Vijayapura: ಏನಿದು ಕಲಿಕಾ ಹಬ್ಬ? ವಿದ್ಯಾರ್ಥಿಗಳ ಸಂಭ್ರಮ ಹೇಗಿತ್ತು ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸರ್ಕಾರಿ ಶಾಲಾ ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಉದ್ದೇಶ.

 • Share this:

  ವಿಜಯಪುರ: ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ (Government School)  ಹಬ್ಬದ ವಾತಾವರಣ. ಹಾಗಿದ್ರೆ ಏನಿದು ಸಂಭ್ರಮ (Kalika Habba) ಅಂತೀರಾ? ಹೇಳ್ತೀವಿ ನೋಡಿ.


  ಯೆಸ್, ದಿನ ಹಾಕಿಕೊಂಡು ಬರ್ತಿದ್ದ ಯೂನಿಫಾರಂಗೆ ಕೊಂಚ ವಿರಾಮ ನೀಡಿದ್ದ ಬಾಲಕಿಯರು ಮನೆಯಲ್ಲಿದ್ದ ಸೀರೆ ಉಟ್ಟು ಶಾಲೆಗೆ ಬಂದಿದ್ದರು. ಇನ್ನು ಶಾಲೆಯಂತೂ ಹೂವು, ಬಾಳೆ ಗಿಡ, ತೆಂಗಿನ ಗರಿಕೆಯಿಂದ ಸಿಂಗಾರಗೊಂಡಿತ್ತು. ಅಂದಹಾಗೆ ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ಗೋನಾಳ ಸರ್ಕಾರಿ ಶಾಲೆಯಲ್ಲಿ.


  ಎರಡು ದಿನಗಳ ಕಾರ್ಯಕ್ರಮ
  ಎಲ್ಲ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಿರುವ ಎರಡು ದಿನಗಳ ಮಕ್ಕಳ ಕಲಿಕಾ ಹಬ್ಬ ನಿಜಕ್ಕೂ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ವಂದಾಲ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಂದ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಎರಡು ದಿನಗಳ ಕಾಲ ಮಕ್ಕಳಿಗಾಗಿ ಕಲಿಕಾ ಹಬ್ಬವನ್ನ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಅವರು ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದ್ದಾರೆ.


  ಶಾಲೆಗೆ ಬಗೆ ಬಗೆಯ ಸಿಂಗಾರ
  ಕಲಿಕಾ ಹಬ್ಬ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣ, ಬಾಳೆಕಂದು, ಬಲೂನು, ಪೇಪರ್ ಕಟಿಂಗ್ಸ್​ಗಳಿಂದ ಸಿಂಗರಿಸಲಾಗಿತ್ತು. ಅಥಿತಿಗಳಿಗೆ ಪೇಪರ್ ಟೋಪಿ, ಮಕ್ಕಳಿಗೆ ವೇಷಭೂಷಣ, ಪೋಷಕರಿಗೆ ಮಕ್ಕಳಿಂದ ಪೂರ್ಣಕುಂಭ ಸ್ವಾಗತ, ಮೆರವಣಿಗೆ ಹೀಗೆ ಕಲಿಕಾ ಹಬ್ಬದ ಸಂಭ್ರಮ ಹೆಚ್ಚಿಸಿತ್ತು.
  ಇದನ್ನೂ ಓದಿ: Bagalkote: ಹೆದ್ದಾರಿಯಲ್ಲಿ ಉರುಳು ಸೇವೆ ಮಾಡುತ್ತಾ ವಿಠ್ಠಲನ ಸನ್ನಿಧಾನಕ್ಕೆ ಹೊರಟ ಭಕ್ತ!


  ಸರ್ಕಾರಿ ಶಾಲಾ ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಉದ್ದೇಶ. ಮಕ್ಕಳು ಚಟುವಟಿಕೆ ಮೂಲಕ ಸಂತೋಷದಾಯಕ ಕಲಿಕೆಯನ್ನು ಹೊಂದಬೇಕು ಎಂಬ ಕಾರಣ ವಿಜ್ಞಾನ, ಕಲೆ, ಹಾಡು, ಕ್ರಾಫ್ಟ್, ಪರಿಸರ ಅನ್ವೇಷಣೆ, ಸಂದರ್ಶನ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.


  ಇದನ್ನೂ ಓದಿ: Kudala Sangama: ಕೂಡಲ ಸಂಗಮ ಕ್ಷೇತ್ರದಲ್ಲಿ ಪೂಜೆ, ದರ್ಶನ ಸಂಪೂರ್ಣ ವಿವರ ಇಲ್ಲಿದೆ


  ಒಟ್ಟಾರೆ ಶಾಲಾ ತರಗತಿಯಲ್ಲಿ ನಿತ್ಯ ಪಾಠ ಪ್ರವಚನದಲ್ಲಿ ತೊಡಗಿದ ಶಾಲಾ ಮಕ್ಕಳಿಗೆ ಹಬ್ಬದ ವಾತಾವರಣ ನಿರ್ಮಿಸಿ ಮಕ್ಕಳು ಸಂಭ್ರಮ ಸಡಗರದಿಂದ ಕಲಿಕೆಯೆಡೆಗೆ ಆಕರ್ಷಿತರಾಗುವಂತೆ ಮಾಡುವಲ್ಲಿ ಕಲಿಕಾ ಹಬ್ಬ ಯಶಸ್ವಿಯಾಗಿದೆ.


  ವರದಿ: ಪ್ರಶಾಂತ ಹೂಗಾರ, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು