Vijayapura: ವಿಜಯಪುರದಲ್ಲಿ ಕಂಗೊಳಿಸುತ್ತಿದೆ ಹಸಿರು ಶಿವಲಿಂಗ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಆಲಮಟ್ಟಿ ಅಂದ್ರೇನೆ ಪ್ರವಾಸಿಗರ ಪಾಲಿನ ಸ್ವರ್ಗ! ಇದೀಗ ಅದಕ್ಕೆ ಸೇರ್ಪಡೆ ಎನ್ನುವಂತೆ ಉದ್ಯಾನವನದಲ್ಲಿ ಟೋಪಿಯರಿ ಮಾದರಿಯಲ್ಲಿ ಗಿಡ, ಬಳ್ಳಿಗಳನ್ನ ಅಲಂಕರಿಸಲಾಗಿದೆ.

  • News18 Kannada
  • 5-MIN READ
  • Last Updated :
  • Bijapur, India
  • Share this:

    ವಿಜಯಪುರ: ತಲೆ ಎತ್ತಿ ನೋಡುತ್ತಿರುವ ಜಿರಾಫೆ, ದೂರದಿಂದ ಘರ್ಜಿಸುತ್ತಿರುವ ಸಿಂಹ, ಬೇಟೆಯಾಡಲು ಕಾದು ಕುಳಿತ ಮೊಸಳೆ, ಹುಲ್ಲು ಮೇಯುತ್ತಿರುವ ಮೊಲ, ಮರಿಗಳೊಂದಿಗೆ ಸುತ್ತಾಡುತ್ತಿರುವ ಆನೆ, ದೂರದಲ್ಲಿ ಗರಿಬಿಚ್ಚಿ ನರ್ತಿಸುತ್ತಿರುವ ನವಿಲು. ಹೌದು, ಹೀಗೆ ವ್ಯಾಘ್ರ ಪ್ರಾಣಿಗಳಿಂದ ಸಾಧು ಪ್ರಾಣಿಗಳವರೆಗೂ ಎಲ್ಲವೂ ಹಚ್ಚ ಹಸಿರ ಗಾರ್ಡನ್​ನಲ್ಲಿ (Garden In Vijayapura) ಸೊಗಸಾಗಿ ಕಂಗೊಳಿಸುತ್ತಿವೆ. ಜನರ ಚಿತ್ತಾಕರ್ಷಕ ಸೆಳೆಯುವ ಗುಮ್ಮಟ ನಗರಿಯ ಈ ಉದ್ಯಾನವನ (Park) ಇದೀಗ ಪ್ರವಾಸಿಗರ ಹಾಟ್ ಫೇವರಿಟ್ ಕೂಡಾ.


    ‘ಟೋಪಿಯರಿ‘ ಮಾದರಿ ಆಕರ್ಷಣೆ
    ಯೆಸ್, ಗಿಡ, ಬಳ್ಳಿಗಳಿಂದ ಪ್ರಾಣಿ ಪಕ್ಷಿಯ ರೂಪದ ಪಡೆದ ಇವುಗಳೆಲ್ಲವೂ ಕಾಣ ಸಿಗೋದು ವಿಜಯಪುರದ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ಉದ್ಯಾನವನದಲ್ಲಿ. ಟೋಪಿಯರಿ ವಿಧಾನದಲ್ಲಿ ಇಲ್ಲಿ ಪ್ರಾಣಿ ಪಕ್ಷಿಗಳು ತಲೆ ಎತ್ತಿದ್ದ ಅತ್ಯಂತ ಆಕರ್ಷವಾಗಿದೆ.




    ಟೋಪಿಯರಿ ಮೂಲಕ ಪ್ರಾಣಿ, ಪಕ್ಷಿ, ಆಧುನಿಕ ಕಲೆ, ಆರ್ಚ್ ಸೇರಿದಂತೆ ನಾನಾ ಆಕೃತಿಗಳನ್ನ ಮೊದಲಿಗೆ ಕಬ್ಬಿಣದ ಸಹಾಯದಿಂದ ಆಕೃತಿ ಮಾಡಲಾಗುತ್ತೆ. ಈ ಆಕೃತಿಗಳಿಗೆ ಚಿತ್ರಕಲೆಯ ಅನಾಟಮಿ ಪ್ರಕಾರವೇ ಅಂತಿಮ ರೂಪ ನೀಡಲಾಗುತ್ತದೆ.


    ಸುಂದರವಾಗುವಂತೆ ಮಾಡೋದು ಹೀಗೆ!
    ಈ ಸ್ಟೀಲ್ ಫ್ರೇಮ್ ಉಳ್ಳ ಆಕೃತಿಗಳನ್ನು ನಿಯೋಜಿತ ಉದ್ಯಾನದಲ್ಲಿ ಕೂರಿಸಲಾಗುತ್ತದೆ. ಆ ಸ್ಟೀಲ್ ಫ್ರೇಮ್ ಗೆ ದಟ್ಟವಾಗಿ ಬೆಳೆಯುವ ಕಂಟಿ ಜಾತಿಗೆ ಸೇರಿದ ನಾನಾ ರೀತಿಯ ಗಿಡಗಳನ್ನು ಬೆಳೆಸಲಾಗುತ್ತದೆ. ಗಿಡಗಳು ದೊಡ್ಡದಾದಂತೆ ಆಕೃತಿಗೆ ತಕ್ಕಂತೆ  ಕತ್ತರಿಸಿ ಸುಂದರಗೊಳಿಸಲಾಗುತ್ತದೆ.


    ಇದನ್ನೂ ಓದಿ: Vijayapura: ಇಲ್ಲಿ ಐದು ರೂಪಾಯಿಗೆ ಸಿಗುತ್ತೆ ಬೆಳಗಿನ ತಿಂಡಿ! ಜನ ನೋಡಿದ್ರೆ ಜಾತ್ರೆ ನೆನಪಾಗುತ್ತೆ!


    ಪ್ರವಾಸಿಗರ ಆಕರ್ಷಣೆ
    ಆಲಮಟ್ಟಿಯ 77 ಎಕರೆ ಉದ್ಯಾನಗಳ ಸಮುಚ್ಛಯದ ಲೇಸರ್ ಫೌಂಟೇನ್ ಬಲ ಭಾಗದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಟೋಪಿಯರಿ ಉದ್ಯಾನದಲ್ಲಿ ಇಂತಹ ಸರಿ ಸುಮಾರು 90ಕ್ಕೂ ಹೆಚ್ಚು ಆಕೃತಿಗಳು ಇಲ್ಲಿವೆ.


    ಇದನ್ನೂ ಓದಿ: Vijayapura: ಜೇನು ಮಾರಿ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ವಿಜಯಪುರದ ಯುವಕ!


    ಪ್ರವಾಸಿಗರು ಇದರ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಾರೆ. ಮಕ್ಕಳಂತೂ ಖುಷಿಪಡುತ್ತಾರೆ. ಒಟ್ಟಿನಲ್ಲಿ ಆಲಮಟ್ಟಿಯ ಪ್ರವಾಸಿ ತಾಣಗಳಿಗೆ ಹೋಗೋದಿದ್ರೆ ಈ ಗಾರ್ಡನ್ ನೋಡೋದನ್ನ ಮರೆಯಬೇಡಿ.

    Published by:ಗುರುಗಣೇಶ ಡಬ್ಗುಳಿ
    First published: