ವಿಜಯಪುರ: ಕಲರ್ ಕಲರ್ ವಾಟ್ ಕಲರ್ ಎನ್ನುತ್ತಿದೆ ಗುಂಬಜ್! ಸುತ್ತಲೂ ಲೈಟಿಂಗ್ನಿಂದ ಕೈ ಬೀಸಿ ಕರೆಯುತ್ತಿದೆ ಗುಮ್ಮಟ. ಪ್ರವಾಸಿಗರಿಗಂತೂ (Tourists) ಖುಷಿಯೋ ಖುಷಿ! ಸಂಜೆಯಾಗುತ್ತಲೇ ಹೊರಡುತ್ತಿದ್ದವರೆಲ್ಲ ಈಗ ರಾತ್ರಿ ತನಕವಿದ್ದು ಕಲರ್ ಫುಲ್ ಗೋಲ್ ಗುಂಬಜ್ (Gol Gumbaz) ಕಟ್ಟಡವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಗುಮ್ಮಟಕ್ಕೆ ಏಕಾಏಕಿ ಈ ಟಚ್ ಅಪ್ (Gol Gumbaz Lighting) ಯಾಕ್ ಗೊತ್ತಾ? ಹೇಳ್ತೀವಿ ನೋಡಿ.
ಭಾರತ ಜಿ-20 ಶೃಂಗಸಭೆಯಲ್ಲಿ ಮುಂದಿನ ವರ್ಷದ ಅಧ್ಯಕ್ಷತೆಯನ್ನ ವಹಿಸಿಕೊಂಡಿರುವುದೇ ಈ ಸಂಭ್ರಮಕ್ಕೆ ಕಾರಣ. ಕೇಂದ್ರ ಸರ್ಕಾರ ಜಿ-20 ಶೃಂಗಸಭೆಯ ಅಧ್ಯಕ್ಷತೆ ಸಿಕ್ಕಿರೋದಕ್ಕೆ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯ ಐತಿಹಾಸಿಕ ಸ್ಮಾರಕಗಳಿಗೆ ದೀಪಾಲಂಕಾರ ಮಾಡಲು ಸೂಚಿಸಿದೆ.
ಇದನ್ನೂ ಓದಿ: Viral Fair: ವಿಜಯಪುರದಲ್ಲಿ ಭಕ್ತರು ಕಲ್ಲಿಗೆ ತಲೆಗೆ ಜಜ್ಜಿಕೊಳ್ಳುವ ಜಾತ್ರೆ!
ಏಳು ದಿನಗಳ ಕಾಲ ಅವಕಾಶ
ಅದರಂತೆ ರಾಜ್ಯದ ಗೋಳ ಗುಂಬಜ್ ಸಹ ಈಗ ಕಲರ್ ಫುಲ್ ಆಗಿ ಕಂಗೊಳಿಸುತ್ತಿದೆ. ಏಳು ದಿನಗಳ ಕಾಲ ಪ್ರವಾಸಿಗರಿಗೆ ವೀಕ್ಷಣೆಗೂ ಮುಕ್ತ ಅವಕಾಶ ನೀಡಿದೆ. ಗೋಳ ಗುಮ್ಮಟದ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಹೊಳೆಯುವುದನ್ನ ನೋಡಲು ಎರಡು ಕಣ್ಣುಗಳು ಸಾಲದು. ಮಿರಮಿರ ಮಿಂಚುತ್ತಿರುವ ಗುಂಬಜ್ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗಿದೆ.
ಇದನ್ನೂ ಓದಿ: Inspiration: ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ವಿಜಯಪುರದ ಮಲ್ಲಮ್ಮ; ಇವರ ಜೀವನವೇ ಸ್ಪೂರ್ತಿಗೀತೆ!
ಗೋಳ ಗುಂಬಜ್ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಗೋಳಗುಮ್ಮಟ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದನ್ನು ಕಂಡು ಪ್ರವಾಸಿಗರ ಸಂಭ್ರಮ ಇಮ್ಮಡಿಯಾಗಿದೆ. ಒಟ್ಟಿನಲ್ಲಿ ಜಿ-20 ಅಧ್ಯಕ್ಷತೆ ಸಿಕ್ಕ ಖುಷಿಯಲ್ಲಿ ಗೋಳ ಗುಂಬಜ್ ಕೂಡಾ ಮಿರಮಿರ ಮಿಂಚುತ್ತಿರುವುದು ವಿಜಯಪುರದ ನಾಗರಿಕರಿಗೆ ಖುಷಿ ಹೆಚ್ಚಿಸಿದೆ.
ವರದಿ: ಪ್ರಶಾಂತ್ ಹೂಗಾರ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ