• ಹೋಂ
  • »
  • ನ್ಯೂಸ್
  • »
  • ವಿಜಯಪುರ
  • »
  • Vijayapura: ಹೋಳಿ ಹಬ್ಬಕ್ಕೆ ಹೊಡೀರಿ ಫೈಬರ್ ಹಲಗೆ! ಇದು ಕುಣಿದು ಕುಪ್ಪಳಿಸೋಕೆ ಬೆಸ್ಟ್ ಜೋಡಿ

Vijayapura: ಹೋಳಿ ಹಬ್ಬಕ್ಕೆ ಹೊಡೀರಿ ಫೈಬರ್ ಹಲಗೆ! ಇದು ಕುಣಿದು ಕುಪ್ಪಳಿಸೋಕೆ ಬೆಸ್ಟ್ ಜೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಹಿಂದೆ ಎಲ್ಲರ ಮನೆಯಲ್ಲೂ ಚರ್ಮದ ಹಲಗೆಗಳು ಕಾಣಸಿಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಚರ್ಮದ ಹಲಗೆಗಳ ಜಾಗವನ್ನ ಫೈಬರ್ ಹಲಗೆಗಳು ಆವರಿಸಿಕೊಂಡಿವೆ.

  • Share this:

    ವಿಜಯಪುರ: ಅಂಗಡಿ ತುಂಬೆಲ್ಲ ಹಲಗೆಗಳದ್ದೇ ಹವಾ. ವಿವಿಧ ಗಾತ್ರ, ಆಕಾರಗಳ ಬಗೆ ಬಗೆಯ ಹಲಗೆಗಳು. ತಮ್ಮಿಷ್ಟದ ಹಲಗೆಗಳ ಖರೀದಿಯಲ್ಲಿ ತೊಡಗಿರುವ ಜನ. ಹಿಂದೆಲ್ಲ ಚರ್ಮದಿಂದ ತಯಾರಾಗ್ತಿದ್ದ ಹಲಗೆಗಳಿಗೆ ಫೈಬರ್ ರೂಪ! ಹೋಳಿ ಹಬ್ಬ (Holi 2923) ಬರುತ್ತಲೇ ಹೆಚ್ಚುತ್ತಿದೆ ಡಿಮ್ಯಾಂಡ್!


    ಯೆಸ್, ಹೋಳಿ ಹಬ್ಬಕ್ಕೆ ಉತ್ತರ ಕರ್ನಾಟಕದ ಜಿಲ್ಲೆಗಳು ಸಿದ್ಧಗೊಂಡಿವೆ. ಈಗಾಗಲೇ ಹಬ್ಬದ ಸಂಭ್ರಮ ಹೆಚ್ಚಿಸಲು ಜನ ಹಲಗೆ ಖರೀದಿಗೆ ಮುಂದಾಗಿದ್ದಾರೆ. ಅದ್ರಲ್ಲೂ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೋಳಿ ಹಬ್ಬದ ಹಲಗೆಗಳ ಡಿಮ್ಯಾಂಡ್ ಹೆಚ್ಚಿದೆ. ಹಾಗಾಗಿ ವಾದ್ಯಗಳ ತಯಾರಿಕೆ ಅಂಗಡಿಗಳಲ್ಲಿ ಈಗ ಏನಿದ್ರೂ ವಿವಿಧ ಗಾತ್ರಗಳ ಫೈಬರ್ ಹಲಗೆಗಳದ್ದೇ ಸದ್ದು ಎನ್ನುವಂತಾಗಿದೆ.


    ಬೆಲೆಯೂ ಕಡಿಮೆ
    ಈ ಹಿಂದೆ ಎಲ್ಲರ ಮನೆಯಲ್ಲೂ ಚರ್ಮದ ಹಲಗೆಗಳು ಕಾಣಸಿಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಚರ್ಮದ ಹಲಗೆಗಳ ಜಾಗವನ್ನ ಫೈಬರ್ ಹಲಗೆಗಳು ಆವರಿಸಿಕೊಂಡಿವೆ. ಚರ್ಮದ ಹಲಗೆ ಸದ್ದು ಕೇಳುವುದೇ ಒಂದು ಚೆಂದವಾದ್ರೂ, ಫೈಬರ್ ಹಲಗೆಗಳಿಂದಾಗಿ ಅವುಗಳ ನಾದ ಕ್ಷೀಣಿಸುತ್ತಿದೆ. ಫೈಬರ್ ಹಲಗೆಗಳ ಬೆಲೆಯೂ 250 ರಿಂದ ಆರಂಭವಾಗಿ ಸಾವಿರದವರೆಗೂ ಇರುವುದು ದುಬಾರಿ ಚರ್ಮದ ಹಲಗೆಗಳ ಡಿಮ್ಯಾಂಡ್ ಕುಸಿಯಲು ಕಾರಣವಾಗಿದೆ.


    ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!


    ವಿಜಯಪುರ ನಗರದ ಹಲವು ಅಂಗಡಿಗಳಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸುವ ಜನರು ಫೈಬರ್ ಹಲಗೆಯನ್ನ ಖರೀದಿಸುವಲ್ಲಿ ತೊಡಗಿದ್ದಾರೆ.




    ಒಂದು ತಿಂಗಳು ವ್ಯಾಪಾರ ಮಾಡಿದ್ರೆ ಸಾಕು!
    ಅಂದಹಾಗೆ, ಈ ಅಂಗಡಿ ಮಾಲೀಕರು ಕೇವಲ ಒಂದು ತಿಂಗಳು ಮಾತ್ರ ಈ ಹಲಗೆಗಳ ವ್ಯಾಪಾರ ಮಾಡುತ್ತಾರೆ. ಇನ್ನುಳಿದ ದಿನಗಳಲ್ಲಿ ಮದುವೆ, ಸಭೆ, ಸಮಾರಂಭಗಳಿಗೆ ಬೇಕಾಗುವ ವಾದ್ಯ ತಯಾರಿಸುತ್ತಾರೆ. ಹಾಗಾಗಿ ಈ ಅಂಗಡಿ ಫೈಬರ್ ಹಲಗೆಗೆ ಎಲ್ಲಿಲ್ಲದ ಬೇಡಿಕೆಯೂ ಇದೆ.


    ಇದನ್ನೂ ಓದಿ: Halage Fest: ಹಲಗೆ ಬಾರಿಸಿ ಭರ್ಜರಿ ನಗದು ಬಹುಮಾನ ಪಡೆಯಿರಿ!


    ಒಟ್ಟಿನಲ್ಲಿ ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸೋ ಫೈಬರ್ ಹಲಗೆಗಳಿಗೆ ಸಖತ್ ಡಿಮ್ಯಾಂಡ್ ಇದ್ದು, ಜನರು ಕೂಡಾ ಹಲಗೆ ಖರೀದಿಸಿ ಸಡಗರದಿಂದ ಹಬ್ಬಕ್ಕೆ ಆಚರಿಸೋದಕ್ಕೆ ಕಾತುರರಾಗಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು