ವಿಜಯಪುರ: ವಿದೇಶಗಳಲ್ಲಿ ಉದ್ಯೋಗ (Jobs In Foreign) ಮಾಡುವ ಕನಸು ಕಂಡಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಅತ್ಯುತ್ತಮ ಅವಕಾಶ. ಪ್ರಸ್ತುತ ಕುವೈತ್ ದೇಶದಲ್ಲಿ (Jobs In Kuwait) ವೈದ್ಯರ ಬೇಡಿಕೆ ಇರುವ ಹಿನ್ನೆಲೆಯಲ್ಲಿ 468 ಹುದ್ದೆಗಳ ನೇರ ನೇಮಕಾತಿಗೆ ಜನವರಿ ಕೊನೆಯ ವಾರದಲ್ಲಿ ಸಂದರ್ಶನ (Interview) ಆಯೋಜಿಸಲಾಗಿದೆ. ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಬಿವೃದ್ದಿ ನಿಗಮವು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದಿಂದ ಅಧಿಕೃತ ವಿದೇಶಿ ನೇಮಕಾತಿ ಏಜೆನ್ಸಿಯಾಗಿ ನೋಂದಣಿಗೊಂಡು ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ವಿಜಯಪುರ (Vijayapura News) ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ತಿಳಿಸಿದ್ದಾರೆ.
ಹುದ್ದೆಯ ಹೆಸರು | ವಿವಿಧ ಕ್ಷೇತ್ರಗಳಲ್ಲಿ ಪರಿಣಿತ ವೈದ್ಯರು |
ಕೆಲಸದ ಸ್ಥಳ | ಕುವೈತ್ |
ಸಂದರ್ಶನದ ದಿನಾಂಕ | ಜನವರಿ ಕೊನೆಯ ವಾರ |
ಹುದ್ದೆಗಳ ಸಂಖ್ಯೆ | 486 |
ದೂರವಾಣಿ ಸಂಖ್ಯೆ | 08352-297019, 8867666749 |
ಮೇಲ್ ವಿಳಾಸ | bijapurmicdc1@gmail.com, bijapurmicdc2@gmail.com |
ಇದನ್ನೂ ಓದಿ: Sitamata Temple: ಲವಕುಶರ ಜನ್ಮಸ್ಥಾನ, ಸೀತಾಮಾತೆಯ ದೇಗುಲವಿರುವ ತಾಣವಿದು
ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಕೌಶಲ್ಯಾಭಿವೃದ್ದಿ ಕಚೇರಿ, ರಾಘವೇಂದ್ರ ಕಾಲೋನಿ, ಮಹಾನಗರ ಪಾಲಿಕೆ ಎದುರು, ಬಾಗಲಕೋಟೆ ರಸ್ತೆ, ವಿಜಯಪುರ ದೂರವಾಣಿ ಸಂಖ್ಯೆ: 08352-297019, 8867666749 ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: Badami: ಭಕ್ತ ಸಾಗರದ ನಡುವೆ ಬನಶಂಕರಿಯ ತಾಯಿಯ ಅದ್ದೂರಿ ರಥೋತ್ಸವ!
ಅಥವಾ ಇಮೇಲ್ ವಿಳಾಸ :bijapurmicdc1@gmail.com, bijapurmicdc2@gmail.comಗೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ