Vijayapura: ಕೆಟ್ಟ ಕೆಲಸ, ತಪ್ಪು ಮಾಡಿದ್ರೆ ಇಲ್ಲಿ ಹಸಿ ಬೆತ್ತದಿಂದ ಪೆಟ್ಟು ತಿನ್ಬೇಕಂತೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೊಂಡದಲ್ಲಿರುವವರು ಹೊಂಡದ ದಂಡೆಯಲ್ಲಿ ಸುತ್ತುತ್ತಿರುವ ಒಂಭತ್ತು ಸೇವಕರಿಗೆ ನೀರನ್ನು ಎರಚಲು ಮುಂದಾಗುತ್ತಾರೆ. ಇದಕ್ಕೆ ಪ್ರತಿಯಾಗಿ ಆ ಜನರು ನೀರು ಹಾಕಿದವರಿಗೆ ಕೈಯಲ್ಲಿರುವ ಹಸಿ ಬೆತ್ತದಿಂದ ಹೊಡೆಯಲು ಮುಂದಾಗುತ್ತಾರೆ.

  • News18 Kannada
  • 2-MIN READ
  • Last Updated :
  • Bijapur, India
  • Share this:

ವಿಜಯಪುರ: ಚೀಲಗಳಲ್ಲಿ ನೀರು ತುಂಬಿಸಿ ಓಡೋಡುತ್ತಿರುವ ಯುವಕರು, ಇನ್ನೊಂದೆಡೆ ನೀರಿನ ಓಕುಳಿಯಾಟದ ಮಜಾ. ಮತ್ತೊಂದೆಡೆ ಭಕ್ತಿ ಪೂರ್ವಕವಾಗಿ ನಡೆಯುತ್ತಿರುವ ಪೂಜಾ ಕ್ರಮ. ಹೌದು, ಈ ಎಲ್ಲ ದೃಶ್ಯಗಳು (Special Okuli Puja) ಕಂಡು ಬಂದಿದ್ದು ವಿಜಯಪುರದ (Vijayapura News) ಕೊಲ್ಹಾರ ತಾಲೂಕಿನ ತಡಲಗಿಯಲ್ಲಿ.


ರಾತ್ರಿ ನಡೆಯುತ್ತೆ ಸಂಭ್ರಮ!
ಹೇಳಿ ಕೇಳಿ ಈ ತಡಲಗಿ ಅತಿ ಚಿಕ್ಕ ಗ್ರಾಮ. ಹೆಚ್ಚಾಗಿ ರೈತರೇ ವಾಸಿಸೋ ಈ ಊರಲ್ಲಿ ರಾತ್ರಿ 9 ಗಂಟೆಯ ಬಳಿಕ ಎಲ್ಲರೂ ನಿದ್ರೆಗೆ ಶರಣಾಗ್ತಾರೆ. ಆದರೆ ಯುಗಾದಿ ಪ್ರಯುಕ್ತ ರಾತ್ರಿ ನಡೆಯುವ ಪೂಜೆ, ನೀರಿನ ಓಕುಳಿಯಾಟದಂದು ಮಾತ್ರ ಇಡೀ ಗ್ರಾಮಕ್ಕೆ ಗ್ರಾಮವೇ ಸಂಭ್ರಮದಿಂದ ಕೂಡಿರುತ್ತೆ.




ಹಲಗೆಯ ನಾದ, ಜನರ ಕೇಕೆಯ ನಡುವೆ ವಿಶಿಷ್ಟ ಸಂಪ್ರದಾಯದ ನೀರಿನ ಓಕುಳಿಯಾಟ ಮೆರುಗು ನೀಡುತ್ತೆ. ಇದನ್ನ ನೋಡಲೆಂದೇ ಗ್ರಾಮದ ಜನರೆಲ್ಲ ತಡರಾತ್ರಿವರೆಗೆ ಜಮಾಯಿಸಿರುತ್ತಾರೆ. ಅದರಲ್ಲೂ ಊರ ಹಿರಿಯರು ಸಂಪ್ರದಾಯಗಳನ್ನ ನಿರ್ವಹಿಸಿದರೆ, ಯುವಕರು ಓಕುಳಿಯಾಟದೊಂದಿಗೆ ಸಂಭ್ರಮಿಸುತ್ತಾರೆ.


ಆಂಜನೇಯನೇ ಸಾಕ್ಷಿ!
ಇಲ್ಲಿರುವ ನೂರಾರು ವರ್ಷ ಹಳೆಯದಾದ ದೇವಸ್ಥಾನ ಆಂಜನೇಯನ ದೇವಸ್ಥಾನ ಇದ್ದು, ಪ್ರತಿವರ್ಷ ಯುಗಾದಿ ಹಬ್ಬದ ದಿನ ರಾತ್ರಿ ನೀರಿನ ಓಕುಳಿಯಾಟ ನಡೆಯುತ್ತೆ. ಸಂಜೆಯಾಗುತ್ತಿದ್ದಂತೆ ಜಮಾಯಿಸುವ ಗ್ರಾಮಸ್ಥರು ದೇವಸ್ಥಾನದ ಪ್ರಾಂಗಣ ಸುತ್ತಲು ದೀಪಗಳನ್ನ ಹಚ್ಚುತ್ತಾರೆ. ಹಿರಿಯರು ಭಕ್ತಿಭಾವದಿಂದ ಸಿಹಿ ತಿಂಡಿಗಳಾದ ಹೋಳಿಗೆ, ಕಡಬು ಹೀಗೆ ನಾನಾ ಬಗೆಯ ಸಿಹಿ ನೈವೇದ್ಯವನ್ನ ತಂದು‌ ದೇವರಿಗೆ ಸಮರ್ಪಿಸುತ್ತಾರೆ. ಈ ಎಲ್ಲ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ನಡೆಯುವುದೇ ಓಕಳಿ ಹಬ್ಬ.


ಹೀಗಿರುತ್ತೆ ಓಕುಳಿಯಾಟ
ಓಕುಳಿ ಹಬ್ಬ ಆಚರಣೆ ವೇಳೆ ದೇವಾಲಯದ ಆವರಣದಲ್ಲಿರುವ ಚಿಕ್ಕ ಹೊಂಡದಲ್ಲಿ ಮೊದಲು ನೀರನ್ನು ಶೇಖರಿಸಲಾಗುತ್ತದೆ. ಹೊಂಡದ ಸುತ್ತಲೂ ಹಸಿರು ಚಪ್ಪರ, ಹೂವು, ಹಣ್ಣು, ಹಸಿರು ತೋರಣ, ಕಟ್ಟಿರಲಾಗುತ್ತದೆ. ಸಂಜೆ ಹೊಂಡಕ್ಕೆ ಪೂಜೆಯನ್ನ ನೆರವೇರಿಸುವುದರೊಂದಿಗೆ ಓಕುಳಿಯ ಆಚರಣೆಗೆ ಚಾಲನೆ ನೀಡಲಾಗುತ್ತದೆ.


ನೀರಲ್ಲಷ್ಟೇ ಓಕುಳಿಯಾಟ
ಯುವಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಎಲ್ಲರನ್ನ ಓಕುಳಿಯತ್ತ ಎಳೆಯುವ ಮೂಲಕ ಓಕುಳಿ ಆಚರಣೆಗೆ ಮತ್ತಷ್ಟು ರಂಗು ತರುತ್ತಾರೆ. ಓಕುಳಿಯಲ್ಲಿ ಮಿಂದೇಳುವುದರಿಂದ ತಮಗೆ ಯಾವ ಕೆಡಕು, ತೊಂದರೆ ಆಗುವುದಿಲ್ಲ ಎನ್ನುವುದು ಜನರ ನಂಬಿಕೆ. ಈ ಓಕುಳಿಯ ಇನ್ನೊಂದು ವಿಶೇಷವೇನೆಂದರೆ ಬಣ್ಣ ಬಳಸದೇ ಕೇವಲ ನೀರಲ್ಲಷ್ಟೇ ಓಕುಳಿಯಾಡ್ತಾರೆ.


ಇದನ್ನೂ ಓದಿ: Ugadi Phala Bhavishya: ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ


ಬೆತ್ತದ ಹೊಡೆತ!
ಹೊಂಡದಲ್ಲಿರುವವರು ಹೊಂಡದ ದಂಡೆಯಲ್ಲಿ ಸುತ್ತುತ್ತಿರುವ ಒಂಭತ್ತು ಸೇವಕರಿಗೆ ನೀರನ್ನು ಎರಚಲು ಮುಂದಾಗುತ್ತಾರೆ. ಇದಕ್ಕೆ ಪ್ರತಿಯಾಗಿ ಆ ಜನರು ನೀರು ಹಾಕಿದವರಿಗೆ ಕೈಯಲ್ಲಿರುವ ಹಸಿ ಬೆತ್ತದಿಂದ ಹೊಡೆಯಲು ಮುಂದಾಗುತ್ತಾರೆ. ಜೀವನದಲ್ಲಿ ಏನಾದರೂ ತಪ್ಪು ಕೆಲಸಗಳು ನಡೆದಿದ್ದರೆ, ದೇವರ ಸೇವಕರು ನೀಡುವ ಏಟಿನಿಂದ ಅವುಗಳಿಗೆ ಪರಿಹಾರ ದೊರಕುತ್ತದೆ ಎಂಬುದು ಈ ತಡಲಗಿ ಗ್ರಾಮಸ್ಥರ ನಂಬಿಕೆಯಾಗಿದೆ.


ಇದನ್ನೂ ಓದಿ: Vijayapura: ಇಡೀ ವರ್ಷ ಹೆಸರಿಲ್ಲದೇ ಬೆಳೆಯುವ ಮಕ್ಕಳು!


ಒಟ್ಟಿನಲ್ಲಿ ನೂರಾರು ವರ್ಷಗಳಿಂದ ನಡೆಸಿಕೊಂಡು ಬರ್ತಿರುವ ಸಾಂಪ್ರದಾಯಿಕ ಓಕುಳಿಯಾಟ ತಡಲಗಿ ಗ್ರಾಮದಲ್ಲಿ ವಿಶೇಷ ಯುಗಾದಿ ರಂಗು ತುಂಬುತ್ತವೆ.

top videos


    ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    First published: