ಒಂದು ಕಡೆ ಹಣ್ಣು, ತರಕಾರಿ, ಉಪ್ಪಿನಕಾಯಿ, ಹಪ್ಪಳಗಳು, ಇನ್ನೊಂದೆಡೆ ಕೃಷಿ ಯಂತ್ರೋಪಕರಣ, ಕೃಷಿ ಸಂಬಂಧಿತ ಮಾಹಿತಿಯ ಕಣಜ.. ಯೆಸ್, ಇದೆಲ್ಲವೂ ಕಂಡು ಬಂದಿದ್ದು ಬಾಗಲಕೋಟೆಯ (Bagalakot News) ತೋಟಗಾರಿಕಾ ಮೇಳದಲ್ಲಿ. ಹಾಗಿದ್ರೆ ಹೇಗಿತ್ತು ತೋಟಗಾರಿಕ ಮೇಳದ ವಿಶೇಷ ಅನ್ನೋದನ್ನ ನೋಡೋಣ ಬನ್ನಿ. ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (University of Horticultural Sciences, Bagalkot) ನಡೆದ ತೋಟಗಾರಿಕಾ ಮೇಳ ಹತ್ತು ಹಲವು ವಿಶೇಷತೆಗಳನ್ನು ಹೊಂದಿತ್ತು.
ಸಾವಯವ ಕೃಷಿಗಾಗಿ ತೋಟಗಾರಿಕೆ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಮೇಳದತ್ತ ಅತ್ಯಧಿಕ ಸಂಖ್ಯೆಯಲ್ಲಿ ಯುವ ಕೃಷಿಕರು ಆಕರ್ಷಿತರಾದರು. ಮಹಿಳೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೃಷಿ ಮಾಹಿತಿ ಪಡೆದರು.
ಸಾರ್ವಜನಿಕರನ್ನು ಆಕರ್ಷಿಸಿದ ಮೇಳ
ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಶಾಲಾ ಮಕ್ಕಳು ಕೂಡಾ ಆಗಮಿಸಿ ಕೃಷಿ ಎಂದರೇನು? ಕೃಷಿ ಉತ್ಪನ್ನಗಳೇನು, ಕೃಷಿ ಉಪಕರಣಗಳು ಹೇಗಿರುತ್ತವೆ? ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಬಗೆಬಗೆಯಾಗಿ ಜೋಡಿಸಿಟ್ಟಿದ್ದ ಹಣ್ಣು, ತರಕಾರಿ ಹಾಗೂ ಉಪ್ಪಿನಕಾಯಿ ಇನ್ನಿತರ ಕೃಷಿ ಉತ್ಪನ್ನಗಳು ಜನರನ್ನ ಆಕರ್ಷಿಸಿದವು.
200ಕ್ಕೂ ಹೆಚ್ಚು ಮಳಿಗೆ
ತೋಟಗಾರಿಕಾ ಮೇಳದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿತ್ತು. ಬೆಂಗಳೂರು, ಧಾರವಾಡ, ರಾಯಚೂರು, ವಿಜಯಪುರ ಸೇರಿದಂತೆ ಹಲವಾರು ತೋಟಗಾರಿಕಾ ವಿಶ್ವವಿದ್ಯಾಲಯದಿಂದಲೂ ಹಲವು ಮಾಹಿತಿ ನೀಡಲಾಯ್ತು.
ಇದನ್ನೂ ಓದಿ: Krishi Mela: ಬಾಗಲಕೋಟೆಯಲ್ಲಿ ಕೃಷಿಕರ ಖುಷಿ! ಫಲಪುಷ್ಪ ಪ್ರದರ್ಶನದಲ್ಲಿ ಮಹಾನ್ ನಾಯಕರು
ಸಸ್ಯ ಸಂರಕ್ಷಣೆಯಲ್ಲಿ ಡ್ರೋಣ್ ಬಳಕೆ, ಜೇನು ಕೃಷಿ-ಮಧುವನ, ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿ, ಹೂವು ಹಾಗೂ ಅಲಂಕಾರಿಕೆ, ಸಸ್ಯಗಳ ಮೌಲ್ಯವರ್ಧನೆ, ಕೌಶಲ್ಯ ಪ್ರಾತ್ಯಕ್ಷಿಕೆಗಳು, ಸಾವಯವ ಕೃಷಿ ಪದ್ದತಿಗಳ ಕುರಿತೂ ಕೃಷಿಕರು ತಿಳಿದುಕೊಂಡ್ರು. ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರದರ್ಶನಗಳು ಈ ಬಾರಿಯ ಮೇಳದ ವಿಶೇಷತೆಗಳಾಗಿದ್ದವು.
ಇದನ್ನೂ ಓದಿ: Banashankari Temple: ಇವ್ರೇ ನೋಡಿ ಸಾಲುಮಂಟಪದ ಅನ್ನಪೂರ್ಣೇಶ್ವರಿಯರು!
ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ನಡೆದ ತೋಟಗಾರಿಕಾ ಮೇಳವು ಅರ್ಥಪೂರ್ಣವಾಗಿ ನಡೆಯಿತು. ಎಲ್ಲ ವರ್ಗದ ಜನರನ್ನು ಕೃಷಿ ಉತ್ಪನ್ನಗಳು ಆಕರ್ಷಿಸುವುದರ ಜೊತೆಗೆ ಹೊಸ ಅನುಭವ ನೀಡಿತು.
ವರದಿ: ಪ್ರಶಾಂತ ಹೂಗಾರ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ