• Home
  • »
  • News
  • »
  • vijayapura
  • »
  • Jobs In Vijayapura: ವಿಜಯಪುರದ ಉದ್ಯೋಗಾಕಾಂಕ್ಷಿಗಳೇ, ಈ ಅವಕಾಶ ಬಿಟ್ಕೊಳ್ಬೇಡಿ!

Jobs In Vijayapura: ವಿಜಯಪುರದ ಉದ್ಯೋಗಾಕಾಂಕ್ಷಿಗಳೇ, ಈ ಅವಕಾಶ ಬಿಟ್ಕೊಳ್ಬೇಡಿ!

ಅಪ್ಲೈ ಮಾಡಿ

ಅಪ್ಲೈ ಮಾಡಿ

ವಿಜಯಪುರ ಜಿಲ್ಲೆಯ ನಿರುದ್ಯೋಗ ಯುವಕರಿಗೆ ಈ ಸಂದರ್ಶನ ಬಹಳಷ್ಟು ಉಪಯುಕ್ತವಾಗಲಿದೆ. ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

  • Share this:

    ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಜಯಪುರ (Jobs In Vijayapura) ವತಿಯಿಂದ ಪ್ರತಿಷ್ಟಿತ ಕಂಪನಿಯಾದ ಇ-ಕಾರ್ಟ್ ಲಾಜಿಸ್ಟಿಕ್‍ನ ಸಿಂಧಗಿ, ಇಂಡಿ ಮತ್ತು ವಿಜಯಪುರ ಘಟಕಗಳಲ್ಲಿ ಖಾಲಿ ಇರುವ ಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆಗಳಿಗಾಗಿ ಇದೇ ಜನವರಿ 13 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಜಯಪುರ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಅರ್ಹ ಅಭ್ಯರ್ಥಿಗಳ ಸಂದರ್ಶನ ಏರ್ಪಡಿಸಲಾಗಿದೆ.

    ಸಂಸ್ಥೆಯ ಹೆಸರುಇ-ಕಾರ್ಟ್ ಲಾಜಿಸ್ಟಿಕ್‍
    ಕೆಲಸದ ಸ್ಥಳಸಿಂಧಗಿ, ಇಂಡಿ ಮತ್ತು ವಿಜಯಪುರ
    ಕೆಲಸದ ಹೆಸರುಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆ
    ಸಂದರ್ಶನದ ದಿನಾಂಕಜನವರಿ 13
    ಸಂಪರ್ಕ ಸಂಖ್ಯೆ9380189600 ಅಥವಾ 9945000793

    ಈ ದಾಖಲೆಗಳ ಅಗತ್ಯವಿದೆ
    ವಿಜಯಪುರ ಜಿಲ್ಲೆಯ ನಿರುದ್ಯೋಗ ಯುವಕರಿಗೆ ಈ ಸಂದರ್ಶನ ಬಹಳಷ್ಟು ಉಪಯುಕ್ತವಾಗಲಿದೆ. ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ನೀವು ಈ ಸಂದರ್ಶನದಲ್ಲಿ ಭಾಗವಹಿಸಬೇಕಾದರೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಮತ್ತು ಯಾವುದೇ ಪದವಿ ಪಾಸ್ ಅಥವಾ ಫೇಲ್ ಆದ, ಕಡ್ಡಾಯವಾಗಿ ದ್ವಿಚಕ್ರ ವಾಹನ ಮತ್ತು ಲೈಸನ್ಸ್ ಹೊಂದಿರಬೇಕು. ಈ ಎಲ್ಲ ಅರ್ಹತೆ ಇರುವವರು ಮಾತ್ರ ಈ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವನ್ನ ನೀಡಲಾಗುತ್ತದೆ.


    ಇದನ್ನೂ ಓದಿ: Mantralaya: ಮಂತ್ರಾಲಯಕ್ಕೆ ಪಾದಯಾತ್ರೆ, ನೀವೂ ಪಾಲ್ಗೊಳ್ಳಲು ಇಲ್ಲಿದೆ ಅವಕಾಶ




    ಶಿಕ್ಷಣದಲ್ಲಿ ಪಾಸ್ ಮತ್ತು ಫೇಲ್ ಆದ ಆಸಕ್ತ ಅಭ್ಯರ್ಥಿಗಳು ಈ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


    ಇದನ್ನೂ ಓದಿ: Jobs In Kuwait: ಕುವೈತ್​ನಲ್ಲಿ ಭಾರೀ ಉದ್ಯೋಗಾವಕಾಶ, ಇಲ್ಲಿದೆ ಸಂಪೂರ್ಣ ವಿವರ


    ನೀವು ಸಂಪರ್ಕಿಸಬೇಕಾದ ವಿಳಾಸ ಹೀಗಿದೆ
    ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 9380189600 ಅಥವಾ 9945000793 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ವರದಿ:  ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು