• Home
  • »
  • News
  • »
  • vijayapura
  • »
  • God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!

God Sanjeeva Murthy: ಕಾಣೋಕೆ ಆಂಜನೇಯನಂತಿದ್ರೂ, ಅವನಲ್ಲ! ಈತ ಸೈನಿಕರನ್ನು ಕಾಪಾಡೋ ಸಂಜೀವ ಮೂರ್ತಿ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಬೆಟ್ಟ ಗುಡ್ಡಗಳ ನಡುವೆ ಇರೋ 201 ಮೆಟ್ಟಿಲುಗಳನ್ನು ಹತ್ತಿ ಸಾಗಿದರೆ ನೀವು ಬಂಡೆ ಕಲ್ಲುಗಳ ಮೇಲೆ ವಿರಾಜಮಾನನಾಗಿ ನಿಂತಿರೋ ಈ ಸಂಜೀವ ಮೂರ್ತಿಯ ದರ್ಶನವಾಗುತ್ತೆ.

  • Share this:

    ಸುತ್ತಲು ಬೆಟ್ಟ, ಗುಡ್ಡ.. ಬೃಹದಾಕಾರ ಬಂಡೆ ಕಲ್ಲುಗಳು. ಈ ಕಿರಿದಾದ ಬೆಟ್ಟವನ್ನ ಏರಿದಾಗ ದರ್ಶನವಾಗುವುದೇ ಈ ಹನುಮಂತನಂತಿರೋ ದೇವರು. ಹತ್ತು ಹಲವು ಕಾರಣಕ್ಕಾಗಿ ಈ ಬೆಟ್ಟವನ್ನೇರಿದ್ರೆ ನಿಮ್ಮ ಇಷ್ಟಾರ್ಥಗಳು ಈಡೇರಿಸುವವನು ಈ ಸಂಜೀವ. ಹೌದು, ಇಲ್ಲಿರೋ ಸಂಜೀವಮೂರ್ತಿ (God Sanjeeva Moorthy)  ದೂರದಲ್ಲಿ ನೋಡ್ತಿದ್ರೆ ಆಂಜನೇಯನನ್ನೇ (Hanuman) ನೆನಪಿಸುತ್ತೆ. ಆದರೆ ಆಂಜನೇಯನಲ್ಲ, ಬದಲಿಗೆ ಇದು ಸಂಜೀವ ಮೂರ್ತಿ. ಬೆಟ್ಟ ಗುಡ್ಡಗಳ ನಡುವೆ ಇರೋ 201 ಮೆಟ್ಟಿಲುಗಳನ್ನು ಹತ್ತಿ ಸಾಗಿದರೆ ನೀವು ಬಂಡೆ ಕಲ್ಲುಗಳ ಮೇಲೆ ವಿರಾಜಮಾನನಾಗಿ ನಿಂತಿರೋ ಈ ಸಂಜೀವ ಮೂರ್ತಿಯ ದರ್ಶನವಾಗುತ್ತೆ.


    ಬಾಗಲಕೋಟೆ ನಗರದಿಂದ ಇಳಕಲ್ಲ ಮತ್ತು ಗುಳೇದಗುಡ್ಡ ಮಾರ್ಗವಾಗಿ ಸಂಚರಿಸುವಾಗ ಶಿರೂರ ಎಂಬ ಪಟ್ಟಣದಲ್ಲಿ ಈ ಸಂಜೀವ ಮೂರ್ತಿ ಸಿಗುತ್ತೆ. ಈ ಜಿಲ್ಲೆ ಇಂದಿಗೂ ಹೆಚ್ಚು ಸೈನಿಕರನ್ನ ಹೊಂದಿರೋ ಊರಾಗಿದ್ರಿಂದ, ಇದನ್ನ ಸೈನಿಕರ ತವರೂರು ಅಂತಾಲೂ ಸ್ಥಳೀಯವಾಗಿ ಕರೆಯಲಾಗ್ತದೆ. ಹೀಗೆ ಸೈನಿಕರು, ಕುಸ್ತಿಪಟುಗಳಂತೂ ಸಂಜೀವ ಮೂರ್ತಿಯ ಪರಮ ಭಕ್ತರು.


    ಸಂಜೀವ ಮೂರ್ತಿಯ ಇತಿಹಾಸವೇ ರೋಚಕ
    ವಿಶೇಷ ಅಂದ್ರೆ ಈ ಮೂರ್ತಿಯನ್ನು ಕೇವಲ ಒಂದೇ ದಿನದಲ್ಲಿ ಕೆತ್ತಿ, ಅದೇ ದಿನವೇ ಪ್ರತಿಷ್ಠಾಪಿಸಲಾಗಿದೆ ಅನ್ನೋ ಐತಿಹ್ಯವಿದೆ. ಶತಶತಮಾನಗಳ ಹಿಂದೆ ಇಲ್ಲಿ ಓರೆಮುಖದ ಹನುಮಪ್ಪನ ಮೂರ್ತಿ ಇತ್ತಂತೆ .ಆ ಮೂರ್ತಿಯನ್ನ ಹುಚ್ಚನೊಬ್ಬ ಭಗ್ನಗೊಳಿಸಿ ಪ್ರಪಾತಕ್ಕೆ ಎಸೆದಿದ್ದನಂತೆ. ಇದಾದ ಬಳಿಕ ಈ ಸ್ಥಳದಲ್ಲಿ ಸಂಜೀವ ಮೂರ್ತಿಯನ್ನ ಪ್ರತಿಷ್ಠಾಪಿಸಲಾಗಿದೆ ಎಂದು ಸ್ಥಳೀಯರು ವಿವರಿಸ್ತಾರೆ.


    ಇದನ್ನೂ ಓದಿ: Ilkal Saree Special: ಇಳಕಲ್ ಸೀರೆ ಹೀಗೆ ತಯಾರಾಗುತ್ತೆ! ನೀವೂ ಮಿರಮಿರ ಮಿಂಚಿ!


    ಶನಿವಾರ ಸಂಜೀವ ಮೂರ್ತಿಯ ವಾರ
    ಶನಿವಾರ ಈ ಸಂಜೀವ ಮೂರ್ತಿಯ ವಾರ. ಅಂದು ಸಂಜೆಯಾಗುತ್ತಿದ್ದಂತೆ ಭಕ್ತರ ದಂಡೇ ಇಲ್ಲಿಗೆ ಹರಿದುಬರುತ್ತದೆ. ಈ ಮೂರ್ತಿಗೆ ಆಸರೆಗಾಗಿ ಸುಮಾರು 13 ಗಜ ಎತ್ತರದ ಗೋಡೆಯಿದೆ. ಮುಂದೆ 30 ಅಡಿ ಎತ್ತರದ ದೀಪಸ್ತಂಭವಿದೆ. ಇದಕ್ಕೆ ಯಾವುದೇ ಗೋಪುರವಿಲ್ಲ. ಬಯಲಲ್ಲಿಯೇ ಈ ಮೂರ್ತಿ ಇದೆ.


    ಇದನ್ನೂ ಓದಿ: Best Waterfalls Uttara Karnataka: ಬಾಗಲಕೋಟೆಯ ಅದ್ಭುತ ಜಲಪಾತ! ಪ್ರಕೃತಿ ಸೌಂದರ್ಯದ ವೈಭವ


    ಸದ್ಯ ಬಯಲು ಗುಡ್ಡದ ಮೇಲೆ ಈ ದೇವರ ಮೂರ್ತಿಯಿದ್ದು ಪೂಜಾರಿ ಮತ್ತು ರೆಡ್ಡಿ ಮನೆತನದವರು ನಿತ್ಯ ಇಲ್ಲಿಗೆ ಬಂದು ವಿಶೇಷ ಪೂಜೆ ಮಾಡ್ತಾರೆ. ಒಟ್ಟಾರೆ ಶನಿವಾರ ಬಂತಂದ್ರೆ ಸಂಜೀವ ಮೂರ್ತಿ ಭಕ್ತರು ಆಶೀರ್ವಾದ ಪಡೆದು ಕೃತಾರ್ಥರಾಗ್ತಾರೆ. ಧನ್ಯತೆ ಅನುಭವಿಸ್ತಾರೆ.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: