ವಿಜಯಪುರ: ಹಸಿರು, ಕಪ್ಪು, ಕೆಂಪು ಹೀಗೆ ದ್ರಾಕ್ಷಿಗಳ ರಾಶಿ. ಹತ್ತು ಹಲವು ವೆರೈಟಿ! ಒಂದೊಂದ್ರದ್ದೂ ಒಂದೊಂದು ಬಗೆಯ ಟೇಸ್ಟ್. ಹೌದು, ಇದೆಲ್ಲವೂ ದ್ರಾಕ್ಷಿ ಮೇಳದ (Grapes Festival) ಗರ್ದಿ ಗಮ್ಮತ್! ವಿಧವಿಧದ ದ್ರಾಕ್ಷಿಗಳನ್ನು ನೋಡಿ ರುಚಿ ಸವಿದು ಇಷ್ಟೊಂದು ವೆರೈಟಿ ಇವೆಯೇ ಎಂದು ಸಾರ್ವಜನಿಕರೇ ಅಚ್ಚರಿಪಟ್ರು ನೋಡಿ.
ಯೆಸ್, ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ದ್ರಾಕ್ಷಿಗಳ ನಡುವೆ ಹೆಚ್ಚಿನ ವ್ಯತ್ಯಾಸ ಗುರುತಿಸೋದು ಕಷ್ಟ. ಆದ್ರೆ ದ್ರಾಕ್ಷಿ ಬೆಳೆಯಲ್ಲೂ ಹತ್ತಾರು ವೆರೈಟಿಗಳು ಇವೆ ಅನ್ನೋದನ್ನ ವಿಜಯಪುರದಲ್ಲಿ ನಡೆದ ದ್ರಾಕ್ಷಿ ಮಾರಾಟ ಮೇಳ ಸಾಬೀತುಪಡಿಸ್ತು.
ಅಬ್ಬಾ! ಇಷ್ಟೆಲ್ಲ ವಿಧದ ದ್ರಾಕ್ಷಿ ಇದ್ಯಾ?
ದ್ರಾಕ್ಷಿ ವೆರೈಟಿಗಳು, ಬೆಳೆಯುವುದು ಮತ್ತು ಮಾರ್ಕೆಟಿಂಗ್ ಮಾಡುವ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಇನ್ನು ತೋಟಗಾರಿಕಾ ಇಲಾಖೆ ವತಿಯಿಂದ ನಾಟಿ ಮಾಡಲಾದ ಗಿಡಗಳಲ್ಲಿ ಸೊಂಪಾಗಿ ಬೆಳೆದ ದ್ರಾಕ್ಷಿಗಳನ್ನ ಸ್ಥಳೀಯರು ಕಣ್ತುಂಬಿಕೊಂಡರು.
ವಿಜಯಪುರ ದ್ರಾಕ್ಷಿಯ ಸಿಹಿ ಎಲ್ಲೆಡೆ ಪಸರಿಸಲಿ!
ವಿಜಯಪುರ ದೇಶದಲ್ಲಿಯೇ ದ್ರಾಕ್ಷಿ ಬೆಳೆಯಲ್ಲಿ 2ನೇ ಸ್ಥಾನದಲ್ಲಿದೆ. ವಿಜಯಪುರ ದ್ರಾಕ್ಷಿಯ ಸಿಹಿ ಎಲ್ಲೆಡೆ ಪಸರಿಸಲಿ ಎಂಬ ಉದ್ದೇಶದಿಂದ ಈ ಮೇಳವನ್ನ ಆಯೋಜಿಸಲಾಗಿತ್ತು. ಈ ಮೇಳಕ್ಕೆ ಆಗಮಿಸಿದ ಸಾರ್ವಜನಿಕರು ಕೂಡಾ ನೇರವಾಗಿ ರೈತರಿಂದ ಕಡಿಮೆ ಬೆಲೆಗೆ ದ್ರಾಕ್ಷಿಗಳನ್ನ ಖರೀದಿಸಿ ಕೊಂಡೊಯ್ದರು.
ಇದನ್ನೂ ಓದಿ: Vijayapura: ಗುಮ್ಮುತ್ತಾ ಗೆದ್ದ ಟಗರಿಗೆ ಬುಲೆಟ್ ಬೈಕ್! ಶಿಳ್ಳೆ, ಕೇಕೆ ಫುಲ್ ಎಂಜಾಯ್!
ಥಾಮ್ಸನ್ ಸೀಡ್ಲೆಸ್, ಮಾಣಿಕ್ ಚಮನ್, ಸೋನಾಕಾ, ಎಸ್ಎಸ್ಎನ್, ಅನುಷ್ಕಾ, ಶರದ ಸೀಡ್ಲೆಸ್, ಕೃಷ್ಣಾ ಮತ್ತು ಜ್ಯೋತಿ ತಳಿಗಳ ದ್ರಾಕ್ಷಿಗಳ ಮಾಹಿತಿಯನ್ನ ಪಡೆಯುವ ಅವಕಾಶವೂ ಜನರಿಗೆ ಸಿಕ್ಕಿತು.
ಇದನ್ನೂ ಓದಿ: Vijayapura Viral News: 21 ರ ಹರೆಯದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ 73 ವರ್ಷದ ಅಜ್ಜಿ!
ಒಟ್ಟಿನಲ್ಲಿ ವಿಜಯಪುರದ ದ್ರಾಕ್ಷಿ ಸಿಹಿ ಊರಿಡೀ ಪಸರಿಸುವಂತಾಗಲು ದ್ರಾಕ್ಷಿ ಮೇಳ ಆಯೋಜಿಸಿದ್ದು ಉತ್ತಮ ಸ್ಪಂದನೆಯೂ ವ್ಯಕ್ತವಾಯಿತು.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ