• Home
 • »
 • News
 • »
 • vijayapura
 • »
 • Jobs In Vijayapura: ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ

Jobs In Vijayapura: ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Jobs For Retired Indian Army Persons: ನಿಮಗೆಂದೇ ಉತ್ತಮ ಉದ್ಯೋಗವೊಂದು ತೆರೆದುಕೊಂಡಿದ್ದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 

 • News18 Kannada
 • Last Updated :
 • Bijapur, India
 • Share this:

  ವಿಜಯಪುರ:  ಭಾರತೀಯ ಸೇನೆಯಲ್ಲಿ (Indian Army) ಸೇವೆ ಸಲ್ಲಿಸಿ ನಿವೃತ್ತರಾಗಿದ್ದೀರಾ? ಅಥವಾ ಸ್ವಯಂ ಸೇವಾ ನಿವೃತ್ತಿ ತೆಗೆದುಕೊಂಡಿದ್ದೀರಾ? ಸದ್ಯ ಬೇರೆ ಉದ್ಯೋಗದ ಹುಡುಕಾಟದಲ್ಲಿ ನೀವಿದ್ದೀರಾ? ಉದ್ಯೋಗ ಹುಟುಕಾಟಕ್ಕೆ (Job Search)  ಇಳಿದಿದ್ದೀರಾ?  ಹಾಗಾದರೆ ನಿಮಗೆಂದೇ ಒಂದೊಳ್ಳೆ ಸುದ್ದಿ ಇಲ್ಲಿದೆ.  ಅರೇ! ಏನಿದು ಸುದ್ದಿ ಅಂದುಕೊಂಡ್ರಾ? ನಿಮಗೆಂದೇ ಉತ್ತಮ ಉದ್ಯೋಗವೊಂದು (Jobs For Retired Indian Army Persons) ತೆರೆದುಕೊಂಡಿದ್ದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 

  ಉದ್ಯೋಗಕ್ಕೆ ಕರೆಯಲಾದ ಇಲಾಖೆಯ ಹೆಸರುಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು
  ಉದ್ಯೋಗದ ಸಂಪೂರ್ಣ ಹೆಸರು ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕರ ಹುದ್ದೆ
  ಹುದ್ದೆಗಳ ಸಂಖ್ಯೆ13
  ಯಾರೆಲ್ಲ ಅರ್ಜಿ ಸಲ್ಲಿಸಬಹುದು?ಭಾರತೀಯ ಸೇನೆಯ ಮಾಜಿ ಸೈನಿಕರು
  ಹೇಗೆ ಅರ್ಜಿ ಸಲ್ಲಿಸಬಹುದು?ಅಧ್ಯಕ್ಷರು, ಇಲಾಖಾ ನೇಮಕಾತಿ ಸಮಿತಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಸಂಖ್ಯೆ - 58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು- 560025
  ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ08352- 250913

  ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಂಗಳೂರಿನಲ್ಲಿ ‘ಸಿ’ ವೃಂದದ 13 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ. ಈ ಉದ್ಯೋಗಕ್ಕೆ ಭಾರತೀಯ ಸೇನೆಯ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ ಮಾಡಲಾಗಿದೆ.


  ಎಲ್ಲಿ ಸಿಗುತ್ತೆ ಅರ್ಜಿ?
  ಸರ್ಕಾರಿ ಮುದ್ರಣಾಲಯದಲ್ಲಿ ಲಭ್ಯವಿರುವ ಸರ್ಕಾರದಿಂದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ದ್ವಿಪ್ರತಿಯಲ್ಲಿ ನೇರವಾಗಿ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.


  ವಿಳಾಸ ಇಲ್ಲಿದೆ
  ಅಧ್ಯಕ್ಷರು, ಇಲಾಖಾ ನೇಮಕಾತಿ ಸಮಿತಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಸಂಖ್ಯೆ - 58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು- 560025 ಇಲ್ಲಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.


  ಇದನ್ನೂ ಓದಿ: God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!


  ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08352- 250913 ಸಂಖ್ಯೆಗೆ ಕರೆಮಾಡಿ ಸಂಪರ್ಕಿಸಬಹುದು. ವಿಜಯಪುರ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು  ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


  ಇದನ್ನೂ ಓದಿ: Ilkal Saree Special: ಇಳಕಲ್ ಸೀರೆ ಹೀಗೆ ತಯಾರಾಗುತ್ತೆ! ನೀವೂ ಮಿರಮಿರ ಮಿಂಚಿ!


  ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಮಾಜಿ ಸೈನಿಕರು ಆಯ್ಕೆಯಾದ ಬಳಿಕ ಯಾವುದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕಿದೆ ಎಂದು ತಿಳಿಸಲಾಗಿದೆ.


  ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: