Helava Community: ನಿಮ್ಮ ಅಜ್ಜ, ಮುತ್ತಜ್ಜ ಅವರಜ್ಜನ ಕಥೇನೂ ಹೇಳ್ತಾರೆ ಈ ಹೆಳವರು! ಯಾರಿವರು?

ಇವ್ರು ತಾವು ನೆಲೆಸಿರೋ ಊರಿನ ಮನೆ ಮನೆಗಳಿಗೆ ಅವರ ವಂಶ ವೃಕ್ಷವನ್ನು ಕೇಳಿ, ಬರೆದು ಅದನ್ನು ರಚಿಸಿಕೊಡ್ತಾರೆ. ಅವಿದ್ಯಾವಂತರಾದರೂ ಇದೆಲ್ಲ ಇವರಿಗೆ ಹೇಗೆ ಸಾಧ್ಯ ಅನ್ನೋದು ಇನ್ನೊಂದು ಕ್ಯೂರಿಯಾಸಿಟಿ.

ಹೆಳವ ಸಮುದಾಯದ ವ್ಯಕ್ತಿ

"ಹೆಳವ ಸಮುದಾಯದ ವ್ಯಕ್ತಿ"

 • Share this:
  ವಿಜಯಪುರ: ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ.. ಅನ್ನೋ ಹಾಡಿದೆಯಲ್ವ? ಈ ಹಾಡಿಗೆ ಸೇಮ್ ಟು ಸೇಮ್ ಅನ್ನೋ ರೀತಿ ಬದುಕೋರು ಇವತ್ತಿಗೂ ಇದ್ದಾರೆ. ಇವರನ್ನೇ ಒಂದ್ಸಲ ನೋಡ್ಬಿಡಿ. ರಸ್ತೆಬದಿನೋ, ವಿಶಾಲ ಮೈದಾನನೋ ಅಲ್ಲೆ ಡೇರೆ, ಅಲ್ಲೇ ಊಟ, ಅಲ್ಲೇ ಬದುಕು, ಅಲೆಮಾರಿ ಜನರ ಬದುಕೇ ಹೀಗಿದೆ. ಹಾಗಂತ ಈ ಅಲೆಮಾರಿ ಜನರು (Helava Nomadic Community) ಹೊಂದಿರುವ ನೋವು, ನಲಿವುಗಳು ಮುಂದಿಡುವ ಸಣ್ಣ ಪ್ರಯತ್ನ ನಾವ್ ನೋಡ್ತೀವಿ. ಇವರು ಹೆಳವ ಸಮುದಾಯಕ್ಕೆ ಸೇರಿದವರು. ಸದ್ಯ ವಿಜಯಪುರ ಜಿಲ್ಲೆಗೆ (Vijayapura)  ಆಗಮಿಸಿ ಕುಟುಂಬ ಸಮೇತ ನೆಲೆಸಿದ್ದಾರೆ. ಮುಂದೆ ಮತ್ತೊಂದು ಯಾವುದೋ ಊರನ್ನ ಅರಸಿ ಹೊರಡ್ತಾರೆ.

  ಯಾರಿವರು ಹೆಳವರು?
  ಆದ್ರೆ ಇವ್ರು ತಾವು ನೆಲೆಸಿರೋ ಊರಿನ ಮನೆ ಮನೆಗಳಿಗೆ ಅವರ ವಂಶವೃಕ್ಷವನ್ನು ಕೇಳಿ, ಬರೆದು ಅದನ್ನು ರಚಿಸಿಕೊಡ್ತಾರೆ. ಅವಿದ್ಯಾವಂತರಾದರೂ ಇದೆಲ್ಲ ಇವರಿಗೆ ಹೇಗೆ ಸಾಧ್ಯ ಅನ್ನೋದು ಇನ್ನೊಂದು ಕ್ಯೂರಿಯಾಸಿಟಿ.  ಹಾಗಾಗಿ ಇವರಿಗೆ ಹಳ್ಳಿ ಜನರು ಆಡುಭಾಷೆಯಲ್ಲಿ ಹೆಳವರು ಎಂದು ಕರೆಯುತ್ತಾರೆ. ಆದರೆ ಇವರು ಹೆಳವರಲ್ಲಾ, ಬದಲಾಗಿ 'ಹೇಳುವವರು'.

  ಇದನ್ನೂ ಓದಿ:  Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ

  ಮನೆತನದ ಇತಿಹಾಸ ‘ಹೇಳುವವರು‘
  ಈ ಹೆಳವ ಸಮುದಾಯಗಳು ಹೆಚ್ಚಾಗಿ ಕಂಡು ಬುರುವುದು ಬೆಳಗಾವಿ ಜಿಲ್ಲೆಯಲ್ಲಿ. ಇವರು ಕೆಲವು ನಿರ್ದಿಷ್ಟ ಮನೆತನಗಳ ಶತಶತಮಾನಗಳ ವಂಶವೃಕ್ಷದ ದಾಖಲಾತಿಯನ್ನ ಖಾತೆಕಿರ್ದಿ ಪುಸ್ತಕದಲ್ಲಿ ದಾಖಲಿಸಿ ಬರೆದಿಟ್ಟುಕೊಳ್ಳುವ ಕಾಯಕದವರು. ಇವರು ಒಂದು ಮನೆಗೆ ತೆರಳಿದರೆ ಆ ಮನೆತನದವರು ಮೂಲತಃ ಎಲ್ಲಿಯವರು, ಯಾವ ತಲೆಮಾರು? ಯಾವ ಮೂಲ ಉದ್ಯೋಗ, ಮಕ್ಕಳು, ಮನೆದೇವರು ಇದೆಲ್ಲದರ ಬಗ್ಗೆ ನಮೂದಿಸುತ್ತಾರೆ. ಬಳಿಕ ಅವರ ವಂಶದ ಕುಡಿಗಳು ಇರುವ ಊರುಗಳಿಗೆಲ್ಲ ಭೇಟಿ ನೀಡಿ, ಅಲ್ಲಿ ಅವರ ಮನೆಯ ಹೊರಗಡೆ ಕೂತು ತಮ್ಮದೇಯಾದ ದಾಟಿಯಲ್ಲಿ ಹಾಡಿ ಹೊಗಳುತ್ತಾರೆ. ಇದರಿಂದ ಕುಟುಂಬಸ್ಥರಿಗೆ ತಮ್ಮ ಮೂಲ ಇತಿಹಾಸ ತಿಳಿಯಲು ಸಹಕಾರಿಯಾಗುತ್ತದೆ.

  ಇದನ್ನೂ ಓದಿ: Vijayapura: 75 ಕಿಲೋಮೀಟರ್, 8 ದಿನ, 10 ಸಾವಿರಕ್ಕೂ ಹೆಚ್ಚು ಜನ! ವಿಜಯಪುರದಲ್ಲಿ ವಿಶೇಷ ಪಾದಯಾತ್ರೆ!

  ಇವ್ರದ್ದು ಅಲೆಮಾರಿ ಜೀವನ
  ವಂಶವೃಕ್ಷ ಹೇಳಿದ್ದಕ್ಕೆ ಪರ್ಯಾಯವಾಗಿ ಮನೆಯ ಯಜಮಾನನಿಂದ ದಾನದ ರೂಪದಲ್ಲಿ ದವಸ ದಾನ್ಯ, ಹಣ, ಹಳೆಯ ಬಟ್ಟೆ, ತಾಮ್ರದ ಕೊಡ, ಕುರಿ, ಮೇಕೆ, ಇತ್ಯಾದಿ ಪಡೆದುಕೊಂಡು ಮುಂದಿನ ಮನೆಗೆ ಹೊರಡುತ್ತಾರೆ. ಇವರು ವರ್ಷದಲ್ಲಿ 6 ತಿಂಗಳು ಮಾತ್ರ ತಮ್ಮ ಗ್ರಾಮದಲ್ಲಿ ಇರುತ್ತಾರೆ. ಅಲೆಮಾರಿ ಜನಾಂಗಕ್ಕೆ ಸೇರಿದ ಇವರು ಇವರ ಸಾಕು ಪ್ರಾಣಿಗಳನ್ನೂ ಜೊತೆಗೆ ಕರೆದೊಯ್ಯುತ್ತಾರೆ.. ಒಟ್ಟಿನಲ್ಲಿ ಹೆಳವ ಸಮುದಾಯದ ಈ ಬುದ್ಧಿಮತ್ತೆ ನಿಜಕ್ಕೂ ನಮ್ಮಲ್ಲಿ ಅಚ್ಚರಿ ಹುಟ್ಟಿಸುತ್ತದೆ.

  ವರದಿ: ಪ್ರಶಾಂತ್ ಹೂಗಾರ್, ವಿಜಯಪುರ
  Published by:guruganesh bhat
  First published: