• ಹೋಂ
  • »
  • ನ್ಯೂಸ್
  • »
  • ವಿಜಯಪುರ
  • »
  • Sainik School: ಸೈನಿಕ ಶಾಲೆಗೆ ಪ್ರವೇಶ ಪಡೆದ 25 ಹೆಣ್ಮಕ್ಕಳು, ಕಡು ಕಷ್ಟದ ತರಬೇತಿ ಇವರಿಗೆ ನೀರು ಕುಡಿದಷ್ಟೇ ಸಲೀಸು!

Sainik School: ಸೈನಿಕ ಶಾಲೆಗೆ ಪ್ರವೇಶ ಪಡೆದ 25 ಹೆಣ್ಮಕ್ಕಳು, ಕಡು ಕಷ್ಟದ ತರಬೇತಿ ಇವರಿಗೆ ನೀರು ಕುಡಿದಷ್ಟೇ ಸಲೀಸು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸೈನಿಕ ಶಾಲೆಯಲ್ಲಿ ಮೊದಲ ಬಾರಿಗೆ ಹೆಣ್ಮಕ್ಕಳು ಪ್ರವೇಶ ಪಡೆದಿದ್ದಾರೆ. ಆದರೆ ಹೇಗಿರುತ್ತೆ ಇದರ ಆಯ್ಕೆ ಕ್ರಮ?.

  • News18 Kannada
  • 5-MIN READ
  • Last Updated :
  • Bijapur, India
  • Share this:

    ವಿಜಯಪುರ: ಶಿಸ್ತುಬದ್ಧ ಹೆಜ್ಜೆ, ಚುರುಕಿನ ಮಾತು, ಅದೆಂತಹದ್ದೇ ಟಾಸ್ಕ್ ಇದ್ರೂ ಸವಾಲಾಗಿ ಸ್ವೀಕರಿಸೋ ಸ್ಟೂಡೆಂಟ್ಸ್. ಯೆಸ್, ಇದೆಲ್ಲವೂ ಸೈನಿಕ ಶಾಲೆಯ ಸ್ಪೆಷಲ್. ಆದ್ರೆ, ಈ ಹಿಂದೆ ಇಂತಹ ಚಟುವಟಿಕೆಗಳು ಏನಿದ್ರೂ ಹುಡುಗರಿಗಷ್ಟೇ ಸೀಮಿತವಾಗಿತ್ತು. ಇದೀಗ ಆ ಜಾಗಕ್ಕೆ ವಿದ್ಯಾರ್ಥಿನಿಯರು (International Women's Day 2023) ಎಂಟ್ರಿ ಕೊಟ್ಟಿದ್ದು, ಮೊದಲ ಬಾರಿಗೆ ಹುಡುಗಿಯರು ಸೈನಿಕ ಶಾಲೆಯಲ್ಲಿ (BIjapur Sainik School) ತನ್ನ ಅಪ್ರತಿಮ ಸಾಧನೆ ಮೆರೆಯುತ್ತಿದ್ದಾರೆ.


    ಮೊದಲ ಬಾರಿಗೆ ಹೆಣ್ಮಕ್ಕಳಿಗೆ ಎಂಟ್ರಿ
    ವಿಜಯಪುರ ನಗರದ ಹೊರ ವಲಯದಲ್ಲಿರುವ ಸೈನಿಕ ಶಾಲೆಯಲ್ಲಿ ಇದುವರೆಗೂ ಹೆಣ್ಮಕ್ಕಳ ಕಲಿಕೆಗೆ ಅವಕಾಶವಿರಲಿಲ್ಲ. ಆದ್ರೀಗ ಹೆಣ್ಮಕ್ಕಳಿಗೂ ಅವಕಾಶ ದೊರತಿದ್ದು 25ಕ್ಕೂ ಹೆಚ್ಚು ಜನ ಹೆಣ್ಮಕ್ಕಳು ವಿದ್ಯಾರ್ಥಿನಿಯರಾಗಿ ಆಯ್ಕೆಯಾಗಿ ಕಠಿಣ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.


    ಪ್ರಾಂಶುಪಾಲರಾಗಿಯೂ ಮಹಿಳೆ
    ಎರಡು ವರ್ಷಗಳ ಹಿಂದೆಯೇ ಅವಕಾಶ ಸಿಕ್ಕರೂ ಕೊರೊನಾ ಕಾರಣದಿಂದ ಈ ಹೆಣ್ಮಕ್ಕಳು ಶಾಲೆಯ ಮೆಟ್ಟಿಲು ಹತ್ತಲು ಸಾಧ್ಯವಾಗಿರಲಿಲ್ಲ. 1963 ರಿಂದ ಇದೆ ಮೊಟ್ಟ ಮೊದಲ ಬಾರಿಗೆ ಇಲ್ಲಿಗೆ ಮಹಿಳಾ ವಿದ್ಯಾರ್ಥಿಗಳು ಅಷ್ಟೇ ಅಲ್ದೇ, ಮಹಿಳಾ ಪ್ರಾಂಶುಪಾಲರು ಕೂಡಾ ಆಯ್ಕೆಗೊಂಡಿರುವುದು ಸಂತಸದ ವಿಚಾರವೇ ಸರಿ.


    ವಿವಿಧ ಸೇನಾ ತರಬೇತಿ
    ವಿಜಯಪುರದ ಸೈನಿಕ ಶಾಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿನಿಯರು ಸದ್ಯ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿದಿನ ಕ್ರೀಡೆ, ಸ್ವಿಮ್ಮಿಂಗ್, ಪರೇಡ್ ಸೇರಿದಂತೆ ಸೇನೆಗೆ ಬೇಕಾದ ತರಬೇತಿ ನೀಡಲಾಗುತ್ತೆ. ಅಷ್ಟೇ ಗುಣಮಟ್ಟದ ತಿಂಡಿ, ಊಟ, ಉಪಹಾರವನ್ನ ನೀಡಲಾಗುತ್ತೆ. ಮುಂದೆ ಸೇನೆಗೆ ಸೇರಲಿರುವ ಈ ವಿದ್ಯಾರ್ಥಿನಿಯರಿಗೆ ಪೂರಕ ವಾತಾವರಣವೂ ಇಲ್ಲಿದೆ.


    ಸಮರ್ಥ ಪ್ರಾಂಶುಪಾಲೆಯೂ ಹೌದು
    ಮೊದಲ ಮಹಿಳಾ ಪ್ರಾಂಶುಪಾಲೆ ಪ್ರತಿಭಾ ಬಿಷ್ತ್ ಅವರು ಈ ಶಾಲೆಯನ್ನ ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರು ಈ ಹಿಂದೆ ಉಪ ಕಮಾಂಡ್ ಶಿಕ್ಷಣ ಅಧಿಕಾರಿಯಾಗಿ, ಶಿಕ್ಷಣ ನಿರ್ದೇಶನಾಲಯದಲ್ಲಿ ಜಂಟಿ ನಿರ್ದೇಶಕರಾಗಿ, ಏರ್ ಹೆಡ್ಕ್ವಾರ್ಟರ್ಸ್ ಜಂಟಿ ನಿರ್ದೇಶಕರಾಗಿ ಮತ್ತು ಟ್ರೈನಿಂಗ್ ಕಮಾಂಡ್ ನಲ್ಲಿ ಆಡಳಿತ ತರಬೇತುದಾರಾಗಿ ಸೇವೆ ಸಲ್ಲಿಸಿದ್ದಾರೆ.


    ಇದನ್ನೂ ಓದಿ: Vijayapura: ಯಾವ್ದೂ ವೇಸ್ಟ್ ಅಲ್ಲ! ಕಸದಿಂದ ಗೊಬ್ಬರ ತಯಾರಿಸುತ್ತಿದೆ ವಿಜಯಪುರ ಪಾಲಿಕೆ!




    ಹೀಗೆ ನಡೆಯುತ್ತೆ ಆಯ್ಕೆ
    ಪ್ರತಿ ವರ್ಷ ಶೈಕ್ಷಣಿಕ ಸಾಲಿಗೆ ದೇಶದಾದ್ಯಂತ ಇರುವ ಸೈನಿಕ ಶಾಲೆಗಳಲ್ಲಿ 6 ನೇ ತರಗತಿ ಮತ್ತು 9ನೇ ತರಗತಿಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗುತ್ತದೆ. ದೇಶದಲ್ಲಿ ಇರುವ ಒಟ್ಟು 33 ಸೈನಿಕ ಶಾಲೆಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಪ್ರವೇಶ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕು. ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ಇದ್ದು, ಇದರಲ್ಲಿ ಉತ್ತಮ ಅಂಕ ಪಡೆದವರು ಆರು ಮತ್ತು ಒಂಬತ್ತನೇ ತರಗತಿಗೆ ಪ್ರವೇಶ ಪಡೆಯುತ್ತಾರೆ.


    ಇದನ್ನೂ ಓದಿ: Uttara Kannada: ಸಲಾಂ ಸಾಧಕಿ! ಇವರು ನೂರಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿರುವ ಗಟ್ಟಿಗಿತ್ತಿ ವೈದ್ಯೆ!


    ಅದೇನೆ ಇರಲಿ, ಸೈನಿಕ ಶಾಲೆಗೆ ದಶಕಗಳ ನಂತರ ಮೊದಲ ಬಾರಿಗೆ ಮಹಿಳಾ ವಿದ್ಯಾರ್ಥಿನಿಯರು, ಪ್ರಾಂಶುಪಾಲೆ ಆಯ್ಕೆಯಾಗಿದ್ದು ನಿಜಕ್ಕೂ ಖುಷಿಯ ಸಂಗತಿಯೇ ಸರಿ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: