• Home
 • »
 • News
 • »
 • vijayapura
 • »
 • Vijayapura Dasara: ಇದು ವಿಜಯಪುರ ದಸರಾ! ಅದ್ದೂರಿತನ ನೋಡಿದ್ರೆ ಆಶ್ಚರ್ಯಪಡ್ತೀರಿ!

Vijayapura Dasara: ಇದು ವಿಜಯಪುರ ದಸರಾ! ಅದ್ದೂರಿತನ ನೋಡಿದ್ರೆ ಆಶ್ಚರ್ಯಪಡ್ತೀರಿ!

ವಿಜಯಪುರ ದಸರಾ ವಿಡಿಯೋ ನೋಡಿ

"ವಿಜಯಪುರ ದಸರಾ ವಿಡಿಯೋ ನೋಡಿ"

ಗ್ರಾಮೀಣ ದಸರಾ, ಜಾನಪದ ದಸರಾ, ಉತ್ತರ ಕರ್ನಾಟಕದ ದಸರಾ ಎಂದೇ ತಾಂಬಾ ಊರಿನ ದಸರಾ ಫುಲ್ ಫೇಮಸ್.

 • Share this:

  ವಿಜಯಪುರ: ಮಹಿಳೆಯರ ಮೆರವಣಿಗೆ, ಡೊಳ್ಳುಕುಣಿತ, ನವಿಲು- ಕುದುರೆ ಕುಣಿತ, ಹೆಜ್ಜೆಮೇಳ, ಜಾನಪದ ನೃತ್ಯ, ಯಕ್ಷಗಾನ, ಬೃಹತ್ ಉತ್ಸವ ಮೂರ್ತಿಗಳ ಪ್ರದರ್ಶನ. ಹೀಗೆ ಕಣ್ಣಿಗೆ ಮುದ ನೀಡೋ ವೈಭವ! ದಸರಾ ಅಂದಾಕ್ಷಣ (Dasara 2022)  ನೆನಪಾಗೋದೇ ಮೈಸೂರು! (Mysuru Dasara) ಆದ್ರೆ ವಿಜಯಪುರ ಜಿಲ್ಲೆಯ (Vijayapura Dasara) ಇಂಡಿ ತಾಲೂಕಿನ ತಾಂಬಾ ಗ್ರಾಮದ ದಸರಾ ಸಂಭ್ರಮದ ಅದ್ದೂರಿತನ ನೋಡಿದ್ರೆ ನೀವು ಆಶ್ಚರ್ಯಪಡುತ್ತೀರಿ. ಉತ್ಸವದ ಅಂಗವಾಗಿ ಗ್ರಾಮದಲ್ಲಿ ನಾಡದೇವಿ ಮೂರ್ತಿ ಮೆರವಣಿಗೆ ಅದ್ದೂರಿಯಾಗಿತ್ತು. 2001 ಮಂದಿ ಸುಮಂಗಲಿಯರು ಕುಂಭ ಹೊತ್ತು ಸಾಗಿದರು.


  ಇದನ್ನೂ ಓದಿ: Mysuru Dasara: ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಇಲ್ಲಿದೆ ನೋಡಿ!


  ಗ್ರಾಮೀಣ ದಸರಾ, ಜಾನಪದ ದಸರಾ, ಉತ್ತರ ಕರ್ನಾಟಕದ ದಸರಾ ಎಂದೇ ತಾಂಬಾ ಊರಿನ ದಸರಾ ಫುಲ್ ಫೇಮಸ್. ತಾಂಬಾ ಗ್ರಾಮದ ಅಂಬಾಭವಾನಿ ಎಜುಕೇಷನ್ ಟ್ರಸ್ಟ್ ಹಾಗೂ ಜಗದಂಬಾ ವಿದ್ಯಾವರ್ಧಕ ಸಂಘ ಹಾಗೂ ತಾಂಬಾದ ಸಾರ್ವಜನಿಕರ ಸಹಯೋಗದೊಂದಿಗೆ ಈ ಉತ್ಸವ ಹಮ್ಮಿಕೊಂಡಿತ್ತು.


  ಇದನ್ನೂ ಓದಿ: Vijayapura Viral Video: ರಣರೋಚಕ ಟಗರು ಕಾಳಗ! ನೋಡ್ತಿದ್ರೆ ಮೈ ಝುಮ್ಮೆನ್ನುತ್ತೆ!


  ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು ಸಾವಿರಾರು ಸಂಖ್ಯೆಯ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉತ್ಸವಕ್ಕೆ ಸಾಕ್ಷಿಯಾದರು. ಒಟ್ಟಿನಲ್ಲಿ ತಾಂಬಾ ದಸರಾ ಅದ್ದೂರಿತನಕ್ಕೆ ತಾಂಬಾ ದಸರಾವೇ ಸಾಟಿ ಅನ್ನೋಥರ ಹಬ್ಬಾನೇ ನಡೆಯಿತು.


  ವರದಿ: ಪ್ರಶಾಂತ ಹೂಗಾರ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: