Vijayapura: ಕರ್ನಾಟಕ ರಾಜ್ಯ ಸಫಾಯಿ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ

ಹಾಗಾದರೆ ಹೇಗೆ ಅರ್ಜಿಸಲ್ಲಿಸುವುದು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆಗಳೇನು? ಎಲ್ಲ ವಿವರ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಜಯಪುರ: ಕರ್ನಾಟಕ ರಾಜ್ಯ ಸಫಾಯಿ ಅಭಿವೃದ್ಧಿ ನಿಗಮ ನಿಯಮಿತದಿಂದ 2022-23ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಯೋಜನೆಗಳು, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆಗೆ (Ganga Kalyan Yojana)  ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯಾ ನಿಗಮದ ವ್ಯಾಪ್ತಿಯಲ್ಲಿ ಬರುವ ಗುರುತಿಸಲ್ಪಟ್ಟ ಮ್ಯಾನ್ಯುಯೆಲ್ ಸ್ಕಾವೆಂಜರ್‌ಗಳು ಸಫಾಯಿ ಕರ್ಮಚಾರಿಗಳು ಮತ್ತು ಅವಲಂಬಿತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.  ಜೊತೆಗೆ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ಮತ್ತು ಅಲೆಮಾರಿ ಕೋಶದ ವ್ಯಾಪ್ತಿಯಲ್ಲಿ ಗುರುತಿಸಿರುವ ಮತ್ತು ಪರಿಶಿಷ್ಟ ಜಾತಿ ಸಮುದಾಯದವರು ಅರ್ಜಿಗಳನ್ನು ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಹಾಗಾದರೆ ಹೇಗೆ ಅರ್ಜಿ ಸಲ್ಲಿಸುವುದು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆಗಳೇನು? ಎಲ್ಲ ವಿವರ ಇಲ್ಲಿದೆ ನೋಡಿ.























    ಯೋಜನೆಯ ಹೆಸರುಸ್ವಯಂ ಉದ್ಯೋಗ ಯೋಜನೆಗಳು, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ
    ಯಾರು ಅರ್ಜಿ ಸಲ್ಲಿಸಬಹುದು?ಅಲೆಮಾರಿ ಕೋಶದ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟ ಸಮುದಾಯಗಳು, ಪರಿಶಿಷ್ಟ ಜಾತಿ ಸಮುದಾಯದವರು
    ಹೇಗೆ ಅರ್ಜಿ ಸಲ್ಲಿಸುವುದು?ಇಲ್ಲಿ ಕ್ಲಿಕ್ ಮಾಡಿ
    ದೂರವಾಣಿ ಸಂಖ್ಯೆ:

    08352-276743

    ಕಲ್ಯಾಣಮಿತ್ರ ಸಹಾಯವಾಣಿ:  9482300400
    ಕೊನೆಯ ದಿನಾಂಕಆಗಸ್ಟ್  20

    ಇದನ್ನೂ ಓದಿ: Vijayapura: ಸೈನಿಕನ ಸೈಕಲ್ ಯಾತ್ರೆ! ಬೆಂಗಳೂರು ಟು ಕಾರ್ಗಿಲ್ ಪಯಣ ಹೀಗಿತ್ತು ನೋಡಿ

    ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂರವಾಣಿ ಸಂಖ್ಯೆ: 08352-276743 ಕಲ್ಯಾಣಮಿತ್ರ ಸಹಾಯವಾಣಿ 9482300400 ಸಲ್ಲಿಸಬಹುದು. ಮಂಡಳಿ ವಿವೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸುವಿಧಾ ಪೋರ್ಟಲ್ ಮೂಲಕವೇ ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.  ಆಗಸ್ಟ್ ತಿಂಗಳ 20ರೊಳಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು.

    ಇದನ್ನೂ ಓದಿ: Vijayapura: ಕೈಬೀಸಿ ಕರೆಯುವ ಪುಟ್ಟಪುಟ್ಟ ಜಲಪಾತಗಳು! ವೀಡಿಯೋ ನೋಡಿ

    ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    Published by:guruganesh bhat
    First published: