• Home
  • »
  • News
  • »
  • vijayapura
  • »
  • Good News: ಅಯ್ಯಪ್ಪ ಭಕ್ತರಿಗೆ ಶುಭಸುದ್ದಿ; ಉತ್ತರ ಕರ್ನಾಟಕದಿಂದ ವಿಶೇಷ ರೈಲು ಘೋಷಣೆ

Good News: ಅಯ್ಯಪ್ಪ ಭಕ್ತರಿಗೆ ಶುಭಸುದ್ದಿ; ಉತ್ತರ ಕರ್ನಾಟಕದಿಂದ ವಿಶೇಷ ರೈಲು ಘೋಷಣೆ

ಸ್ವಾಮಿ ಅಯ್ಯಪ್ಪ

ಸ್ವಾಮಿ ಅಯ್ಯಪ್ಪ

Vijayapura Kottayam Train: ವಿಜಯಪುರ ಕೊಟ್ಟಾಯಂ-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಮತ್ತು ಹುಬ್ಬಳ್ಳಿ -ವಿಜಯಪುರ -ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು ಹೊಸದಾಗಿ ಸಂಚರಿಸಲಿವೆ.

  • Share this:

    ವಿಜಯಪುರ:  ಕರ್ನಾಟಕದಲ್ಲಿನ ಅಯ್ಯಪ್ಪ ಭಕ್ತಾದಿಗಳಿಗೆ ಶುಭಸುದ್ದಿಯೊಂದನ್ನು ಭಾರತೀಯ ರೈಲ್ವೇ ನೀಡಿದೆ. ಶಬರಿಮಲೆ ದೇಗುಲಕ್ಕೆ ಹತ್ತಿರವಿರುವ ಕೊಟ್ಟಾಯಂ ರೈಲು ನಿಲ್ದಾಣಕ್ಕೆ ವಿಜಯಪುರದಿಂದ ಹೊಸ ರೈಲನ್ನು ಘೋಷಿಸಲಾಗಿದೆ. ವಿಜಯಪುರ ಕೊಟ್ಟಾಯಂ-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಮತ್ತು ಹುಬ್ಬಳ್ಳಿ -ವಿಜಯಪುರ -ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ (Hubballi Vijayapura Kottayam Train) ರೈಲುಗಳು ಹೊಸದಾಗಿ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ ಮೂಲಗಳು ತಿಳಿಸಿವೆ. ವಿಜಯಪುರ- ಕೊಟ್ಟಾಯಂ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಖ್ಯೆ ಹೀಗಿದೆ 07385 ಈ ವಿಶೇಷ ರೈಲು 2022 ನವೆಂಬರ್ 21 ರಿಂದ ಆರಂಭವಾಗಲಿದೆ. 2023 ಜನವರಿ 30ರ ವರೆಗೆ ವಿಜಯಪುರದಿಂದ (Vijayapura News) ಪ್ರತಿ ಸೋಮವಾರದಂದು ರಾತ್ರಿ 11ಕ್ಕೆ ಹೊರಡಲಿದ್ದು, ಮೂರನೇ ದಿನ (ಬುಧವಾರ) ಬೆಳಗಿನ ಜಾವ 2.20ಕ್ಕೆ ಕೊಟ್ಟಾಯಂ ತಲುಪಲಿದೆ.


    ಇದೇ ಮಾರ್ಗದಲ್ಲಿ ಹಿಂದಿರುಗುವ ಕೊಟ್ಟಾಯಂ ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಖ್ಯೆ, 07386 ರೈಲು ನ. 23ರಿಂದ ಫೆಬ್ರುವರಿ 1ರ ವರೆಗೆ ಕೊಟ್ಟಾಯಂ ನಿಲ್ದಾಣದಿಂದ ಪ್ರತಿ ಬುಧವಾರ ಮಧ್ಯಾಹ್ನ 3.30ಕ್ಕೆ ಹೊರಡಲಿದ್ದು, ಮರುದಿನ ರಾತ್ರಿ 08.30ಕ್ಕೆ ವಿಜಯಪುರ ನಿಲ್ದಾಣ ತಲುಪಲಿದೆ.


    ಪ್ರಯಾಣಿಕರೇ ಗಮನಿಸಿ, ಈ ನಿಲ್ದಾಣಗಳಲ್ಲಿ ನಿಲ್ಲಲಿದೆ ರೈಲು
    ಈ ರೈಲು ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಗದಗ, ಹುಬ್ಬಳ್ಳಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ, ತಿರುಪ್ಪರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂ‌ ಮತ್ತು ಎರ್ನಾಕುಲಂ ಟೌನ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.


    ಹುಬ್ಬಳ್ಳಿ - ವಿಜಯಪುರ ಸಾಪ್ತಾಹಿಕ ಕಾಯ್ದಿರಿಸಿದ ವಿಶೇಷ ಎಕ್ಸ್​ಪ್ರೆಸ್ ರೈಲು 07387 ನವೆಂಬರ್ 21 ರಿಂದ ಜನವರಿ 30ರ ವರೆಗೆ ಹುಬ್ಬಳ್ಳಿಯಿಂದ ಪ್ರತಿ ಸೋಮವಾರದಂದು ಮಧ್ಯಾಹ್ನ 3ಕ್ಕೆ ಹೊರಡಲಿದ್ದು, ಅದೇ ದಿನ ರಾತ್ರಿ 08.:30 ಕ್ಕೆ ವಿಜಯಪುರ ತಲುಪಲಿದೆ.
    ಇದೇ ಮಾರ್ಗದಲ್ಲಿ ಹಿಂದಿರುಗುವ ವಿಜಯಪುರ - ಹುಬ್ಬಳ್ಳಿ ಸಾಪ್ತಾಹಿಕ ರೈಲು ಪ್ರತಿ ಬುಧವಾರದಂದು ಮಧ್ಯಾಹ್ನ ಕಾಯ್ದಿರಿಸದ ವಿಶೇಷ ಎಕ್ಸ್​ಪ್ರೆಸ್ ರೈಲು 07388 ನವೆಂಬರ್ 24 ರಿಂದ ಫೆಬ್ರುವರಿ 2 ರವರೆಗೆ ವಿಜಯಪುರ ನಿಲ್ದಾಣದಿಂದ ಪ್ರತಿ ಗುರುವಾರದಂದು ರಾತ್ರಿ 9ಕ್ಕೆ ಹೊರಡಲಿದ್ದು, ಮರುದಿನ ಬೆಳಗಿನ ಜಾವ 2.45ಕ್ಕೆ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.


    ಇದನ್ನೂ ಓದಿ: Vijayapura: ಸಹಜ ಹೆರಿಗೆಗೆ ಫೇಮಸ್ ಈ ಸರ್ಕಾರಿ ಆಸ್ಪತ್ರೆ! ಗರ್ಭಿಣಿಯರು ಎಲ್ಲೆಲ್ಲಿಂದ್ಲೋ ಹುಡುಕಿ ಬರ್ತಾರೆ


    ಈ ರೈಲು ಬಸವನ ಬಾಗೇವಾಡಿ ರೋಡ್, ಅಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು ಮತ್ತು ಗದಗ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ಇದನ್ನೂ ಓದಿ: Bagalakote Viral Video: ಕೃಷ್ಣಾ ನದಿಯಲ್ಲಿ ಟ್ರ್ಯಾಕ್ಟರ್ ತೇಲುತ್ತೆ! ಕಬ್ಬು ಅತ್ತಂದಿತ್ತ ದಾಟುತ್ತೆ!


    ಅವಳಿ ಜಿಲ್ಲೆಗಳ ಜನರಿಗೆ ಅನುಕೂಲ
    ವಿಜಯಪುರ ನಗರದಿಂದ ಹುಬ್ಬಳ್ಳಿಗೆ ಸಂಚರಿಸಲು ಪ್ರಯಾಣಿಕರಿಗೆ ರೈಲು ಗಾಡಿಗಳ ಸಂಖ್ಯೆ ಕಡಿಮೆ ಇತ್ತು. ರೈಲುಗಳು ಸಂಚಾರವನ್ಬ ನಡೆಸಿದರೆ ವಿಜಯಪುರ-ಬಾಗಲಕೋಟೆ ಈ ಪ್ರಯಾಣಿಕರಿಗೆ ಬಹಳಷ್ಟು ಉಪಯೋಗವಾಗಲಿದೆ. ಮತ್ತು KSRTC ಬಸ್ ಟಿಕೇಟ್​ಗಿಂತಲೂ ಕಡಿಮೆ ಹಣದಲ್ಲಿ ಟಿಕೆಟ್ ಪಡೆದು ಆರಾಮವಾಗಿ ರೈಲುಗಾಡಿಯಲ್ಲಿ ಪ್ರಯಾಣಿಸಬಹುದಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: