Success Story: 40 ಸಾವಿರ ಖರ್ಚು, ಒಂದೂವರೆ ಲಕ್ಷ ಆದಾಯ! ಜೇಬು ತುಂಬಿಸುತ್ತಿದೆ ಈ ಬೆಳೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅವಳಿ ಜಿಲ್ಲೆಗಳಲ್ಲಿ ಬೆಳೆಯುವ ಮೆಣಸಿನಕಾಯಿಗೆ ವಿದೇಶದಲ್ಲೂ ಉತ್ತಮ ಡಿಮ್ಯಾಂಡ್ ಇದೆ. ಅಮೇರಿಕಾ, ಕೊರಿಯಾ ಸೇರಿದಂತೆ ನಾನಾ ದೇಶಗಳಿಗೆ ಈ ಕೆಂಪು ಸುಂದರಿ ಹಾರುತ್ತಿದ್ದಾಳೆ.

 • News18 Kannada
 • 5-MIN READ
 • Last Updated :
 • Bijapur, India
 • Share this:

  ವಿಜಯಪುರ: ಕೆಂಪಾದವೋ ಎಲ್ಲ ಕೆಂಪಾದವೋ ಅನ್ನೋ ಹಾಗೆ ಎಲ್ಲಿ ನೋಡಿದ್ರಲ್ಲಿ ಕೆಂಪು ಮೆಣಸಿನದ್ದೇ ಹವಾ. ಖಾರದ ಮೆಣಸಿನ ಘಾಟು (Chilli) ಈಗ ಗುಮ್ಮಟ ನಗರಿಯಾದ್ಯಂತ (Vijayapura News) ಪಸರಿಸುತ್ತಿದೆ. ಯೆಸ್, ಖಾರ ಖಾರ ಅಂತಿದ್ದ ಮೆಣಸಿನಕಾಯಿ ಸದ್ಯ ಬೆಳೆಗಾರರ (Chilli Farmers) ಪಾಲಿಗೆ ಸಿಹಿಯಾಗಿದೆ. ಅದ್ಯಾಕೆ ಹೀಗೆ ಅಂತೀರ? ಹೇಳ್ತೀವಿ ನೋಡಿ.


  ಕೆಂಪು ಸುಂದರಿಯ ಮೊರೆ
  ವಿಜಯಪುರ ಅಂದ್ರೆ ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ ಹೀಗೆ ತರಹೇವಾರಿ ಬೆಳೆಗೆ ಫೇಮಸ್. ಆದ್ರೆ ಇತ್ತೀಚೆಗೆ ಈ ಬೆಳೆಗಳನ್ನು ಬೆಳೆದು ರೈತರು ಕೈ ಸುಟ್ಟುಕೊಂಡಿದ್ದೇ ಜಾಸ್ತಿ. ಹೀಗಾಗಿ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ ರೈತರು ಕೆಂಪು ಸುಂದರಿಯ ಮೊರೆ ಹೋಗಿದ್ದಾರೆ.
  ರೈತರ ಮೊಗದಲ್ಲಿ ಮಂದಹಾಸ
  ಬ್ಯಾಡಗಿ, ಗುಂಟೂರು ಮೆಣಸಿನಕಾಯಿ ಬೆಳೆದು ಉತ್ತಮ ಫಸಲು ಪಡೆಯುತ್ತಿದ್ದಾರೆ. ಜೊತೆಗೆ ಉತ್ತಮ ದರವೂ ಪಡೆಯುತ್ತಿದ್ದಾರೆ. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ, ಸ್ಥಳೀಯ ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದೆ.


  ಕೈ ಹಿಡಿದ ಮೆಣಸು
  ಈ ಹಿಂದೆ ಈ ಭಾಗದ ಹಲವು ರೈತರು ಸಾಂಪ್ರದಾಯಿಕ ಬೆಳೆಗಳನ್ನ ಅವಲಂಬಿಸಿ ಹೆಚ್ಚಾಗಿ ಬೆಳೆಯುತ್ತಿದ್ದರು. ಸೂರ್ಯಕಾಂತಿ, ಮೆಕ್ಕೆಜೋಳ, ತೊಗರಿ ಬೆಳೆಗೆ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ದರ ಸಿಕ್ಕರೆ ಇನ್ನೊಮ್ಮೆ ದರ ಕುಸಿಯುತ್ತಿತ್ತು, ಇದರಿಂದಾಗಿ ಕಂಗೆಟ್ಟ ರೈತರು ಕಳೆದ ಎರಡ್ಮೂರು ತಿಂಗಳುಗಳ ಹಿಂದೆ ಗುಂಟೂರು ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ ಬೆಳೆಯಲು ಆರಂಭಿಸಿದ್ದರು. ಸದ್ಯ ಈ ಕೆಂಪು ಮೆಣಸಿನಕಾಯಿ ಬೆಳೆ ರೈತರ ಕೈಹಿಡಿದಿದೆ.


  ಲಕ್ಷ ರೂ. ಸಂಪಾದನೆ
  ಪ್ರತಿ ಎಕರೆಗೆ ಮೆಣಸಿನ ಬೆಳೆ ಬೆಳೆಯಲು ರೈತರು 40 ರಿಂದ 50 ಸಾವಿರ ಖರ್ಚು ಮಾಡುತ್ತಾರೆ. ಆದರೆ ರೈತರು ಒಂದು ಎಕರೆಗೆ ಒಂದು ಲಕ್ಷ ಇಪ್ಪತ್ತು ಸಾವಿರದಿಂದ ಹಿಡಿದು ಒಂದು ಲಕ್ಷ ಐವತ್ತು ಸಾವಿರದವರೆಗೆ ಆದಾಯ ಪಡೆಯುತ್ತಿದ್ದಾರೆ. ಹೀಗೆ ಏನಿಲ್ಲ ಅಂದ್ರೂ ಒಂದು ಎಕರೆ ಜಮೀನಿನಲ್ಲಿ ಲಕ್ಷ ಸಂಪಾದಿಸುತ್ತಿದ್ದಾರೆ.


  ಇದನ್ನೂ ಓದಿ: Bagalkote: ಬರಡು ಭೂಮಿ ಈಗ ಹಚ್ಚ ಹಸಿರಿನ ಕಾಡು! ಈ ಜಾದೂ ಹಿಂದಿನ ಮಾಂತ್ರಿಕ ಇವರೇ!
  ಉತ್ತಮ ದರ
  ಇನ್ನು ಅವಳಿ ಜಿಲ್ಲೆಗಳಲ್ಲಿ ಬೆಳೆಯುವ ಮೆಣಸಿನಕಾಯಿಗೆ ವಿದೇಶದಲ್ಲೂ ಉತ್ತಮ ಡಿಮ್ಯಾಂಡ್ ಇದೆ. ಅಮೇರಿಕಾ, ಕೊರಿಯಾ ಸೇರಿದಂತೆ ನಾನಾ ದೇಶಗಳಿಗೆ ಈ ಕೆಂಪು ಸುಂದರಿ ಹಾರುತ್ತಿದ್ದಾಳೆ. ಪ್ರಸ್ತುತ ಬ್ಯಾಡಗಿ ಮೆಣಸಿನಕಾಯಿಗೆ ಬೆಂಗಳೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 36 ಸಾವಿರದಿಂದ 44 ಸಾವಿರ, ಗುಂಟೂರು ಮೆಣಸಿನಕಾಯಿ 21 ಸಾವಿರದಿಂದ 21500 ರೂಪಾಯಿ ಇದೆ.


  ಇದನ್ನೂ ಓದಿ: Indian Railways: ಪ್ರಯಾಣಿಕರೇ ಗಮನಿಸಿ, ಕರ್ನಾಟಕದ ಪ್ರಮುಖ ಊರುಗಳ ನಡುವಿನ ರೈಲುಗಳು ರದ್ದು


  ಒಟ್ಟಿನಲ್ಲಿ ವಿವಿಧ ಬೆಳೆಗಳನ್ನ ಬೆಳೆದು ನಷ್ಟ ಅನುಭವಿಸಿದ ರೈತರಗೆ ಈ ಮೆಣಸಿನಕಾಯಿ ಬೆಳೆ ಖಾರದ ಬದಲು ಸಿಹಿ ನೀಡುತ್ತಿರುವುದಂತೂ ಸತ್ಯ.


  ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: