Vijayapura News: ಇದು ಮದುವೆ ದಿಬ್ಬಣ ಅಲ್ಲ, ಮತದಾನ ಜಾಗೃತಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವಿಜಯಪುರ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

  • News18 Kannada
  • 2-MIN READ
  • Last Updated :
  • Bijapur, India
  • Share this:

ವಿಜಯಪುರ: ಇದೇನಿದು ಹಳೆ ಬಾಲಿವುಡ್ ಸ್ಟೈಲ್​ನಲ್ಲಿ ಮದುವೆ ದಿಬ್ಬಣ ಏನಾದ್ರೂ ಹೊರಟ್ರಾ ಅಂದ್ಕೊಂಡ್ರಾ? ಅಲ್ಲ ಕಣ್ರೀ, ಇದು‌ ಮತದಾನ ಜಾಗೃತಿಗಾಗಿ (Voting Awareness) ಅಧಿಕಾರಿಗಳು ಕಂಡುಕೊಂಡ ಸೂಪರ್ ಪ್ಲ್ಯಾನ್. ಟಾಂಗಾ ಏರಿ (Karnataka Assembly Elections 2023) ಅಧಿಕಾರಿಗಳು ಬಂದ್ರೆ, ಅದ್ರ ಹಿಂದೆ, ಮುಂದೆ ವಿವಿಧ ವೇಷಧಾರಿಗಳು, ಹಲಗೆ ಸದ್ದಿನ ಸಂಭ್ರಮ ಕಂಡು ಬಂತು.


ಯೆಸ್, ಮೇ 10 ರ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದೆ. ರಾಜಕಾರಣಿಗಳೇನೋ ಭಾರೀ ತಯಾರಿಯಲ್ಲಿದ್ದಾರೆ.‌ ಆದ್ರೆ ಮತದಾರರು ಮಾತ್ರ ಅದೆಷ್ಟೇ ಆದ್ರೂ ಜಾಗೃತರಾಗುವುದು ಕಡಿಮೆ‌. ಹೀಗಾಗಿ ವಿಜಯಪುರ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.




ಜಿಲ್ಲಾಧಿಕಾರಿಯೇ ಟಾಂಗಾ ಏರಿದ್ರು ನೋಡಿ!
ಐತಿಹಾಸಿಕ ವಿಜಯಪುರ ನಗರದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯೂ ಆದ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಖುದ್ದು ತಾವೇ ಟಾಂಗಾದಲ್ಲಿ ಸಂಚರಿಸುವ ಮೂಲಕ ನಗರದ ಮತದಾರರ ಗಮನ ಸೆಳೆದರು.


ಅಧಿಕಾರಿಗಳ ನೇತೃತ್ವ
ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ವಿಜಯಪುರ ಜಿಲ್ಲಾಧಿಕಾರಿ ಟಾಂಗಾದಲ್ಲಿ ಕುಳಿತು ಚುನಾವಣೆ ದಿನಾಂಕವಿರುವ ಬಾವುಟವನ್ನು ಬೀಸುತ್ತಾ ಜನರನ್ನು ಮತದಾನ ಮಾಡಲು ಪ್ರೇರೇಪಿಸಿದರು. ಇನ್ನು ಡಿಸಿ ಅವರಿಗೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಅವರು ಹಾಗೂ ಇತರೆ ಅಧಿಕಾರಿಗಳು ಸಾಥ್ ನೀಡಿದರು.


ಇದನ್ನೂ ಓದಿ: Business Idea: ವೀಳ್ಯದೆಲೆ ಬೆಳೆದು ವರ್ಷಕ್ಕೆ 15 ಲಕ್ಷ ಸಂಪಾದನೆ! ವಿಜಯಪುರದ ಈ ರೈತನ ಸಕ್ಸಸ್ ಕಥೆ ಕೇಳಿ


ಮೆರವಣಿಗೆಯಿಂದ ಜಾಗೃತಿ
ವಿಜಯಪುರದ ಬಸವೇಶ್ವರ ವೃತ್ತ, ಗಾಂಧಿ ಚೌಕ್, ಸರಾಫ್ ಬಜಾರ್, ರಾಮ ಮಂದಿರ ರಸ್ತೆ ಮೂಲಕ ಲಿಂಗದ ಗುಡಿ, ಸೋಲಾಪುರ್ ರಸ್ತೆ, ಬಂಜಾರ್ ಕ್ರಾಸ್, ಬಿಎಲ್ ಡಿಇ ಪಾಲಿಟೆಕ್ನಿಕ್ ಕಾಲೇಜ್ ಮಾರ್ಗ್, ಆದರ್ಶ ನಗರ, ಬಿಎಲ್ ಡಿಇ ಇಂಜಿನೀಯರಿಂಗ್ ಕಾಲೇಜ್, ಸಿದ್ದೇಶ್ವರ ದೇವಸ್ಥಾನ ಮಾರ್ಗವಾಗಿ ಗಾಂಧಿ ಚೌಕ್ ದಲ್ಲಿ ಸಮಾವೇಶಗೊಂಡವು. ವಿವಿಧ ಪ್ರಕಾರದ ಕಲಾ ತಂಡಗಳು ಭಾಗವಹಿಸಿದ್ದು, ಜಾಥಾಕ್ಕೆ ಮೆರಗು ನೀಡಿದ್ದಲ್ಲದೇ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಿಸಿತ್ತು. ಸುಮಾರು 32 ಟಾಂಗಾ ಗಾಡಿಗಳು ಭಾಗವಹಿಸಿದ್ದವು.




ಮತದಾನ ಹೆಚ್ಚಳಕ್ಕೆ ಪ್ರಯತ್ನ
2018ರ ಚುನಾವಣೆಯಲ್ಲಿ ಜಿಲ್ಲೆಯ ಹಲವೆಡೆ ಕಡಿಮೆ ಮತದಾನವಾಗಿತ್ತು. ಹೀಗಾಗಿ ಈ ಬಾರಿ ನೂರರಷ್ಟು ಮತದಾನವಾಗಬೇಕೆಂಬ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನ ಆಯೋಜಿಸಿದೆ. ಅದ್ರಲ್ಲಿ ಈ ಟಾಂಗಾ ಮೂಲಕ ಮತದಾನವೂ ಒಂದು.


ಇದನ್ನೂ ಓದಿ: Rudreshwara: ಈ ಊರಿನ ಜನರು ಏನೇ ಆದ್ರೂ ಸುಳ್ಳು ಹೇಳಲ್ಲ!


ಒಟ್ಟಿನಲ್ಲಿ ಜನರ ಗಮನ ತಮ್ಮತ್ತ ಸೆಳೆಯುವ ವೋಟ್ ನಲ್ಲಿ ಪಾಲ್ಗೊಳ್ಳುವಂತೆ ಮಾಡಲು ಜಿಲ್ಲಾ ಸ್ವೀಪ್ ಸಮಿತಿ ಇಂತಹ ವಿಶಿಷ್ಟ ಮತ್ತು ಸಾಂಸ್ಲೃತಿಕ ಶೈಲಿಯ ಜಾಗೃತಿ ಕಾರ್ಯಕ್ರಮಕ್ಕೆ ಮುಂದಾಗಿದೆ.


ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

First published: