ಈಗಾಗಲೇ ಟೋಕನ್ ಮಾದರಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಗಿಡಗಳನ್ನು ವಿತರಿಸುತ್ತಿದೆ. ಕನಿಷ್ಟ ₹1ಗೂ ಇಲ್ಲಿ ದುಬಾರಿ ಬೆಲೆಯ ಸಸಿಗಳನ್ನು ಪಡೆಯಬಹುದಾಗಿದೆ.  ಈ ಹಿನ್ನೆಲೆಯಲ್ಲಿ ಶಾಸಕ ಶಿವಾನಂದ ಪಾಟೀಲ್ ಅವರು ಅರ್ಹ ಫಲಾನುಭವಿಗಳಿಗೆ ಸಸಿಗಳನ್ನು ವಿತರಣೆ ಮಾಡಿದ್ದಾರೆ. ಹಾಗಾದರೆ ಸಸಿ ವಿತರಣೆಯ ಉದ್ದೇಶವೇನು? ಯಾವ ಸಸಿಗಳನ್ನು ಎಷ್ಟು ಬೆಲೆಗೆ ನೀಡಲಾಗಿದೆ?  ಈಗಲೂ ರೈತರು ಸಸಿ ಪಡೆಯಬಹುದೇ? ಎಲ್ಲ ವಿವರ ಇಲ್ಲಿದೆ.


  ಯಾವೆಲ್ಲ ಗಿಡಗಳಿವೆ?
  ತೋಟಗಾರಿಕೆ ಸಸಿ, ಅಲಂಕಾರಿಕ ಸಸಿ, ಔಷಧೀಯ ಸಸಿ, ಅರಣ್ಯ ಸಸಿ ಸೇರಿದಂತೆ ಹಲವಾರು ಬಗೆ ಬಗೆಯ ಸಸಿಗಳನ್ನ ವರ್ಷವಿಡಿ ತಯಾರಿಸಿ ಬೇಡಿಕೆ ಇದ್ದ ರೈತರಿಗೆ ನೀಡಲಾಗುತ್ತಿದೆ. ವರ್ಷ ಒಟ್ಟು 180ಕ್ಕೂ ಅಧಿಕ ಜಾತಿಯ ಗುಣಮಟ್ಟದ, ರೋಗಾಣುರಹಿತ ಸಸಿಗಳು ಕಡಿಮೆ ಬೆಲೆಗೆ ದೊರೆಯುವುದರಿಂದ ವರ್ಷ ಬೇಡಿಕೆ ಹೆಚ್ಚಿದೆ.

  ಸಸಿ ಕೊಳ್ಳಲು ಹೆಚ್ಚಿದ ಬೇಡಿಕೆ
  ರಾಜ್ಯದ ಚಿತ್ರದುರ್ಗ, ಹೊಸಪೇಟೆ, ಬಾಗಲಕೋಟೆ, ಯಾದಗಿರಿ, ಸೇರಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿಯಿಂದಲೂ ರೈತರು ಆಲಮಟ್ಟಿಗೆ ಆಗಮಿಸಿ ಸಸಿಗಳನ್ನ ಪಡೆದುಕೊಳ್ಳುತ್ತಿದ್ದಾರೆ.

  ಟೋಕನ್ ಪಡೆದು ಗಿಡ ಖರೀದಿ
  ಆಲಮಟ್ಟಿಯಲ್ಲಿ 3 ನರ್ಸರಿಗಳಿದ್ದು ದಿನಕ್ಕೆ 40 ರಿಂದ 50 ಜನ ರೈತರಿಗೆ ಮಾತ್ರ ಸಸಿಗಳನ್ನ ವಿತರಿಸಲಾಗುತ್ತದೆ. ಸಸಿ ಪಡೆಯುವ ಮೊದಲು ಇಲ್ಲಿಗೆ ಭೇಟಿ ನೀಡಿ, ರೈತರು ತಮ್ಮ ಜಮೀನಿನ ಪಹಣಿ ಪತ್ರ, ಆಧಾರ್ ಕಾರ್ಡ್, ಜಿಪಿಎಸ್ ರೀಡಿಂಗ್ ಸೇರಿದಂತೆ ಅಗತ್ಯ ದಾಖಲೆಯನ್ನ ನೀಡಿ ಟೋಕನ್ ಪಡೆದು ಸಸಿಗಳನ್ನ ಖರೀದಿಸಬಹುದು.

  ಒಂದು ರೂಪಾಯಿಗೆ ಗಿಡಗಳನ್ನು ಪಡೆಯಿರಿ !
  ಕಡಿಮೆ ದರ ನಿಗದಿ ಮಾಡಿದ ಹಿನ್ನೆಲೆಯಲ್ಲಿ ಸಾಕಷ್ಟು ಬೇಡಿಕೆ ವ್ಯಕ್ತವಾಗಿದೆ. ಕಸಿ ಮಾಡದ ಸಸಿಗಳು ಅಳತೆಗೆ ತಕ್ಕಂತೆ 1ರೂಪಾಯಿಯಿಂದ 10 ರೂಪಾಯಿವರೆಗೆ, ಕಸಿ ಮಾಡಿದ ಸಸಿಗಳು ಅಳತೆಗೆ ತಕ್ಕಂತೆ 10 ರೂಪಾಯಿಂದ 110 ರೂಪಾಯಿವರೆಗೆ ದರ ನಿಗದಿ ಮಾಡಲಾಗಿದೆ ಎಂದು ವಲಯ ಅರಣ್ಯ ಇಲಾಖೆಅಧಿಕಾರಿಗಳಾದ ಮಹೇಶ ಪಾಟೀಲ್ ಮತ್ತು ಸತೀಶ್ ಗಲಗಲಿ ಅವರು ನ್ಯೂಸ್ 18ಗೆ ಮಾಹಿತಿ ನೀಡಿದ್ದಾರೆ.

  ಸಸಿಗಳನ್ನು ಎಲ್ಲಿಂದ ಪಡೆಯಬಹುದು?
  ಆಸಕ್ತ ರೈತರು ವಿಜಯಪುರ ಜಿಲ್ಲೆಯ ಆಲಮಟ್ಟಿಯ ಈ ಕೆಳಗಿನ ನರ್ಸರಿಗಳಿಂದ ಸಸಿಗಳನ್ನು ಕಡಿಮೆ ಬೆಳೆಗೆ ಪಡೆಯಬಹುದಾಗಿದೆ.

  1. ಡ್ಯಾಂ ನರ್ಸರಿ


  2. ಎಂಡಿಎಫ್ ನರ್ಸರಿ


  3. ಎಎಲ್ಬಿಸಿ ನರ್ಸರಿ ಇಲ್ಲಿಂದ ಪಡೆಯಬಹುದಾಗಿದೆ.


  ALBC Head Works
  ಗಿಡ ಪಡೆಯಲು ಹೀಗೆ ಬನ್ನಿ (ಚಿತೃಕೃಪೆ: ಗೂಗಲ್ ಮ್ಯಾಪ್ಸ್)

  ಇನ್ನುಳಿದಂತೆ ರಾಯಚೂರು ಜಿಲ್ಲೆಯ ರೋಡಲ್ ಬಂಡಾ, ಬಸವಸಾಗರ ನರ್ಸರಿ ಹಾಗೂ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕುಂದರಗಿ ಗ್ರಾಮದ ನರ್ಸರಿಯಲ್ಲಿ ಸಸಿಗಳನ್ನ ಪಡೆದುಕೊಳ್ಳಬಹುದಾಗಿದೆ.


  ದೊರೆಯುವ ಸಸಿಗಳು


  1) ತೋಟಗಾರಿಕಾ ಸಸಿಗಳು: ಪೇರು, ದಾಳಿಂಬೆ, ಚಿಕ್ಕು, ನಿಂಬೆ (ಜವಾರಿ), ಕಿತ್ತಳೆ.


  2) ಹಣ್ಣಿನ ತಳಿಗಳು: ಹುಣಸೆ, ರಾಮಫಲ, ಅಂಜೂರು, ಸೀತಾಫಲ,ನೆಲ್ಲಿ, ಸ್ಟಾರ್ ಫ್ರೂಟ್, ಪನ್ನೇರಳೆ ಇತ್ಯಾದಿ.


  3) ಅರಣ್ಯ ಬೆಳೆಗಳು: ನುಗ್ಗೆ, ಕರಿಬೇವು, ಸೀಲ್ವರ್ ಓಕ್, ಗೊಬ್ಬರ ಗಿಡ, ತೋಗಚೆ ಇತ್ಯಾದಿ.

  4) ವಾಣಿಜ್ಯ ಬೆಳೆಗಳು: ಹೆಬ್ಬೇವು, ರಕ್ತ ಚಂದನ, ಶ್ರೀಗಂಧ, ಸಾಗವಾನಿ ಇತ್ಯಾದಿ.


  5) ಧಾರ್ಮಿಕ ಪ್ರಾಮುಖ್ಯತೆಯ ಗಿಡಗಳು: ತುಳಸಿ, ಬನ್ನಿ, ಪತ್ರಿ, ನಂದಿಪಾದ, ನಾಗಲಿಂಗ ಪುಷ್ಪ


  6) ಅಲಂಕಾರಿಕ ಸಸಿಗಳು: ಗಾಳಿಮರ, ಕಣಗಲ, ನಂದಿ ಬಟ್ಲು, ಕ್ಯಾಲಿಯಂಡ್ರಾ, ಕ್ಯಾಶಿಯಾ ಬೈಪ್ಲೊರಾ, ಬೋಗನವಿಲ್ಲಾ, ರಾತ ಕಿ ರಾಣಿ, ದಿನ-ಕಾ-ರಾಜಾ ಇತ್ಯಾದಿ.


  7) ಔಷಧಿ ಗಿಡಗಳು: ಲೋಳಸರ, ಮದರಂಗಿ, ಅಶ್ವಗಂಧಾ, ಸರ್ಪಗಂಧಾ, ದೊಡ್ಡ ಪತ್ರಿ, ಅಮೃತ್ ಬಳ್ಳಿ.


  ಇದನ್ನೂ ಓದಿ: Almatti: ಆಲಮಟ್ಟಿಯಲ್ಲಿ ಮಾಯಾಲೋಕ! ಇಲ್ಲಿದೆ ನೋಡಿ ವಿಡಿಯೋ

  ದುಬಾರಿ ಸಸಿಗಳು ಕಡಿಮೆ ಬೆಲೆಗೆ!
  ಖಾಸಗಿ ನರ್ಸರಿಯಲ್ಲಿ ಖರೀದಿ ಮಾಡಿದರೆ ಈ ಸಸಿಗಳಿಗೆ ದುಬಾರಿ ವೆಚ್ಚವನ್ನ ಭರಿಸಬೇಕಾಗುತ್ತದೆ. ಏನಿಲ್ಲ ಅಂದ್ರೂ ಒಂದು ಮಾವಿನ ಸಸಿಗೆ ₹100, ಒಂದು ಉತ್ತಮ ಗುಣಮಟ್ಟದ ಪೇರು ಸಸಿಗೆ 200, ಚಿಕ್ಕು 130, ತೆಂಗು 100 ರಿಂದ 150 ಹೀಗೆ ಹೆಚ್ಚಿನ ದರಕ್ಕೆ ಮಾರಾಟವನ್ನ ಮಾಡುತ್ತಾರೆ.


  ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು

  ಕಳೆದ ವರ್ಷ ಜಿಲ್ಲೆಯ ನಾನಾ ಭಾಗಗಳಿಂದ ರೈತರು ಗಾಳಿ ಮಳೆಯನ್ನದೆ ರಾತ್ರಿ ಇಡೀ ಸರತಿ ಸಾಲಿನಲ್ಲಿ ನಿಂತು ಸಸಿಗಳನ್ನ ಪಡೆಯುವಂತಾಗಿತ್ತು. ಆದರೆ ವರ್ಷ ಹೆಚ್ಚಿನ ಸಸಿಗಳನ್ನ ತಯಾರಿಸಲಾಗಿದ್ದು, ಎಲ್ಲ ರೈತರಿಗೂ ವಿತರಿಸುತ್ತಿದ್ದಾರೆ.


  ವರದಿ - ಪ್ರಶಾಂತ ಹೂಗಾರ ನ್ಯೂಸ್18 ಕನ್ನಡ ವಿಜಯಪುರ
  Published by:guruganesh bhat
  First published: