Vijayapura: ಬೇಸಿಗೆ ರಜೆ ತವಕದಲ್ಲಿರುವ ಮಕ್ಕಳಿಗೆ ಖುಷಿಯೋ ಖುಷಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಶಾಲಾ ಆವರಣದಲ್ಲಿ ಮಕ್ಕಳೇ ಬಿಡಿಸಿದ ಡ್ರಾಯಿಂಗ್, ವಿಜ್ಞಾನ ಪ್ರದರ್ಶನ ಸಹಿತ ವಿವಿಧ ಕಲೆಗಳ ಪ್ರದರ್ಶನ ನಡೆಯಿತು. ಇನ್ನೊಂದೆಡೆ ವಿದ್ಯಾರ್ಥಿಗಳು ಪ್ರಾಣಿ ಪಕ್ಷಿಗಳ ಧ್ವನಿಯಲ್ಲಿ ಮಿಮಿಕ್ರಿ ಮಾಡಿ ಸಹಪಾಠಿಗಳಿಗೆ ಮಜಾ ನೀಡಿದರು.

  • Share this:

    ವಿಜಯಪುರ: ಕಾಗದದ ಟೋಪಿ ಹಾಕಿ ನಿಂತಿರೋ ಮಕ್ಕಳು. ವಿವಿಧ ಶಾಲೆಯ (Government Schools) ವಿದ್ಯಾರ್ಥಿಗಳಿಗೆ ಮಕ್ಕಳೇ ಆದ್ರು ಟೀಚರು. ಇನ್ನೇನು ಬೇಸಿಗೆ ರಜೆಯ ನಿರೀಕ್ಷೆಯಲ್ಲಿರೋ ಮಕ್ಕಳಿಗೆ ಕಲಿಕಾ ಹಬ್ಬ (Kalika Habba) ನೀಡಿತು ಫುಲ್ ಖುಷ್. ಈ ಈವೆಂಟ್​ನಲ್ಲಿ ಪಾಲ್ಗೊಂಡವರು ಹೇಳಿದ್ರು ಸೂಪರೋ ಸೂಪರ್.

    ಯೆಸ್, ಮಕ್ಕಳೆಲ್ಲ ಬೇಸಿಗೆ ರಜೆಯ ತವಕದಲ್ಲಿದ್ದಾರೆ. ಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿಯ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ ಬೇನಾಳ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು. ವಿವಿಧ ಶಾಲೆಯ ಮಕ್ಕಳು ಪಾಲ್ಗೊಂಡು ಖುಷಿಪಟ್ಟರು.


    ವಿವಿಧ ಪ್ರತಿಭೆಗಳ ಅನಾವರಣ
    ಶಾಲಾ ಆವರಣದಲ್ಲಿ ಮಕ್ಕಳೇ ಬಿಡಿಸಿದ ಡ್ರಾಯಿಂಗ್, ವಿಜ್ಞಾನ ಪ್ರದರ್ಶನ ಸಹಿತ ವಿವಿಧ ಕಲೆಗಳ ಪ್ರದರ್ಶನ ನಡೆಯಿತು. ಇನ್ನೊಂದೆಡೆ ವಿದ್ಯಾರ್ಥಿಗಳು ಪ್ರಾಣಿ ಪಕ್ಷಿಗಳ ಧ್ವನಿಯಲ್ಲಿ ಮಿಮಿಕ್ರಿ ಮಾಡಿ ಸಹಪಾಠಿಗಳಿಗೆ ಮಜಾ ನೀಡಿದರು.


    ಇದನ್ನೂ ಓದಿ: Sainik School: ಸೈನಿಕ ಶಾಲೆಗೆ ಪ್ರವೇಶ ಪಡೆದ 25 ಹೆಣ್ಮಕ್ಕಳು, ಕಡು ಕಷ್ಟದ ತರಬೇತಿ ಇವರಿಗೆ ನೀರು ಕುಡಿದಷ್ಟೇ ಸಲೀಸು!


    ವಿಜ್ಞಾನ ಪ್ರದರ್ಶನ
    ವಿಜ್ಞಾನ ವಸ್ತು ಪ್ರದರ್ಶನವನ್ನ ಬನಶಂಕರಿ ಪಬ್ಲಿಕ್ ಸ್ಕೂಲ್​ನಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿಜ್ಞಾನದ ಮಾಡೆಲ್ ಗಳನ್ನ ಸ್ವತಃ ತಾವೇ ತಯಾರಿಸಿ ತಂದು ಪ್ರದರ್ಶಿಸಿದರು. ಮಕ್ಕಳ ಪೋಷಕರು ಕೂಡಾ ಕುತೂಹಲದಿಂದ ಶಾಲೆಗೆ ಆಗಮಿಸಿ ವೀಕ್ಷಿಸಿ, ಮಕ್ಕಳಿಂದ ಮಾಹಿತಿ ಪಡೆದುಕೊಂಡರು.




    ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!


    ಒಟ್ಟಿನಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮಾಡಲು ಶೈಕ್ಷಣಿಕ ವರ್ಷಾಂತ್ಯ ಇಂತಹ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಯಿತು.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು