• Home
  • »
  • News
  • »
  • vijayapura
  • »
  • Gol Gumbaz Travel Plan: 25 ರೂಪಾಯಿಯಲ್ಲಿ ಗೋಲ್ ಗುಂಬಜ್‌ ನೋಡಿ!

Gol Gumbaz Travel Plan: 25 ರೂಪಾಯಿಯಲ್ಲಿ ಗೋಲ್ ಗುಂಬಜ್‌ ನೋಡಿ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇಲ್ಲೇ ನೋಡಿ, ನೀವೇನಾದರೂ ಒಂದು ಬಾರಿ ಪಿಸುಗುಟ್ಟಿದ್ರೆ 7 ಬಾರಿ ಪ್ರತಿಧ್ವನಿಸುತ್ತೆ. ಇಷ್ಟೆಲ್ಲ ಖುಷಿನ ಕೇವಲ 25 ರೂಪಾಯಿ ಟಿಕೆಟ್​ನಲ್ಲಿ ಅನುಭವಿಸಬಹುದು.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ ಅಂದ್ರೆ ಸಾಕು ನೆನಪಾಗೋದೆ ವಿಶಾಲ ಗುಮ್ಮಟ, ಕಮಾನು! ಐತಿಹಾಸಿಕ ಕಟ್ಟಡಗಳಿಗೆ ಹೆಸರುವಾಸಿ ನೋಡಿ ಈ ಜಿಲ್ಲೆ ಸದಾಕಾಲ ಪ್ರವಾಸಿಗರನ್ನ ಕೈ ಬೀಸಿಯೋ ಕರೆಯುತ್ತೆ. ಇಲ್ಲಿರೋ ಗೋಲ ಗುಂಬಜ್ ಅಂತೂ ಎಲ್ಲರ ಅಚ್ಚುಮೆಚ್ಚು. ಇದ್ರ ಜೊತೆ ವಿಜಯಪುರದಲ್ಲಿ (Vijayapura Travel Plan) ನೋಡಲೇಬೇಕಾದ ಇನ್ನೊಂದು ಸಖತ್ ತಾಣ ಶಿವನಗಿರಿಯ ಶಿವನ ಪ್ರತಿಮೆ. ಚುಮುಚುಮು ಚಳಿಯಲ್ಲೇ ನೀವು ಗೋಲ್ ಗುಂಬಜ್ (Gol Gumbaz)  ನೋಡಬಹುದು.


    ಬೆಳಗ್ಗೆ 6 ಗಂಟೆಗೆ ಓಪನ್ ಆಗೋ ಗೋಲ ಗುಂಬಜ್ ಮನಸ್ಸಿಗೊಂಥರಾ ಆಹ್ಲಾದ ಸಿಗುತ್ತೆ. ಆರಂಭದಲ್ಲಿ ಸಿಗೋ ಮ್ಯೂಸಿಯಂ ಸಿಗುತ್ತೆ, ಇದನ್ನ ನೋಡಿ ಹಾಗೆ ಒಳಪ್ರವೇಶಿಸಿದರೆ ಸಾಕು, ಮೊಹಮ್ಮದ್ ಆದಿಲ್ ಷಾ ನಿರ್ಮಿಸಿದ 210 ಅಡಿ ಎತ್ತರದ ಈ ಭವ್ಯ ಗೋಳಗುಮ್ಮಟ ಕಣ್ತುಂಬಿಸಿಕೊಳ್ಳಬಹುದು. ಇಲ್ಲೇ ನೋಡಿ, ನೀವೇನಾದರೂ ಒಂದು ಬಾರಿ ಪಿಸುಗುಟ್ಟಿದ್ರೆ 7 ಬಾರಿ ಪ್ರತಿಧ್ವನಿಸುತ್ತೆ. ಇಷ್ಟೆಲ್ಲ ಖುಷಿನ ಕೇವಲ 25 ರೂಪಾಯಿ ಟಿಕೆಟ್​ನಲ್ಲಿ ಅನುಭವಿಸಬಹುದು.


    Gol Gumbaz Location
    ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಇದನ್ನೂ ಓದಿ: Good News: ಅಯ್ಯಪ್ಪ ಭಕ್ತರಿಗೆ ಶುಭಸುದ್ದಿ; ಉತ್ತರ ಕರ್ನಾಟಕದಿಂದ ವಿಶೇಷ ರೈಲು ಘೋಷಣೆ


    ಶಿವಗಿರಿಯನ್ನಂತೂ ತಪ್ಪಿಸೋಹಾಗಿಲ್ಲ
    ಇನ್ನು ವಿಜಯಪುರಕ್ಕೆ ಬಂದ್ರೆ ಶಿವಗಿರಿಯನ್ನಂತೂ ನೀವು ತಪ್ಪಿಸೋಹಾಗೇ ಇಲ್ಲ. ಇಲ್ಲಿಗೆ ಬಂದಿಲ್ಲ ಅಂದ್ರೆ, ಜಗತ್ತಿನ ನಾಲ್ಕನೇ ಅತಿ ಎತ್ತರದ ಶಿವನ ಪ್ರತಿಮೆಯನ್ನ ಮಿಸ್ ಮಾಡ್ಕೊಳ್ತೀರಿ. ಸುಮಾರು ನಾಲ್ಕು ಕಿಲೋಮೀಟರ್ ದೂರದಿಂದಲೇ ಕಾಣಿಸೋ ಶಿವನ ಪ್ರತಿಮೆ 85 ಅಡಿ ಎತ್ತರವಿದೆ. ರಂಬಾಪುರ ಗ್ರಾಮದ ಉಕ್ಕಲಿ ರಸ್ತೆಯಲ್ಲಿರೋ ಶಿವ ಪ್ರತಿಮೆಯನ್ನ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ವೀಕ್ಷಿಸೋಕೆ ಅವಕಾಶವಿದೆ.


    ಇದನ್ನೂ ಓದಿ: Bagalakote Viral Video: ಕೃಷ್ಣಾ ನದಿಯಲ್ಲಿ ಟ್ರ್ಯಾಕ್ಟರ್ ತೇಲುತ್ತೆ! ಕಬ್ಬು ಅತ್ತಂದಿತ್ತ ದಾಟುತ್ತೆ!


    ವಿಜಯಪುರದಲ್ಲೇ ಸಿಗೋಣ ಬನ್ನಿ!
    ಇಷ್ಟೇ ಅಲ್ದೇ, ಇನ್ನೂ ಹತ್ತು ಹಲವು ಪ್ರವಾಸಿ ತಾಣಗಳನ್ನ ಹೊಂದಿರೋ ವಿಜಯಪುರದಲ್ಲಿ ಸದ್ಯ ಪ್ರವಾಸಿ ಮಾರ್ಗದರ್ಶಕರ ಸಂಖ್ಯೆ ಕಡಿಮೆಯಿದೆ. ಆದರೂ ಗೋಲ ಗುಂಬಜ್, ಶಿವಗಿರಿಯಂತಹ ಸ್ಥಳಗಳಿಗೆ ಸ್ವತಃ ನೀವೇ ಭೇಟಿ ನೀಡಿ ಸೌಂದರ್ಯ ಸವಿಯಬಹುದು, ಇನ್ನೇಕೆ ತಡ? ವಿಜಯಪುರದಲ್ಲೇ ಸಿಗೋಣ ಬನ್ನಿ..


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: