Vijayapura News: ಉಚಿತವಾಗಿ ಯೋಗ ಕಲಿಯಿರಿ! ವಿಜಯಪುರದಲ್ಲಿ ತರಬೇತಿ ಶಿಬಿರ
ಸಹಜ ಯೋಗವು ಪ್ರತಿನಿತ್ಯ ಒತ್ತಡದ ಬದುಕಿಗೆ ಸಿಲುಕಿಕೊಂಡು ಹೈರಾಣಾಗಿರುವ ಮನುಷ್ಯನಿಗೆ ಆಯಾಸವನ್ನ ಕಳೆದು ಉತ್ಸಾಹ ತುಂಬಬಲ್ಲ, ಒತ್ತಡಗಳನ್ನು ನಿವಾರಿಸಿ ನೆಮ್ಮದಿ ಮತ್ತು ಶಾಂತಿ ನೀಡಬಲ್ಲ ಸರಳ ಸುಂದರ ಯೋಗ ಕ್ರಮವಾಗಿದೆ. ಇದನ್ನು ನೀವೂ ಕಲಿಯಬಹುದು!
ವಿಜಯಪುರ : ಜೂನ್ 21 ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ (International Yoga Day 2022) ಪೂರ್ವಭಾವಿಯಾಗಿ ವಿಜಯಪುರ ನಗರದಲ್ಲಿ ಜೂನ್ 19 ರಂದು ಯೋಗ ತರಬೇತಿ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಸಾರ್ವಜನಿಕರು ಉಚಿತವಾಗಿ ಯೋಗ ಪಡೆಯಬಹುದಾಗಿದೆ ಯೋಗ ಬಲ್ಲವನಿಗೆ ರೋಗ ಇಲ್ಲ ಅನ್ನೋ ಮಾತಿದೆ. ಜೀವನದಲ್ಲಿ ಯೋಗಾಭ್ಯಾಸ ಕಲಿತು ಅದನ್ನು ನಿರಂತರವಾಗಿಸಿದ್ದಲ್ಲಿ ಯಾವುದೇ ರೋಗವೂ ಸುಲಭವಾಗಿ ಕಾಣಿಸಿಕೊಳ್ಳದು. ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯಕ್ಕಾಗಿ ಯೋಗವು (Yoga) ಹೆಚ್ಚು ಪರಿಣಾಮಕಾರಿ. ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನೇನು ಬೆರಳೆಣಿಕೆ ದಿನಗಳಷ್ಟೇ ಬಾಕಿಯಿವೆ. ವಿಜಯಪುರ ನಗರದಲ್ಲಿ (Vijayapura) ಉಚಿತ ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಯೋಗ ಶಿಬಿರ ನಡೆಯುವ ಸ್ಥಳ ಎಲ್ಲಿ?
ಆಸಕ್ತರು ವಿಜಯಪುರ ಜಿಲ್ಲೆಯ ಹಳೇ ಸಿದ್ಧೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀ ಸಿದ್ಧೇಶ್ವರ ಕಲಾ ಮತ್ತು ಮಂಗಲ ಭವನದಲ್ಲಿ ನಡೆಯಲಿರುವ ಯೋಗಾಭ್ಯಾಸದಲ್ಲಿ ಭಾಗವಹಿಸಬಹುದಾಗಿದೆ.
ಯೋಗ ಶಿಬಿರದ ಉದ್ದೇಶ ಏನು?
ಸಹಜ ಯೋಗದ ಮೂಲಕ ಕುಂಡಲಿನಿ ಜಾಗೃತಿ ಹಾಗೂ ಆತ್ಮಸಾಕ್ಷಾತ್ಕಾರ ಸಾರ್ವಜನಿಕ ಕಾರ್ಯವನ್ನ ಹಮ್ಮಿಕೊಳ್ಳಲಾಗಿರುವುದಾಗಿ ಸಹಜಯೋಗ ಸಂಘಟನೆಯ ಮುಖ್ಯಸ್ಥರಾದ ಶಿವಾನಂದ ಮತ್ತು ನೀಲಾ ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ಸಾರ್ವಜನಿಕರು ಮಾಹಿತಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ 9448497754 ಅಥವಾ 9019480408 ಎಂದು ಸಹಜ ಯೋಗ ಸಂಘಟನೆ ತಿಳಿಸಿದೆ.
ಏನಿದು ‘ಸಹಜ ಯೋಗ‘?
ಸಹಜ ಯೋಗ ಸಂಸ್ಥಾಪಕರಾದ ಮಾತಾ ನಿರ್ಮಲಾ ದೇವಿಯವರ ಸನಾತನ ಧರ್ಮಸಾರ ಸೂತ್ರಗಳನ್ನ ಸರಳವಾಗಿ ಕ್ರೋಢೀಕರಿಸಿ ಈ ಆಧುನಿಕ ಯುಗಕ್ಕೆ ಸೂಕ್ತವಾಗಿ ಸಾಮಾನ್ಯರು ಸಾಧಿಸಬಲ್ಲ ಯೋಗ ತಂತ್ರಗಳನ್ನ ಧ್ಯಾನದ ವಿಧದಲ್ಲಿ ಸಾರ್ವಜನಿಕರಿಗೆ ತಿಳಿಸಿಕೊಡುವ ವಿದ್ಯೆಯನ್ನೇ ಸಹಜ ಯೋಗವೆಂದು ಕರೆಯಲಾಗುತ್ತದೆ.
ಸಹಜ ಯೋಗವು ಪ್ರತಿನಿತ್ಯ ಒತ್ತಡದ ಬದುಕಿಗೆ ಸಿಲುಕಿಕೊಂಡು ಹೈರಾಣಾಗಿರುವ ಮನುಷ್ಯನಿಗೆ ಆಯಾಸವನ್ನ ಕಳೆದು ಉತ್ಸಾಹ ತುಂಬಬಲ್ಲ, ಒತ್ತಡಗಳನ್ನು ನಿವಾರಿಸಿ ನೆಮ್ಮದಿ ಮತ್ತು ಶಾಂತಿ ನೀಡಬಲ್ಲ ಸರಳ ಸುಂದರ ಯೋಗ ಕ್ರಮವಾಗಿದೆ.
ವಯೋಮಿತಿ ಎಷ್ಟಿರಬೇಕು?
ಶಿಬಿರದಲ್ಲಿ ಭಾಗವಹಿಸಲು ಆಸಕ್ತರಿರುವವರಿಗೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ವಯೋಮಿತಿಯನ್ನು ವಿಧಿಸಲಾಗಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರು ಸಹ ಈ ಶಿಬಿರದಲ್ಲಿ ಭಾಗಿಯಾಗಬಹುದು ಎಂದು ಸಂಘಟಕರು ತಿಳಿಸಿದ್ದಾರೆ. ಜೊತೆಗೆ ಮಹಿಳೆಯರು ಸಹ ಈ ಶಿಬಿರದಲ್ಲಿ ಭಾಗವಗಿಸಲು ಇಲ್ಲಿ ಅವಕಾಶವನ್ನ ಮಾಡಿಕೊಡಲಾಗಿದೆ.