Halage Fest: ಹಲಗೆ ಬಾರಿಸಿ ಭರ್ಜರಿ ನಗದು ಬಹುಮಾನ ಪಡೆಯಿರಿ!

ಹಲಿಗೆ ಹಬ್ಬ

ಹಲಿಗೆ ಹಬ್ಬ

ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ಮಾ. 4ರಂದು ಸಂಜೆ 5ಕ್ಕೆ ಹಲಗೆ ಹಬ್ಬ ಆರಂಭಗೊಳ್ಳಲಿದೆ. ಹಳ್ಳಿ ಸೊಗಡಿನ ಕಲೆಯಾದ ಹಲಗೆಯು ನಶಿಸಿ ಹೋಗುತ್ತಿರುವ ಈ ಸಮಯದಲ್ಲಿ ಇದನ್ನು ಉತ್ತೇಜಿಸಲು ಹಾಗೂ ಹಲಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಹಬ್ಬವನ್ನು ಆಯೋಜನೆ ಮಾಡಲಾಗಿದೆ.

ಮುಂದೆ ಓದಿ ...
  • Local18
  • 3-MIN READ
  • Last Updated :
  • Vijayapura, India
  • Share this:

    ವಿಜಯಪುರ: ಜಿಲ್ಲೆಯ ಹಲವೆಡೆ ಹಲಗೆ (Halige) ನಾದ ಜೋರಾಗಿದೆ, ಚಿಕ್ಕ ಮಕ್ಕಳಿಂದ (children) ಹಿಡಿದು ಹಿರಿಯರಿಗೂ ಸಹ ಹಲಗೆ ಬಡಿಯೋದಂದ್ರೆ ಒಂದು ರೀತಿ ಸಂತಸ. ಇಂದಿನ ಯುವ ಪೀಳಿಗೆಗೆ ಹಲಗೆ ಬಾರಿಸುವ ಕಲೆಯನ್ನ ಪರಿಚಯಿಸುವ ಹಿನ್ನೆಲೆಯಲ್ಲಿ ವಿಜಯಪುರ (vijayapura) ನಗರದಲ್ಲಿ ಪ್ರತಿ ವರ್ಷದಂತೆ ಬಾರಿಯೂ ಸಹ ಶ್ರೀ ರಾಮ ನವಮಿ ಉತ್ಸವ ಸಮಿತಿ ವಿಜಯಪುರದ ವತಿಯಿಂದ ಬೃಹತ್ ಪ್ರಮಾಣದ ಹಲಗೆ ಹಬ್ಬವನ್ನ ಆಯೋಜಿಸಲಾಗಿದೆ.


    ಹಲಿಗೆ ಹಬ್ಬ


    ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ಮಾ. 4ರಂದು ಸಂಜೆ 5ಕ್ಕೆ ಹಲಗೆ ಹಬ್ಬ ಆರಂಭಗೊಳ್ಳಲಿದೆ. ಹಳ್ಳಿ ಸೊಗಡಿನ ಕಲೆಯಾದ ಹಲಗೆಯು ನಶಿಸಿ ಹೋಗುತ್ತಿರುವ ಸಮಯದಲ್ಲಿ ಇದನ್ನು ಉತ್ತೇಜಿಸಲು ಹಾಗೂ ಹಲಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಬ್ಬವನ್ನು ಆಯೋಜನೆ ಮಾಡಲಾಗಿದೆ.


    ಯಾರಿಗೆ ಅವಕಾಶ?


    ಹಬ್ಬದಲ್ಲಿ ವಿಜಯಪುರ ನಗರ ಹಾಗೂ ತಾಲೂಕಿನ ಪ್ರತಿಯೊಂದು ಹಲಗೆ ಬಾರಿಸುವ ತಂಡಗಳು ಹಾಗೂ ವೈಯಕ್ತಿಕ ಸ್ಪರ್ಧಾಳುಗಳು ಸ್ಪರ್ಧಿಸಲು ಅವಕಾಶವಿದೆ.


    ಗೆದ್ದರೆ ಭರ್ಜರಿ ನಗದು


    ಸ್ಪರ್ಧೆಯಲ್ಲಿ ಗೆದ್ದ ತಂಡ ಹಾಗೂ ವೈಯಕ್ತಿಕ ವಿಜೇತರಿಗೆ ನಗದು ಬಹುಮಾನ ಸಿಗಲಿದೆ.



    ತಂಡ ಬಹುಮಾನ ಹೀಗಿವೆ: ಪ್ರಥಮ ಬಹುಮಾನ ರೂ. 21,000, ದ್ವಿತೀಯ ರೂ.15,000, ತೃತೀಯ ರೂ.10,000 ಬಹುಮಾನ


    ವೈಯಕ್ತಿಕ ಬಹುಮಾನ: ಪ್ರಥಮ ರೂ.10,000, ದ್ವಿತೀಯ ರೂ. 5,000 ಹಾಗೂ ತೃತೀಯ ಬಹುಮಾನ ರೂ. 3,000 ಬಹುಮಾನ ನಿಗದಿಪಡಿಸಲಾಗಿದೆ.


    ನೋಂದಣಿ, ಮಾಹಿತಿಗಾಗಿ ಸಂಪರ್ಕಿಸಿ


    ಆಸಕ್ತರು ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಣಿಗಾಗಿ ಸಂಪರ್ಕ ಸಂಖ್ಯೆ ಮೊ. 8660409026, 8095474352, 9972157255 ಸಂಖ್ಯೆಗಳನ್ನು ಸಂಪರ್ಕಿಸುವುದಾಗಿದೆ.


    ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಈ ಪಾಸಿಟಿವ್ ವಿಷಯಕ್ಕೆ ವಿಜಯಪುರವೇ ಫಸ್ಟ್!

    ಸ್ಪರ್ಧಾಳುಗಳಿಗೆ ಸೂಚನೆ


    ನೋಂದಣಿ ಮಾಡುವ ಅಭ್ಯರ್ಥಿಗಳು ಪ್ರಾರಂಭದ ಒಂದು ಗಂಟೆ ಮುಂಚೆ ಹಾಜರಿರಬೇಕು. ಮತ್ತು ಫೈಬರ್ ಹಲಗೆ, ಹಲಗೆ ಬಾರಿಸುವ ಗುಣಿ ಇವುಗಳನ್ನ ತರಬೇಕೆಂದು ಎಂದು ‘ಹಲಿಗೆ ಹಬ್ಬ’ ಆಯೋಜಕರು ತಿಳಿಸಿದ್ದಾರೆ.


    ವರದಿ - ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ

    Published by:Sandhya M
    First published: