Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

Independence Day 2022: ಈ ಪಾದಯಾತ್ರೆ ಆಲಮಟ್ಟಿಯಿಂದ ತಾಳಿಕೋಟೆಯವರೆಗೆ, ಅಂದ್ರೆ ಸುಮಾರು 75 ಕಿಲೋಮೀಟರ್ ಸಾಗ್ತಿದೆ. ಒಂದಲ್ಲ ಎರಡಲ್ಲ, ವಿಜಯಪುರದಲ್ಲಿ ಬರೋಬ್ಬರಿ 8 ದಿನ ಪಾದಯಾತ್ರೆ ಮಾಡ್ತಿದ್ದಾರೆ. 10 ಸಾವ್ರಕ್ಕೂ ಹೆಚ್ ಜನ ನಾಮುಂದು ತಾಮುಂದು ಅಂತ ನಡೀತಿದ್ದಾರೆ.

ಬೋಲೋ ಭಾರತ್ ಮಾತಾಕಿ ಜೈ!

"ಬೋಲೋ ಭಾರತ್ ಮಾತಾಕಿ ಜೈ!"

 • Share this:
  ಒಂದ್ಕಡೆ ಶಾಲೆ ಮಕ್ಳು, ಶಿಕ್ಷಕರು, ಭಾರತೀಯ ಸೇನೆಯ (Indian Army) ಮಾಜಿ ಸೈನಿಕರು, ಇನ್ನೊಂದ್ಕಡೆ ಕಲಾ ತಂಡಗಳು.. ಕಿತ್ತೂರ ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂತಹ ಹುತಾತ್ಮರ ಟ್ಯಾಬ್ಲೋ, ಎಲ್ಲಿ ನೋಡಿದ್ರೂ ತ್ರಿವರ್ಣ ಧ್ವಜ! ಆ ಪಾದಯಾತ್ರೆಯಲ್ಲಿದ್ದ ಪುರುಷರು ಬಿಳಿ ಜುಬ್ಬಾಪೈಜಾಮ್ ಧರಿಸಿದ್ರು, ತಲೆಗೆ ತ್ರಿವರ್ಣ ಪೇಟಾ ಹಾಕಿದ್ರು, ಕೈಲ್ಲೊಂದು ರಾಷ್ಟ್ರಧ್ವಜ (Indian Flag) ಹಿಡಿದು ಭಾರತ್ ಮಾತಾಕಿ ಜೈ ಅಂತ ಘೋಷಣೆ ಕೂಗ್ತಿದ್ರು. ನೆರೆದ ಎಲ್ರಿಗೂ ಆ ಮೈ ರೋಮಾಂಚನ ಆಗ್ತಿತ್ತು! ಇದೆಲ್ಲ ಕಂಡಿದ್ದು ಎಲ್ಲಿ ಅಂದ್ಕೊಂಡ್ರಾ? ವಿಜಯಪುರ (Vijayapura) ಜಿಲ್ಲೆಯಲ್ಲಿ! ಹಾಗಾದರೆ ಏನಿದು ವಿಶೇಷ ಮೆರವಣಿಗೆ, ಪಾದಯಾತ್ರೆ ಅಂದ್ಕೊಂಡ್ರಾ? ಇಲ್ಲಿದೆ ನೋಡಿ ವಿಡಿಯೋ. 

  ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ! ಇಡೀ ದೇಶದಲ್ಲಿ ಈಗ ಸ್ವಾತಂತ್ರ್ಯ ಸಂಭ್ರಮ! ನಮ್ಮ ವಿಜಯಪುರ ಜಿಲ್ಲೆಯಲ್ಲೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಭಾರೀ ಜೋರಾಗಿ ನಡೀತಿದೆ. ಈ ಮಹೋತ್ಸದ ಖುಷಿಗೆ ವಿಜಯಪುರದಲ್ಲಿ ಯುವಜನ ಸಂಕಲ್ಪ ನಡಿಗೆ ಯಾತ್ರೆ ಶುರುವಾಗಿದೆ. ಬರೋಬ್ಬರಿ 75 ಕಿಲೋಮೀಟರ್ ಪಾದಯಾತ್ರೆ ನಡೆಸಿ ಸ್ವಾತಂತ್ರ್ಯದ ಮಹತ್ವ ಸಾರಲಾಗ್ತಿದೆ.

  ಎಲ್ಲಿಂದ ಎಲ್ಲಿವರೆಗೆ?
  ಅಂದ್ಹಾಗೆ ಈ ಪಾದಯಾತ್ರೆ ಆಲಮಟ್ಟಿಯಿಂದ ತಾಳಿಕೋಟೆಯವರೆಗೆ, ಅಂದ್ರೆ ಸುಮಾರು 75 ಕಿಲೋಮೀಟರ್ ಸಾಗ್ತಿದೆ. ಒಂದಲ್ಲ ಎರಡಲ್ಲ, ವಿಜಯಪುರದಲ್ಲಿ ಬರೋಬ್ಬರಿ 8 ದಿನ ಪಾದಯಾತ್ರೆ ಮಾಡ್ತಿದ್ದಾರೆ. 10 ಸಾವ್ರಕ್ಕೂ ಹೆಚ್ ಜನ ನಾಮುಂದು ತಾಮುಂದು ಅಂತ ನಡೀತಿದ್ದಾರೆ.

  ಇದನ್ನೂ ಓದಿ: Vijayapura: ಹೆಣ್ಮಕ್ಳೇ ಸ್ಟ್ರಾಂಗು ಗುರು! ಈ ವಿದ್ಯಾರ್ಥಿನಿಯರು ಡ್ರೋನ್​ನ್ನೂ ಹಾರಿಸ್ತಾರೆ!

  ಪಾದಯಾತ್ರೆ ಜೊತೆಗೆ ವಿವಿಧ ಉಪನ್ಯಾಸಗಳೂ ನಡೀತವಂತೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದೇಗೆ? ಯಾರೆಲ್ಲ ಹೋರಾಟ ಮಾಡಿದ್ರು? ಅಂತೆಲ್ಲ ತಿಳ್ಕೊಂಡು ಆ ಹುತಾತ್ಮರನ್ನು ನೆನೆಸ್ಕೊಳ್ಳಬಹುದು.

  ಇದನ್ನೂ ಓದಿ: Fishery In Vijayapura: ವಿಜಯಪುರದಲ್ಲಿ ಮೀನುಗಾರಿಕೆ! ಯುವಕನಿಂದ ಲಕ್ಷ ಲಕ್ಷ ಸಂಪಾದನೆ!

  ಅಂದ್ಹಾಗೆ ಆಲಮಟ್ಟಿಯಿಂದ ಪಾದಯಾತ್ರೆ ಮುಂದೆ ಗೆದ್ದಲಮರಿ, ಮುದ್ದೇಬಿಹಾಳ, ಹಿರೇಮುರಾಳ, ನಾಲತವಾಡ, ಅಡವಿ ಸೋಮನಾಳ, ಮಿನಜಗಿ ಮಾರ್ಗವಾಗಿ ತಾಳಿಕೋಟೆಯಲ್ಲಿ ಆಗಸ್ಟ್ 12 ಕ್ಕೆ ಮುಗಿಯುತ್ತೆ. ಪಾದಯಾತ್ರೆ ಎಲ್ಲೆಲ್ಲಿ ಹೋಗುತ್ತೋ ಅಲ್ಲೆಲ್ಲ ಉಚಿತ ಬಸ್ ಸೌಲಭ್ಯವೂ ಇದೆ. ನೀವೂ ಬಂದು ಭಾಗವಹಿಸಿದ್ರೆ ತುಂಬಾ ಚೆನ್ನಾಗಿರುತ್ತೆ.

  ವರದಿ: ಪ್ರಶಾಂತ್ ಹೂಗಾರ್, ವಿಜಯಪುರ
  Published by:guruganesh bhat
  First published: