• Home
  • »
  • News
  • »
  • vijayapura
  • »
  • Job Fair: ಕೆಲಸ ಹುಡುಕುತ್ತಿದ್ದೀರಾ? ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ

Job Fair: ಕೆಲಸ ಹುಡುಕುತ್ತಿದ್ದೀರಾ? ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೌದು, ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಪದವಿ ಹಾಗೂ ಯಾವುದೇ ಸ್ನಾತಕೋತ್ತರ ಪದವಿ ಪಡೆದವರು ಸೇರಿದಂತೆ ವಿಕಲಚೇತನರು ಸಹ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿ ತಮಗಿಷ್ಟವಾದ ಕೆಲಸವನ್ನ ಪಡೆದುಕೊಳ್ಳಬಹುದಾಗಿದೆ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವಿಜಯಪುರ, ವತಿಯಿಂದ ಇದೇ ತಿಂಗಳು ನವೆಂಬರ್ 25 ರಂದು ಅಥಣಿ ರಸ್ತೆಯಲ್ಲಿರುವ ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಿನಿ ಉದ್ಯೋಗ ಮೇಳವನ್ನು (Job Fair In Vijayapura) ಹಮ್ಮಿಕೊಳ್ಳಲಾಗಿದೆ.  ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನೀಯರಿಂಗ್ ಪದವಿ ಹಾಗೂ ಯಾವುದೇ ಸ್ನಾತಕೋತ್ತರ ಪದವಿ (ವಿಶೇಷ ಚೇತನರ ಸಹಿತ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ  ಉದ್ಯೋಗ ಮೇಳಕ್ಕೆ (Job Fair)  ಆಗಮಿಸಿ ಭಾಗವಹಿಸಬಹುದಾಗಿದ್ದು, ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.

    ವಿಜಯಪುರ ಜಿಲ್ಲೆಯ ನಿರುದ್ಯೋಗಿಗಳಿಗೆ ಸುವರ್ಣಾವಕಾಶ
    ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನಿರುದ್ಯೋಗ ಯುವಕ, ಯುವತಿಯರಿದ್ದು ಅವರಿಗೆ ಈ ಮಿನಿ ಉದ್ಯೋಗ ಮೇಳ ಸಹಕಾರಿಯಾಗಲಿದೆ. ಹೌದು, ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಪದವಿ ಹಾಗೂ ಯಾವುದೇ ಸ್ನಾತಕೋತ್ತರ ಪದವಿ ಪಡೆದವರು ಸೇರಿದಂತೆ ವಿಕಲಚೇತನರು ಸಹ ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿ ತಮಗಿಷ್ಟವಾದ ಕೆಲಸವನ್ನ ಪಡೆದುಕೊಳ್ಳಬಹುದಾಗಿದೆ.

    ಉದ್ಯೋಗ ಮೇಳ ನಡೆಯಲಿರುವ ಊರುವಿಜಯಪುರ
    ನಡೆಯುವ ದಿನಾಂಕನವೆಂಬರ್ 25
    ವಿಳಾಸಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಜಯಪುರ
    ದೂರವಾಣಿ ಸಂಖ್ಯೆ08352-250383, ಮೊ : 9945000793 ಅಥವಾ 9620095270 ಅಥವಾ 9110856771 ಅಥವಾ 9900607080 ಅಥವಾ 9901497747

    ಯಾರನ್ನು ಸಂಪರ್ಕಿಸಬೇಕು?
    ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ - 08352-250383, ಮೊ : 9945000793, 9620095270, 9110856771, 9900607080, 9901497747 ಅಥವಾ ಖುದ್ದಾಗಿ ವಿಜಯಪುರ ನಗರದಲ್ಲಿರುವ ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಜಯಪುರ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: