Yoga Day In Vijayapura: ವಿಜಯಪುರದ ಜನರೇ, ಗೋಲ ಗುಂಬಜ್ ಆವರಣದಲ್ಲಿ ಯೋಗ ಮಾಡಿ!

ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಗುಮ್ಮಟ ನಗರಿ ವಿಜಯಪುರ ಜಿಲ್ಲೆ ಸಜ್ಜಾಗಿ ನಿಂತಿದೆ. ಮಂಗಳವಾರ ಗೋಲ ಗುಂಬಜ್ ಆವರಣದಲ್ಲಿ ಸಾವಿರಾರು ಯೋಗಾರ್ಥಿಗಳು ಏಕಕಾಲಕ್ಕೆ ಯೋಗ ಪ್ರದರ್ಶನ ನಡೆಸಲಿದ್ದಾರೆ.

ಗೋಲ ಗುಂಬಜ್

ಗೋಲ ಗುಂಬಜ್

 • Share this:

  ವಿಜಯಪುರ: ದೇಶದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜೂನ್ 21ರಂದು ದೇಶಾದ್ಯಂತ 75 ಇತಿಹಾಸ ಪ್ರಸಿದ್ಧ ಹಾಗೂ ಪಾರಂಪರಿಕ ತಾಣಗಳಲ್ಲಿ ಯೋಗ ದಿನಾಚರಣೆಯನ್ನು ಏಕಕಾಲಕ್ಕೆ ಆಚರಿಸಲು ಕೇಂದ್ರ ಸರಕಾರ ಕರೆ ನೀಡಿತ್ತು. ಅದರಂತೆ ವಿಜಯಪುರ ಜಿಲ್ಲೆಯೂ ಸಿದ್ಧತೆ ನಡೆಸಿಕೊಂಡಿದೆ. ಕೇಂದ್ರ ಸರ್ಕಾರದ ಆದೇಶದಂತೆ ವಿಶ್ವ ಪ್ರಸಿದ್ಧ ಗೋಲ ಗುಂಬಜ್ ಆವರಣದಲ್ಲಿ ಯೋಗ ಪ್ರದರ್ಶನ ನಡೆಯಲಿದೆ. ಹಾಗಾದರೆ ವಿಜಯಪುರದ ಗೋಲ್ ಗುಂಬಜ್ ಆವರಣದಲ್ಲಿ ನಡೆಯಲಿರುವ ಯೋಗ ಪ್ರದರ್ಶನ ಹೇಗಿರಲಿದೆ? 


  ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಭಾರತದ ಸಾಫ್ಟ ವೇರ್ ಟೆಕ್ನಾಲಜಿ ಪಾರ್ಕ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಯೋಗ ದಿನಾಚರಣೆ ಗೋಲ ಗುಂಬಜ್ ಆವರಣದಲ್ಲಿ ಕಾರ್ಯಕ್ರಮ ಮಂಗಳವಾರ, ಜೂನ್ 21ರಂದು ಬೆಳಗ್ಗೆ 5 ಗಂಟೆಗೆ ನಡೆಯಲಿದೆ.

  ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ವಾಹನ ವ್ಯವಸ್ಥೆ
  ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಕ್ರೀಡಾಪಟುಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

  ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಕರೆ ತರಲು ವಾಹನದ ವ್ಯವಸ್ಥೆಯನ್ನೂ ಜಿಲ್ಲಾಡಳಿತ ಮಾಡಿವೆ.


  ಮುಂಜಾನೆ 5 ಗಂಟೆಗೆ ತಯಾರಿ
  ಯೋಗಾರ್ಥಿಗಳು ಕಡ್ಡಾಯವಾಗಿ ಬೆಳಗ್ಗೆ 5 ಗಂಟೆಗೆ ಹಾಜರಿರಬೇಕಾಗುತ್ತದೆ. ತಲಾ 50 ವಿದ್ಯಾರ್ಥಿಗಳಿಗೆ ಒಬ್ಬರಂತೆ ಮಾನಿಟರಿಂಗ್ ಮಾಡಲಾಗುತ್ತದೆ. ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.


  ಸ್ಥಳ:   ಗೋಲ ಗುಂಬಜ್ ಆವರಣ
  ಸಮಯ: ಬೆಳಗ್ಗೆ 5 ಗಂಟೆಗೆ

  Gol Gumbaz
  ಗೋಲ ಗುಮ್ಮಟಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಕೇಂದ್ರ ಸಚಿವರು ಸೇರಿ ಹಲವರು ಭಾಗಿ
  ಕೇಂದ್ರ ಸಚಿವ ಭಗವಂತ್ ಖೂಬಾ, ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಉಮೇಶ ಕತ್ತಿ, ಜಿಲ್ಲೆಯ ಎಲ್ಲ ಶಾಸಕರು ಸೇರಿದಂತೆ, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕೆ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ .ಎಲ್.ಚಂಚಲಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ನಾಗರಾಜ್ ಬಿ., ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜು ಮುಜುಮದಾರ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.


  ಇದನ್ನೂ ಓದಿ: Almatti: ಆಲಮಟ್ಟಿಯಲ್ಲಿ ಮಾಯಾಲೋಕ! ಇಲ್ಲಿದೆ ನೋಡಿ ವಿಡಿಯೋ

  ಪ್ರಧಾನಿ ಭಾಷಣ ನೇರ ಪ್ರಸಾರ
  ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನಾಳೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಅಲ್ಲಿಯೇ ದೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿಯವರು ಮಾತನಾಡಲಿದ್ದಾರೆ. ವಿಜಯಪುರ ಜಿಲ್ಲೆ ಮಂದಿಗೂ ಪ್ರಧಾನಿ ಮಾತು ವೀಕ್ಷಿಸುವಂತಾಗಲು ಮೈಸೂರು ಯೋಗ ದಿನದ ಉದ್ಘಾಟನೆ ಹಾಗೂ ಭಾಷಣದ ನೇರ ಪ್ರಸಾರ ವೀಕ್ಷಣೆ ವ್ಯವಸ್ಥೆಗಳನ್ನು ಜಿಲ್ಲಾಡಳಿತವು ಕಲ್ಪಿಸಲಿದೆ.

  ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು

  ಗೋಲ ಗುಮ್ಮಟದಲ್ಲಿ ಒಂದೇ ಅಲ್ಲ..
  ಇದಲ್ಲದೇ, ಜಿಲ್ಲೆಯ ಕೊಲ್ಹಾರ ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಘ ಶ್ರೀ ಎಸ್.ಕೆ.ಬೆಳ್ಳುಬ್ಬಿ ಪದವಿ ಪೂರ್ವ ಕಾಲೇಜು ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾರ್ಗದರ್ಶನದಲ್ಲಿ ಮುಕ್ತ ಯೋಗ ಶಿಬಿರವನ್ನು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಜಯಪುರ ಜನತೆ ಕಾರ್ಯಕ್ರಮದಲ್ಲಿಯೂ ಮುಕ್ತವಾಗಿ ಭಾಗವಹಿಸಬಹುದೆಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

  ವರದಿ ಪ್ರಶಾಂತ ಹೂಗಾರನ್ಯೂಸ್ 18 ಕನ್ನಡ ವಿಜಯಪುರ
  Published by:guruganesh bhat
  First published: