Vijayapura: ಕಾರಹುಣ್ಣಿಮೆ ಸಂಭ್ರಮವೋ ಸಂಭ್ರಮ! ವಿಜಯಪುರದಲ್ಲಿ ರೈತರ ಸಡಗರ

ಎತ್ತುಗಳ ಮೈತೊಳೆದು ಶೃಂಗರಿಸಿ ಮನೆಯ ಹೆಣ್ಣುಮಗಳು ಆರತಿ ಎತ್ತಿ ನೈವೇದ್ಯ ಸಮರ್ಪಿಸುತ್ತಾರೆ. ಬಳಿಕ ಕರಿ ಹರೆಯುವ ವೇಳೆ ನಮ್ಮ ಎತ್ತುಗಳೇ ಸ್ಪರ್ಧೆಯಲ್ಲಿ ಜಯಗಳಿಸಲಿ ಎಂದು ಮನೆಯವರು ಪ್ರಾರ್ಥಿಸುತ್ತಾರೆ.

ಕಾರ ಹುಣ್ಣಿಮೆ ಖರೀದಿಯಲ್ಲಿ ರೈತ

ಕಾರ ಹುಣ್ಣಿಮೆ ಖರೀದಿಯಲ್ಲಿ ರೈತ

  • Share this:
    ವಿಜಯಪುರ: ಉತ್ತರ ಕರ್ನಾಟಕದ ರೈತರ ಹಬ್ಬ ಕರಿ ಹರಿಯುವ ಕಾರಹುಣ್ಣಿಮೆಗೆ ಕ್ಷಣಗಣನೆ ಆರಂಭವಾಗಿದೆ. ಹಬ್ಬದ ತಯಾರಿಯಲ್ಲಿರುವ ರೈತರು ಅಲಂಕಾರಿಕ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ಬೇಸಿಗೆ ಕಾಲ ಮುಗಿದು, ಮುಂಗಾರು ಹಂಗಾಮು ಪ್ರಾರಂಭವಾಗುವ ಹೊತ್ತಿಗೆ ಬರುವ ಕಾರ ಹುಣ್ಣಿಮೆ (Kara Hunnime Festival) ರೈತರ ಮೊದಲ ಹಬ್ಬ. ಉಳುಮೆ ಮಾಡಿದ ಎತ್ತುಗಳಿಗೆ ವಿಶ್ರಾಂತಿ ನೀಡಿ ಮುಂಗಾರಿನ ಕೃಷಿ ಕೆಲಸಕ್ಕೆ ತಯಾರು ಮಾಡುವ ಹಬ್ಬವಿದು. ಹೀಗಾಗಿ ಕಾರ ಹುಣ್ಣಿಮೆ ಎಂದರೆ ರೈತರಿಗೆ ಎಲ್ಲಿಲ್ಲದ ಸಂಭ್ರಮ. ವಿಜಯಪುರದಲ್ಲಂತೂ (Vijayapura) ಈ ಹಬ್ಬದ ಸಂಭ್ರಮ ಅಚ್ಚರಿ-ಬೆರಗು ಮೂಡಿಸುತ್ತೆ!

    ಕಾರ ಹುಣ್ಣಿಮೆಯ ಸಂಭ್ರಮ ಸಡಗರ ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಮುಗಿಲು ಮುಟ್ಟುತ್ತಿದೆ. ರೈತರು ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದಲ್ಲಿ ಗೆಜ್ಜೆ, ಲೂಜಾ, ಗುಮರಿ, ಗಂಟೆ, ಬಾಂಗಡಾ, ಬಾರಕೋಲು, ಹಗ್ಗ, ಮೂಗುದಾರ ಸೇರಿದಂತೆ ಹಲವು ವಸ್ತುಗಳನ್ನು ಸಡಗರದಿಂದ ಖರೀದಿ ಮಾಡುತ್ತಿದ್ದಾರೆ.

    ಎಲ್ಲೆಲ್ಲಿ ಆಚರಣೆ ಮಾಡಲಾಗುತ್ತದೆ?
    ವಿಜಯಪುರದ ಮುದ್ದೇಬಿಹಾಳ, ಕೊಲ್ಹಾರ, ಬಸವಣಬಾಗೇವಾಡಿ, ಇಂಡಿ, ನಿಡಗುಂದಿ ಸೇರಿದಂತೆ ವಿವಿಧೆಡೆ ಸಡಗರ ಸಂಭ್ರಮದಿಂದ ರೈತರ ಹಬ್ಬ ಕರಿ ಹರಿಯುವ ಕಾರ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ.

    ಮಾರುಕಟ್ಟೆಯಲ್ಲಿ ರೈತರು ಎತ್ತುಗಳಿಗೆ ಬೇಕಾಗುವ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಾರೆ. ಎತ್ತುಗಳ ಮೈತೊಳೆದು ಶೃಂಗರಿಸಿ ಮನೆಯ ಹೆಣ್ಣುಮಗಳು ಆರತಿ ಎತ್ತಿ ನೈವೇದ್ಯ ಸಮರ್ಪಿಸುತ್ತಾರೆ. ಬಳಿಕ ಕರಿ ಹರೆಯುವ ವೇಳೆ ನಮ್ಮ ಎತ್ತುಗಳೇ ಸ್ಪರ್ಧೆಯಲ್ಲಿ ಜಯಗಳಿಸಲಿ ಎಂದು ಮನೆಯವರು ಪ್ರಾರ್ಥಿಸುತ್ತಾರೆ.

    ಇದನ್ನೂ ಓದಿ: Vijayapura Tourist Places: ಈಗಲೇ ವಿಜಯಪುರಕ್ಕೆ ಬನ್ನಿ, ಇವುಗಳನ್ನು ನೋಡಲು ಎರಡು ಕಣ್ಣು ಸಾಲಲ್ಲ!

    ಕೋವಿಡ್​ನಿಂದ ಕಳೆದೆರಡು ವರ್ಷಗಳಿಂದ ಈ ಕಾರಹುಣ್ಣಿಮೆ ಹಬ್ಬಕ್ಕೆ ತೆರೆಬಿದ್ದಿತ್ತು, ಆದರೆ ಈ ವರ್ಷ ಯಾವುದೇ ಅಡ್ಡಿಯಿಲ್ಲದೆ ರೈತರು ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆಗೆ ಮುಂದಾಗಿದ್ದಾರೆ.

    Pattan Panchayat Nidagundi, Nidgundi, Karnataka
    ಕಾರ ಹುಣ್ಣಿಮೆ ಸಂಭ್ರಮದಲ್ಲಿ ಭಾಗವಹಿಸಲು ಇಲ್ಲಿ ಬನ್ನಿ! (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    ಇದನ್ನೂ ಓದಿ: Mother Temple Vijayapura: ತಾಯಿಯೇ ದೇವರು ಎಂದು ದೇವಸ್ಥಾನ ನಿರ್ಮಿಸಿದ ಮಕ್ಕಳು! ವಿಜಯಪುರದಲ್ಲಿದೆ ಅಮ್ಮನ ಮಂದಿರ!

    ಈ ಹಬ್ಬವನ್ನು ನೀವೂ ಕಣ್ತುಂಬಿಸಿಕೊಳ್ಳಬೇಕೇ? ರೈತರ ಜೊತೆ ಕಾರ ಹುಣ್ಣಿಮೆಯಲ್ಲಿ ಸಂಭ್ರಮಲ್ಲಿ ಪಾಲ್ಗೊಳ್ಳಬೇಕೇ? ಕಾರ ಹುಣ್ಣಿಮೆ ಕಣ್ತುಂಬಿಕೊಂಡು ಸಡಗರದಲ್ಲಿ ಭಾಗಿಯಾಗಲು ನೀವೂ ವಿಜಯಪುರದ ನಿಡಗುಂದಿ ಪಟ್ಟಣಕ್ಕೆ ಬನ್ನಿ!

    ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
    Published by:guruganesh bhat
    First published: