ವಿಜಯಪುರ: ಸಾಲಾಗಿ ಜೋಡಿಸಿರೋ ಕೈಚೀಲಗಳು. ಅಲಂಕಾರಿಕ ಒಡವೆ, ಆಭರಣಗಳು. ಇನ್ನೊಂದೆಡೆ ಕೆಲಸದಲ್ಲಿ ನಿರತರಾಗಿರೋ ಮಹಿಳೆಯರು. ಹೌದು, ಇಲ್ಲಿ ಎಲ್ಲೇ ನೋಡಿದ್ರೂ ಬರೇ ಮಹಿಳೆಯರಷ್ಟೇ ಕಾಣ್ತಾರೆ. ಯಾಕೆಂದ್ರೆ ಇದು ಮಹಿಳೆಯೊಬ್ಬಳು ಮಹಿಳೆಯರಿಗಾಗಿಯೇ (Inspiration Story) ಕಟ್ಟಿದ ಸಂಸ್ಥೆ! ಇದುವೇ ಸಬಲಾ ಹ್ಯಾಂಡಿಕ್ರಾಫ್ಟ್ಸ್. ವಿಜಯಪುರದ ಮಹಿಳಾ ಸ್ವಾವಲಂಬಿ ಯಶೋಗಾಥೆಯ (Success Story) ಸಬಲಾ ಹ್ಯಾಂಡಿಕ್ರಾಫ್ಟ್ಸ್ ಸಂಸ್ಥೆಯ (Sabala Handicraft) ಸಂಸ್ಥಾಪಕಿ ಮಲ್ಲಮ್ಮ ಯಾಳವಾರ್. ಬಿ.ಕಾಂ ಪದವೀಧರೆ ಆಗಿ ಉದ್ಯೋಗ ಮಾಡ್ತಿದ್ರೂ ಯಲ್ಲಮ್ಮ ಯಾಳವಾರ (Mallamma Yalawar) ಇತರ ಮಹಿಳೆಯರಿಗಾಗಿ ಏನಾದ್ರೂ ಮಾಡ್ಬೇಕು ಎಂಬ ಛಲ ಹೊಂದಿದ್ದ ಈ ಮಹಿಳೆಯ ಮಾದರಿ ಮಹಿಳೆಯಾಗಿ
ಮಲ್ಲಮ್ಮನವರು 1986 ರಲ್ಲಿ ಸಬಲಾ ಎಂಬ ಸಂಘಟನೆ ಸ್ಥಾಪಿಸಿ ಮಹಿಳೆಯರಿಗಾಗಿ ಸ್ವಉದ್ಯೋಗದ ತರಬೇತಿ ನೀಡೋಕೆ ಶುರುಮಾಡಿದ್ರು. 1992ರಲ್ಲಿಯೇ 25 ಹಳ್ಳಿಗಳ ಸರ್ವೇ ನಡೆಸಿ ಶಿಕ್ಷಣದಿಂದ ವಂಚಿತರಾಗಿದ್ದ 2 ಸಾವಿರ ಮಕ್ಕಳನ್ನು ಮರಳಿ ಶಾಲೆಗೆ ಕರೆ ತಂದಿದ್ದ ಮಲ್ಲಮ್ಮ, ಆಲಮಟ್ಟಿ ಜಲಾಶಯದ ನಿರಾಶ್ರಿತ ಮಹಿಳೆಯರಿಗೆ ಉದ್ಯೋಗ ನೀಡಿ ಅನ್ನದಾತೆಯಾಗಿದ್ಧಾರೆ.
ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬೋ ಕಾರ್ಯ
ಮೂಲತಃ ಸಿಂಧಗಿಯವರಾದ ಮಲ್ಲಮ್ಮ ಮದುವೆಯ ನಂತರ ವಿಜಯಪುರದಲ್ಲಿ ನೆಲೆಸಿದ್ದಾರೆ. ಸದ್ಯ ಅವರ ಸಬಲಾ ಸಂಸ್ಥೆಯಲ್ಲಿ ಮಹಿಳೆಯರಿಗೆ ಮೋಟಾರ್ ಪಂಪ್ ರಿಪೇರಿ, ಬ್ಯಾಗ್ಗಳ ತಯಾರಿ, ಅಲಂಕಾರಿಕ ಆಭರಣಗಳ ತಯಾರಿಕೆ, ನೇಗಿ ನೇಯುವದು ಹೀಗೆ ಹಲವು ವಿಧದ ತರಬೇತಿ ನೀಡುತ್ತಿದ್ದಾರೆ. ಹೀಗೆ ಮಹಿಳೆಯರಲ್ಲೂ ಆತ್ಮವಿಶ್ವಾಸ ತುಂಬಿ ತಮ್ಮ ಕಾಲ ಮೇಲೆ ನಿಲ್ಲುವಂತಾಗಲು ಮಲ್ಲಮ್ಮ ಪ್ರೇರಣೆಯಾಗಿದ್ದಾರೆ.
ಇದನ್ನೂ ಓದಿ: Vijayapura: ಬಾಲಕನ ನೆರವಿಗೆ ನಿಂತ ಅಪ್ಪು ಫ್ಯಾನ್ಸ್; ಇವರು ಭೀಮಾತೀರದ ಹೃದಯವಂತರು!
ಬದುಕು ಕಟ್ಟಿಕೊಂಡ ಸಾವಿರಾರು ಮಹಿಳೆಯರು
ದೇವದಾಸಿ ಪದ್ಧತಿ ವಿರುದ್ಧವೂ ಜಾಗೃತಿ ಮೂಡಿಸಿದ್ದಾರೆ ಈ ಮಾದರಿ ಮಹಿಳೆ. ಒಂದು ಹೆಜ್ಜೆ ಮುಂದೆ ಹೋಗಿ 1995ರಲ್ಲಿಯೇ ಚೈತನ್ಯಾ ಮಹಿಳಾ ಸಹಕಾರಿ ಬ್ಯಾಂಕ್ ಒಂದನ್ನು ಸ್ಥಾಪಿಸಿದ್ದರು. ಈ ಬ್ಯಾಂಕ್ ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲವನ್ನು ಕೂಡಾ ಒದಗಿಸುತ್ತೆ. ಇಲ್ಲಿ ತರಬೇತಿ ಪಡೆದ ಸಾವಿರಾರು ಮಹಿಳೆಯರು ಇಂದು ಚೈತನ್ಯ ಬ್ಯಾಂಕ್ ಮೂಲಕ ಸಾಲ ಪಡೆದು ಸ್ವಂತ ಉದ್ಯೋಗ ಸೃಷ್ಟಿಸಿಕೊಂಡಿದ್ದಾರೆ. ಇಲ್ಲಿ ಕರಕುಶಲ ತರಬೇತಿ ಪಡೆದು ಮಹಿಳೆಯರು ಸಬಲಾ ಸಂಸ್ಥೆಯ ಮೂಲಕವೇ ತಮಗೆ ಬೇಕಾದ ಕಚ್ಚಾ ವಸ್ತುಗಳನ್ನುಪಡೆದುಕೊಳ್ಳುತ್ತಾರೆ.
ಇದನ್ನೂ ಓದಿ: Vijayapura: ನಷ್ಟವಾಯ್ತೆಂದು ಎದೆಗುಂದಲಿಲ್ಲ ಈ ರೈತ, ಚೆಂಡು ಹೂವಿನಿಂದ ಗೊಬ್ಬರ!
ವಿದೇಶ ವಿಮಾನ ಏರುವ ಕರಕುಶಲ ವಸ್ತುಗಳು
ಇವರು ತಯಾರಿಸಿದ ಕರಕುಶಲ ವಸ್ತುಗಳು ಅಮೆರಿಕಾ, ಕೆನಡಾ, ಜಪಾನ್ನಂತಹ ದೇಶಗಳಿಗೂ ರಫ್ತು ಆಗ್ತವೆ. ಹೀಗೆ ಸಬಲಾ ಸಂಸ್ಥೆ ಸಾವಿರಾರು ಹೆಣ್ಮಕ್ಕಳ ಬಾಳಿಗೆ ಬೆಳಕಾಗಿದ್ದು, ಮಲ್ಲಮ್ಮ ಯಳವಾರ ಯಶೋಗಾಥೆಗೂ ಹಿಡಿದ ಕೈಗನ್ನಡಿಯಾಗಿದೆ.
ವರದಿ: ಪ್ರಶಾಂತ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ