Bagalkote: ಹಲಗೆ ಮೇಳದಲ್ಲಿ ಮಿಂದೆದ್ದ ಕೋಟೆನಾಡಿನ ಜನ! ಗೆದ್ದ ತಂಡಕ್ಕೆ ಭರ್ಜರಿ ಬಹುಮಾನ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಯೆಸ್, ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸೋ ಹಲಗೆಗೆ ಈಗಂತೂ ಸಖತ್ ಡಿಮ್ಯಾಂಡ್. ಆದ್ರೆ ಹೀಗೆ ಹಲಗೆ ಬಾರಿಸೋಕು ಒಂದು ಲಯ, ತಾಳ ಅನ್ನೋದಿದೆ!

  • News18 Kannada
  • 4-MIN READ
  • Last Updated :
  • Bagalkot, India
  • Share this:

    ಬಾಗಲಕೋಟೆ: ವಾದ್ಯದ ತಕ್ಕಂತೆ ಹಲಗೆ ನಾದ, ತಾಳಕ್ಕೆ ತಕ್ಕಂತೆ ಯುವಕರ ಹೆಜ್ಜೆ. ವೇದಿಕೆಯಲ್ಲಿ ಕಂಡು ಬಂತು ಶಿಸ್ತುಬದ್ಧ ಹಲಗೆ ಪ್ರದರ್ಶನ (Halage Mela). ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ (Bagalkote News) ಶಿರೂರ ಗ್ರಾಮದಲ್ಲಿ.


    ಹಲಗೆ ಕಾಂಪಿಟೇಶನ್
    ಯೆಸ್, ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸೋ ಹಲಗೆಗೆ ಈಗಂತೂ ಸಖತ್ ಡಿಮ್ಯಾಂಡ್. ಆದ್ರೆ ಹೀಗೆ ಹಲಗೆ ಬಾರಿಸೋಕು ಒಂದು ಲಯ, ತಾಳ ಅನ್ನೋದಿದೆ. ಆದ್ರೆ ಗುಂಪಿನಲ್ಲಿ ಬಾರಿಸುತ್ತಾ ಹೋದ್ರೆ ಅದ್ಯಾವುದೂ ಗೊತ್ತಾಗಲ್ಲ. ಹೀಗಾಗಿ ಶಿರೂರ ಪಟ್ಟಣದ ಸಿದ್ದೇಶ್ವರ ಗೆಳೆಯರ ಬಳಗ ಆಯೋಜಿಸಿದ ಮುಕ್ತ ಹಲಗೆ ಮೇಳ ಸ್ಪರ್ಧೆಯು ಉತ್ತಮ ರೆಸ್ಪಾನ್ಸ್ ಗಳಿಸಿತು. ಹಲವು ತಂಡಗಳು ಹಲಗೆ ಮೇಳದಲ್ಲಿ ಭಾಗವಹಿಸಿ ತಮ್ಮ ಚಾತುರ್ಯತೆಯನ್ನ ಮೆರೆದವು.


    20 ಕ್ಕೂ ಹೆಚ್ಚು ತಂಡಗಳು
    ಶ್ರೀ ಸಿದ್ದೇಶ್ವರ ಪ್ರೌಡಶಾಲಾ ಮೈದಾನದಲ್ಲಿ ನಡೆದ ಈ ಹಲಗೆ ಮೇಳ ಸ್ಪರ್ಧೆಯಲ್ಲಿ 20 ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ಒಂದು ತಂಡಕ್ಕೆ 8 ನಿಮಿಷಗಳ ಕಾಲ ಸಮಯಾವಕಾಶವನ್ನ ನೀಡಿ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.


    8 ಜನರಿಗಷ್ಟೇ ಅವಕಾಶ
    ಆ ಎಂಟು ನಿಮಿಷದಲ್ಲಿ ವೇದಿಕೆ ಮೇಲೆ ನಿಂತು ಕಲಾ ತಂಡಗಳು ತಮ್ಮ ಸಂಗಡಿಗರೊಂದಿಗೆ ಬಂದು ಕಲೆಯನ್ನ ಪ್ರದರ್ಶಿಸಿದರು. ಅಲ್ಲದೇ ಒಂದು ತಂಡದಲ್ಲಿ ಏಳರಿಂದ ಎಂಟು ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು.


    ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!




    ಗೆದ್ದ ತಂಡಕ್ಕೆ ನಗದು!
    ಹಲಗೆ ಮೇಳದಲ್ಲಿ ಮೊದಲ ಸ್ಥಾನ ಪಡೆದ ಲಂಗಟದವ ಓಣಿ 15 ಸಾವಿರ ರೂಪಾಯಿ ನಗದು ಬಹುಮಾನ ಪಡೆದರೆ, ಶಿರೂರ ಕಮ್ಮಾರ ಓಣಿ ದ್ವಿತೀಯ ಸ್ಥಾನ ಗಳಿಸಿ 10 ಸಾವಿರ ಪಡೆಯಿತು. 7 ಸಾವಿರ ರೂಪಾಯಿ ನಗದು ಬಹುಮಾನದೊಂದಿಗೆ ದೊಡ್ಡೋಣಿ ಗೆಳೆಯರ ಬಳಗ ತೃತೀಯ ಸ್ಥಾನ ಪಡೆದುಕೊಂಡಿತು.


    ಇದನ್ನೂ ಓದಿ: Crocodiles In Vijayapura: ರಸ್ತೆಯಲ್ಲಿ ಗಜಗಾತ್ರದ ಮೊಸಳೆಗಳು! ನದಿಯಿಂದ ಹೊರಬರೋಕೆ ಕಾರಣ ರಹಸ್ಯ!


    ಒಟ್ಟಾರೆ ಹೋಳಿ ಹಬ್ಬದ ಅಂಗವಾಗಿ ಕಳೆದೊಂದು ವಾರದಿಂದ ಬಾಗಲಕೋಟೆ ಜಿಲ್ಲೆ ಹಲಗೆ ಸದ್ದಿನಲ್ಲಿ ಮಿಂದೆದ್ದಿತು.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: