• Home
  • »
  • News
  • »
  • vijayapura
  • »
  • Sugar Toys: ಗೌರಿ ಹುಣ್ಣಿಮೆಗೆ ಸಕ್ಕರೆ ಗೊಂಬೆಗಳು! ಆಹಾ, ನೋಡೋಕೆ ಭಾರೀ ಮುದ್ಮುದ್ದು!

Sugar Toys: ಗೌರಿ ಹುಣ್ಣಿಮೆಗೆ ಸಕ್ಕರೆ ಗೊಂಬೆಗಳು! ಆಹಾ, ನೋಡೋಕೆ ಭಾರೀ ಮುದ್ಮುದ್ದು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಮಹಿಳೆಯರ ಭಕ್ತಿ, ಭಾವನೆಗಳಿಗೆ ತಕ್ಕಂತೆ ತೇರು, ಆನೆ, ಶಿವ, ಪಾರ್ವತಿ, ಒಂಟೆ, ಅರ್ಜುನನ ಬಿಲ್ಲು, ಮಂಟಪ, ಆಂಜನೇಯ, ವಿವಿಧ ರೀತಿಯ ಪಶುಪಕ್ಷಿಗಳು ಹೀಗೆ ನಾನಾ ಸಕ್ಕರೆ ಗೊಂಬೆಗಳು ಸಿಗ್ತವೆ.

  • Share this:

    ವಿಜಯಪುರ: ಮಾರುಕಟ್ಟೆ ತುಂಬಾ ಸಿಹಿ ತಿಂಡಿಗಳ ರಾಶಿ. ವಿಶಿಷ್ಟ ಆಕಾರದ ಗೊಂಬೆಗಳ ವೈಭವ! ಇದೆಲ್ಲ ಖರೀದಿಗಾಗಿ ಮುಗಿಬಿದ್ದಿರೋ ಗ್ರಾಹಕರು.ಈ ಸಿಹಿತಿಂಡಿಗಳಿಗೂ ಗೌರಿ ಹುಣ್ಣಿಮೆಗೂ ಅವಿನಾಭಾವ ಸಂಬಂಧ. ಅರೆರೆ! ಅಷ್ಟು ಮಾತ್ರವಲ್ಲ ಇದು ಮನುಷ್ಯ ಮನುಷ್ಯರ ಸಂಬಂಧವನ್ನೂ ಗಟ್ಟಿಮಾಡ್ತಿದೆ ನೋಡಿ. ಮಾರುಕಟ್ಟೆಯಲ್ಲಿ ಕಾಣೋ ಈ ಗೊಂಬೆಗಳೆಲ್ಲವೂ ಸಕ್ಕರೆಯಿಂದ (Sugar Toys) ತಯಾರಿಸಿದ್ದು. ಗೌರಿ ಹುಣ್ಣಿಮೆ ಬಂತಂದ್ರೆ ಸಾಕು, ಈ ಸಕ್ಕರೆ ಗೊಂಬೆಗಳು ಮಾರುಕಟ್ಟೆಗೆ ಆಗಮಿಸುತ್ತವೆ. ಉತ್ತರ ಕರ್ನಾಟಕದ (Uttara Karnataka) ವಿಜಯಪುರ, ಬಾಗಲಕೋಟೆ ಜಿಲ್ಲೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ವಿಶಿಷ್ಟವಾಗಿ ಗೌರಿ ಹುಣ್ಣಿಮೆ (Gowri Hunnime) ಆಚರಿಸ್ತಾರೆ.


    ಮನೆಯ ಹಿರಿಯರು ಪೇಟೆಗೆ ಹೋಗಿ ಸಕ್ಕರೆ ಗೊಂಬೆಗಳನ್ನು ಖರೀದಿಸಿ ತರ್ತಾರೆ. ಹೀಗೆ ತಂದ ಸಕ್ಕರೆ ಗೊಂಬೆಗಳನ್ನಿರಿಸಿ ತಟ್ಟೆಯಲ್ಲಿ ದೀಪ ಹಚ್ಚಿ ಗೌರಮ್ಮನ ವಿಗ್ರಹಕ್ಕೆ ಆರತಿ ಎತ್ತುತ್ತಾರೆ. ಆ ಬಳಿಕ ಕುಟುಂಬದ ಸದಸ್ಯರಿಗೆ, ನೆರೆ ಹೊರೆಯವರಿಗೆ, ಸಂಬಂಧಿಕರಿಗೆ ಆರತಿ ಬೆಳಗುತ್ತಾರೆ.


    ಈ ಸಕ್ಕರೆ ಗೊಂಬೆಗಳು ಬೇಕೆ ಬೇಕು!
    ಅಂದಹಾಗೆ ಈ ಆಚರಣೆ ಎಲ್ಲಾ ಮನೆಗಳಲ್ಲೂ ಇರಲ್ಲ. ಹಾಗಾಗಿ ಗೌರಮ್ಮನ ಮೂರ್ತಿ ಪ್ರತಿಷ್ಠಾಪಿಸುವವರು ಅದ್ದೂರಿಯಾಗಿ ಹಬ್ಬ ಆಚರಿಸ್ತಾರೆ. ಹೀಗಾಗಿ ಸಕ್ಕರೆ ಗೊಂಬೆ, ಸಿಹಿತಿಂಡಿಗಳ ಮಾರಾಟವೂ ಜೋರಾಗಿರ್ತವೆ. ಗೌರಿ ಹುಣ್ಣಿಮೆಗೆ 15 ದಿನಗಳು ಬಾಕಿ ಇರುವಾಗಲೇ ವ್ಯಾಪಾರಿಗಳು ಸಕ್ಕರೆ ಆರತಿ ತಯಾರಿಸಲು ಸಿದ್ಧತೆ ನಡೆಸ್ತಾರೆ. ಮಹಿಳೆಯರು ಗೌರಿಗೆ ಆರತಿ ಬೆಳಗಲು ಮುಖ್ಯವಾಗಿ ಈ ಸಕ್ಕರೆ ಗೊಂಬೆಗಳು ಬೇಕೆ ಬೇಕು, ಇಲ್ಲದಿದ್ದರೆ ಗೌರಿ ಹುಣ್ಣಿಮೆ ಆಚರಣೆಯೇ ಅಪೂರ್ಣ ಅಂತ ನಂಬಲಾಗ್ತದೆ. ಅನೇಕ ಕುಟುಂಬಗಳು ಸಕ್ಕರೆ ಗೊಂಬೆ ತಯಾರಿಸಿ ವಿಜಯಪುರದಲ್ಲಿ ಮಾರಾಟ ಮಾಡ್ತಿದ್ದಾರೆ.


    ಇದನ್ನೂ ಓದಿ: God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!


    ನಾನಾ ಗೊಂಬೆಗಳು!
    ಮಹಿಳೆಯರ ಭಕ್ತಿ, ಭಾವನೆಗಳಿಗೆ ತಕ್ಕಂತೆ ತೇರು, ಆನೆ, ಶಿವ, ಪಾರ್ವತಿ, ಒಂಟೆ, ಅರ್ಜುನನ ಬಿಲ್ಲು, ಮಂಟಪ, ಆಂಜನೇಯ, ವಿವಿಧ ರೀತಿಯ ಪಶುಪಕ್ಷಿಗಳು ಹೀಗೆ ನಾನಾ ಸಕ್ಕರೆ ಗೊಂಬೆಗಳು ಸಿಗ್ತವೆ.


    ಇದನ್ನೂ ಓದಿ: Bagalakote Viral Video: ಕೃಷ್ಣಾ ನದಿಯಲ್ಲಿ ಟ್ರ್ಯಾಕ್ಟರ್ ತೇಲುತ್ತೆ! ಕಬ್ಬು ಅತ್ತಂದಿತ್ತ ದಾಟುತ್ತೆ!


    ಈ ಗೊಂಬೆಗಳ ದರವೆಷ್ಟಿರುತ್ತೆ?
    ಪ್ರತಿ ಕೆಜಿಗೆ 140 ರಿಂದ 160ರ ವರೆಗೆ ಸಕ್ಕರೆ ಗೊಂಬೆಯ ಆರತಿಗಳು ಮಾರಾಟವಾಗ್ತವೆ. ಒಟ್ಟಾರೆ ಸಕ್ಕರೆ ಗೊಂಬೆಗಳು ಮಾರುಕಟ್ಟೆಗೆ ಬಂದು ಗೌರಿ ಹುಣ್ಣಿಮೆಗೆ ಅದ್ಧೂರಿಯ ಕ್ಷಣಗಣನೆ ಆರಂಭವಾಗಿದೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: