ವಿಜಯಪುರ: ಅತ್ತಿಂದಿತ್ತ ಓಡಾಡ್ತಿರೋ ನವಿಲುಗಳು, ಆರಾಮವಾಗಿ ಮರದಲ್ಲಿ ನೇತಾಡ್ತಿರೋ ಬಾವಲಿ, ಸ್ವಚ್ಛಂದವಾಗಿ ಹಾರಾಡೋ ಗಿಳಿ, ಪಾರಿವಾಳ, ಜಿಂಕೆ. ಇದ್ಯಾವ ವನ್ಯಜೀವಿ ಉದ್ಯಾನವನ ಅಂತೀರ? ನಿಜ, ಹೀಗೆ ಕೇಳೋದ್ರಲ್ಲೂ ತಪ್ಪಿಲ್ಲ. ಒಂದರ್ಥದಲ್ಲಿ ಇದು ಭವಿಷ್ಯದ ಪಕ್ಷಿಧಾಮ (Bird Sanctuary) ಆಗೋದ್ರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ಈ ದೃಶ್ಯ ಕಂಡು ಬರೋದು ಎಲ್ಲಿ ಅಂತೀರ? ಈ ಸ್ಟೋರಿ ನೋಡಿ ನಿಮ್ಗೇ ಗೊತ್ತಾಗುತ್ತೆ.
ಮಠ ಯಾವುದು ಗೊತ್ತಾ!?
ಯೆಸ್, ಇದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠದ ಬಳಿ ಕಂಡು ಬರುತ್ತಿರೋ ದೃಶ್ಯ. ಅಂದಹಾಗೆ ಈ ಮಠವೇನೂ ಕಡಿಮೆಯದ್ದಲ್ಲ, ಈ ಮಠವು ಸಾವಿರಾರು ಭಕ್ತರನ್ನ ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರ ವಿರುದ್ದ ಹೋರಾಟಕ್ಕೆ ಧುಮುಕಿಸುವಂತೆ ಪ್ರೇರೇಪಿಸಿದ ಹೆಗ್ಗಳಿಕೆ ಪಡೆದಿದೆ.
ವನ್ಯಜೀವಿಗಳ ಸ್ವಾಗತ!
ಸದ್ಯ ಈ ಮಠದಲ್ಲಿ ರೇವಣ ಸಿದ್ದೇಶ್ವರ ಶ್ರೀಗಳು ನೆಲೆಸಿ ಭಕ್ತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗೆ ಮಠಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಕೂಡಾ ಆಗಮಿಸುತ್ತಲೇ ಇರ್ತಾರೆ. ಹೀಗೆ ಬಂದವರನ್ನೆಲ್ಲ ಈ ಮಠದ ಸುತ್ತಮುತ್ತಲಿರುವ ವನ್ಯಜೀವಿಗಳು ಸ್ವಾಗತಿಸುತ್ತವೆ. ಅದ್ರಲ್ಲೂ ನವಿಲಿನ ನಾಟ್ಯವಂತೂ ನೋಡುಗರ ಮನಸ್ಸಿಗೆ ಮುದ ನೀಡುತ್ತೆ.
ನವಿಲು ಸಂಖ್ಯೆ ಹೆಚ್ಚಳ
ಹೆಚ್ಚು ಕಮ್ಮಿ ಮಠದ ಅಂಗಳದಲ್ಲೇ ಇರೋ ನವಿಲುಗಳು ಇಲ್ಲಿಯ ವಾತಾವರಣಕ್ಕೆ ಒಗ್ಗಿಕೊಂಡಿದೆ. ಅಷ್ಟೇ ಅಲ್ಲ, ಅದಕ್ಕೆ ಬೇಕಾದ ಆಹಾರ, ನೀರು ಎಲ್ಲವೂ ಮಠದ ಸುತ್ತ ಧಾರಾಳವೆನಿಸುವಷ್ಟು ದೊರೆಯುತ್ತವೆ. ಹೀಗಾಗಿ ನವಿಲಿನ ಸಂತತಿಯೂ ಈ ಭಾಗದಲ್ಲಿ ಹೆಚ್ಚಾಗಿದೆ ಅನ್ನೋದನ್ನ ಮಠದ ಭಕ್ತರು ಕಂಡುಕೊಂಡಿದ್ದಾರೆ.
ಪ್ರಾಣಿ, ಪಕ್ಷಿಗಳ ತಾಣ
ರಾಷ್ಟ್ರಪಕ್ಷಿ ಎನಿಸಿಕೊಂಡ ನವಿಲು ಅಷ್ಟೇ ಅಲ್ದೇ, ಜಿಂಕೆ, ಪಾರಿವಾಳ, ಗಿಳಿ, ಬಾವಲಿ ಸೇರಿದಂತೆ ಹೀಗೆ ಹತ್ತಾರು ಪ್ರಾಣಿ ಪಕ್ಷಿಗಳು ಬರುತ್ತವೆ. ಇವುಗಳೆಲ್ಲವೂ ಮಠದ ಸುತ್ತಲೂ ಇದ್ದಷ್ಟು ದಿನ ಸುರಕ್ಷತೆಯ ಭಾವನೆ ಹೊಂದಿದ್ದೇ ಇಲ್ಲಿ ನೆಲೆಸಲು ಕಾರಣವಾಗಿದೆ.
ಇದನ್ನೂ ಓದಿ: Success Story: ಶಾವಿಗೆ ಬ್ಯುಸಿನೆಸ್ ಮಾಡಿ ದಿನಕ್ಕೆ 6 ಸಾವಿರ ಆದಾಯ, ಕೆಲಸ ಸಿಗ್ತಿಲ್ಲ ಅನ್ನೋರಿಗೆ ಇವ್ರೇ ರೋಲ್ ಮಾಡೆಲ್
ಇನ್ನು ಮಠಕ್ಕೆ ಬರುವ ಭಕ್ತರು ಅದಕ್ಕೆ ಬೇಕಾದ ಅನ್ನ, ಪಾನೀಯ ನೀಡ್ತಿರೋದು ಕೂಡಾ ಅದ್ರ ವಾಸಕ್ಕೆ ಇನ್ನೊಂದು ಕಾರಣವಾಗಿದೆ. ವಿಶೇಷವಾಗಿ ನವಿಲುಗಳ ಸಂತತಿ ಹೆಚ್ಚಾಗಿದ್ದರಿಂದ ಅವುಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯತೆಯನ್ನ ಇಲ್ಲಿನ ಭಕ್ತರು ವ್ಯಕ್ತಪಡಿಸಿದ್ದಾರೆ.
ಪಕ್ಷಿಧಾಮ ನಿರ್ಮಾಣಕ್ಕೆ ಭಕ್ತರ ಆಗ್ರಹ
ನಿತ್ಯ ಮಠದ ಅಂಗಳದಲ್ಲಿ ಮತ್ತು ರಸ್ತೆಯ ಇಕ್ಕಲಗಳಲ್ಲಿ, ಮತ್ತು ಜಮೀನುಗಳಲ್ಲಿ ಪ್ರವಾಸಿಗರನ್ನ ಹಾಗೂ ಭಕ್ತರನ್ನ ನವಿಲುಗಳ ಹಿಂಡು ಮತ್ತು ಇತರೆ ಪಕ್ಷಿಗಳು ಸ್ವಾಗತಿಸುತ್ತದೆ.
ಇದನ್ನೂ ಓದಿ: Vijayapura: ಸೈಕಲ್ನಲ್ಲೇ ಇಡೀ ಭಾರತ ತಿರುಗುತ್ತಿರುವ ವಿದೇಶಿಗ!
ಅಲ್ಲಲ್ಲಿ ನವಿಲುಗಳು ಗುಂಪು ಗುಂಪಾಗಿ ಗರಿ ಬಿಚ್ಚಿ ನರ್ತಿಸುವ ನೃತ್ಯವನ್ನ ನೋಡಲು ಎರಡು ಕಣ್ಣುಗಳು ಸಾಲದು. ಆದ್ರೆ, ಈ ಪ್ರಾಣಿ, ಪಕ್ಷಿಗಳ ರಕ್ಷಣೆಯ ಜವಾಬ್ದಾರಿಯು ಹೆಚ್ಚಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಈ ಪ್ರದೇಶದಲ್ಲಿ ಪಕ್ಷಿಧಾಮ ನಿರ್ಮಿಸಿಕೊಟ್ಟರೆ ಇನ್ನಷ್ಟು ಪ್ರಾಣಿ, ಪಕ್ಷಿ ಸಂಕುಲದ ವಾಸಕ್ಕೆ ಈ ತಾಣವು ಯೋಗ್ಯವೆನಿಸಬಹುದು ಅನ್ನೋದು ಮಠದ ಭಕ್ತರ ಅಂಬೋಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ