• ಹೋಂ
 • »
 • ನ್ಯೂಸ್
 • »
 • ವಿಜಯಪುರ
 • »
 • Vijayapura: ಬೆಟ್ಟದ ಮೇಲಿನ ಗುಹೆಯಲ್ಲಿ ಸಿದ್ದರಾಮೇಶ್ವರನ ನೆಲೆ, ದರ್ಶನ ಪಡೆಯೋದೇ ಸೌಭಾಗ್ಯ!

Vijayapura: ಬೆಟ್ಟದ ಮೇಲಿನ ಗುಹೆಯಲ್ಲಿ ಸಿದ್ದರಾಮೇಶ್ವರನ ನೆಲೆ, ದರ್ಶನ ಪಡೆಯೋದೇ ಸೌಭಾಗ್ಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮನಸ್ಸಿಗೆ ಮುದ ನೀಡುವ, ಭಕ್ತಿ ಭಾವವನ್ನ ಇಮ್ಮಡಿಗೊಳಿಸಬಲ್ಲ ಈ ಸಿದ್ದರಾಮೇಶ್ವರ ಕ್ಷೇತ್ರವನ್ನ ವಿಜಯಪುರಕ್ಕೆ ಭೇಟಿ ನೀಡೋ ಆಸಕ್ತರು ನೋಡ್ಲೇಬೇಕು.

 • News18 Kannada
 • 4-MIN READ
 • Last Updated :
 • Bijapur, India
 • Share this:

  ವಿಜಯಪುರ: ವಿಶಿಷ್ಟವಾದ ಬಂಡೆಕಲ್ಲುಗಳ ಹೊದಿಕೆ. ಪ್ರಶಾಂತವಾದ ಪ್ರಕೃತಿಯ ಮಧ್ಯೆ ಪುಣ್ಯಕ್ಷೇತ್ರದ ದರ್ಶನ. ಬೆಟ್ಟ ಹತ್ತುತ್ತಲೇ ಭಕ್ತಿ ಹೆಚ್ಚಿಸೋ ದೇವರ ಸಾನಿಧ್ಯ. ಗುಹೆಯ ನಡುವೆ ಅಡಗಿರೋ ಈ ದೇವರ ದರ್ಶನ (Guddada Siddarameshwara Temple) ಪಡೆಯೋದು ಸೌಭಾಗ್ಯ.


  ಇದು ವಿಜಯಪುರದ ಬಸವನಬಾಗೇವಾಡಿಯಲ್ಲಿರುವ ಗುಡ್ಡದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ. ವಿಶ್ವಗುರು ಬಸವಣ್ಣನ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಅಂದಾಜು 7 ಕಿಲೋಮೀಟರ್ ದೂರದಲ್ಲಿದೆ. ನಾಗವಾಡ, ಟಕ್ಕಳಕಿ, ಜೈನಾಪುರ ಗ್ರಾಮಗಳ ಮಧ್ಯದಲ್ಲಿರುವ ಈ ವಿಶಾಲವಾದ ಗುಡ್ಡದಲ್ಲಿರುವುದೇ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ. ಈ ದೇವಸ್ಥಾನವನ್ನು ಸಿದ್ಧರಾಮೇಶ್ವರ, ಸಿದ್ರಾಯನ ಗುಡಿ, ಗುಡ್ಡದ ಸಿದ್ಧರಾಮ ಹೀಗೆ ತಮ್ಮ ತಮ್ಮ ಭಕ್ತಿಗನುಗುಣವಾಗಿ ಕರೆಯುವುದು ಭಕ್ತರ ವಾಡಿಕೆ.


  ಗುಹೆಯಲ್ಲಿ ಸಿಗುತ್ತೆ ಹಲವು ದೇವರ ದರ್ಶನ!
  ಈ ದೇವಸ್ಥಾನವು ಗುಹೆಯಿಂದ ಕೂಡಿದ್ದು ಒಳಗೆ ಪ್ರವೇಶಿಸಲು ಅತ್ಯಂತ ಕಿರಿದಾದ ಬಾಗಿಲಿದೆ. ಒಳ ಪ್ರವೇಶಿಸುತ್ತಿದ್ದಂತೆ ಎಡ ಬಲಗಳಲ್ಲಿ ನಂದಿ, ವೀರಭದ್ರೇಶ್ವರ, ಮಹಾಕಾಳಿ ಹೀಗೆ ಹಲವು ವಿಗ್ರಹಗಳು ಕಾಣುತ್ತವೆ. ಹಾಗೆಯೇ ಗುಹೆಯ ಒಳಗೆ ಪ್ರವೇಶಿಸಿದರೆ ಅಲ್ಲಿ ಸಿದ್ಧರಾಮೇಶ್ವರ ದೇವರ ಮೂರ್ತಿಯ ದರ್ಶನವಾಗುತ್ತೆ. ಭಕ್ತರು ತಮಗೆ ಒದಗಿ ಬಂದ ಸಂಕಷ್ಟಗಳು ಪರಿಹಾರ ಮಾಡಿಕೊಡುವಂತೆ ಈ ಗುಡ್ಡವೇರಿ ಸಿದ್ದರಾಮೇಶ್ವರನ ಬಳಿಗೆ ಬರುತ್ತಾರೆ.


  ಗುಹೆಯಲ್ಲಿ ದೇವರು
  ಈ ಬೃಹತ್ ಬೆಟ್ಟದ ಗುಹೆಯಲ್ಲಿ ಉಸಿರಾಡಲು ಬೆಳಕು ಕಾಣಲು ಇರುವುದು ಒಂದೇ ಒಂದು ಕಿಂಡಿ. ಒಳಗಡೆ ಸಿದ್ದರಾಮೇಶ್ವರ ದೇವರ ಮೂರ್ತಿಯ ಎದುರಿಗೆ ಕಾಣುತ್ತಿರುವ ಈ ಸ್ಥಳದಲ್ಲಿ, ಹಲವು ಶತಮಾನಗಳ ಹಿಂದೆ ಒಂದು ಅಜ್ಞಾತ ಅಂತರ್ಗುಹೆ ಇತ್ತಂತೆ. ಅದು ಬಸವನ ಬಾಗೇವಾಡಿ ತಾಲೂಕಿನಲ್ಲಿರುವ ಸುಕ್ಷೇತ್ರ ಇಂಗಳೇಶ್ವರ ಗುಡ್ಡಕ್ಕೆ ಸಂಪರ್ಕಿಸುತ್ತಿದ್ದಂತೆ. ಇತ್ತೀಚೆಗೆ ಆ ಮಾರ್ಗವನ್ನು ಮುಚ್ಚಲಾಗಿದೆ.


  ಇದನ್ನೂ ಓದಿ: Vijayapura: ಚಂದ್ರಮ್ಮ ದೇವಿ ಭಕ್ತರಿಗೆ ಜೋಳದ ಅಂಬಲಿಯೇ ಮಹಾ ಪ್ರಸಾದ!
  ವೀಳ್ಯದೆಲೆ ಅಲಂಕಾರ
  ಪ್ರತಿ ಅಮಾವಾಸ್ಯೆಗೊಮ್ಮೆ ಇಲ್ಲಿ ಪೂಜೆ ಮಾಡಲಾಗುತ್ತದೆ. ಇನ್ನುಳಿದ ದಿನಗಳಲ್ಲಿ ಭಕ್ತರು ಕಟ್ಟಿಕೊಂಡಿರುವ ಹರಕೆ ತೀರಿಸಲು ಆಗಾಗ ವಿಶೇಷ ಪೂಜೆ, ಮಕ್ಕಳ ಜವಳಿ ತೆಗೆಯುವ ಕಾರ್ಯಕ್ರಮ ಸೇರಿದಂತೆ ಇನ್ನಿತರ ಭಕ್ತಿಯ ಚಟುವಟಿಕೆಗಳು ನಿರಂತರವಾಗಿರುತ್ತದೆ.


  ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!


  ಇಲ್ಲಿ ದೇವರಿಗೆ ವೀಳ್ಯದೆಲೆಯ ಅಲಂಕಾರವೇ ಅತ್ಯಂತ ಶ್ರೇಷ್ಠ. ಅಲ್ಲದೇ ಆನೆಯ ಹೆಜ್ಜೆಗಳಂತೆ ಕಾಣುವ ದೃಶ್ಯಗಳು ಕೂಡಾ ಈ ಗುಡ್ಡದ ಮೇಲೆ ಇದೆ. ಒಟ್ಟಿನಲ್ಲಿ ಮನಸ್ಸಿಗೆ ಮುದ ನೀಡುವ, ಭಕ್ತಿ ಭಾವವನ್ನ ಇಮ್ಮಡಿಗೊಳಿಸಬಲ್ಲ ಈ ಸಿದ್ದರಾಮೇಶ್ವರ ಕ್ಷೇತ್ರವನ್ನ ವಿಜಯಪುರಕ್ಕೆ ಭೇಟಿ ನೀಡೋ ಆಸಕ್ತರು ನೋಡ್ಲೇಬೇಕು.


  ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: