Vijayapura: ಮಡಿಕೆ ಒಡೆಯೋದ್ರಲ್ಲಿರೋ ಮಜಾ ಇನ್ಯಾವುದ್ರಲ್ಲೂ ಇಲ್ಲ!

ಮಡಿಕೆ ಒಡೆಯುವುದರಲ್ಲಿರುವ ಮಜಾ ಇನ್ನು ಯಾವುದರಲ್ಲಿದೆ ಹೇಳಿ? ಅದರಲ್ಲೂ ಮೊಬೈಲ್ ಗೇಮ್ ಗಳ ನಡುವೆಯೂ ಇಂದಿಗೂ ಮಡಿಕೆ ಒಡೆಯುವ ಸ್ಪರ್ಧೆ ಇದೆ ಅಂದ್ರೆ ಅದೆಲ್ಲವನ್ನೂ ಬದಿಗಿಟ್ಟು ಬರೋದು ಗ್ಯಾರಂಟಿ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ವಿಜಯಪುರ: ಕಣ್ಣಿಗೆ ಬಟ್ಟೆ ಕಟ್ಕೊಂಡು ನೇತಾಡ್ತಿರೋ ಮಡಿಕೆ ಒಡಿಯೋಕೆ ಯುವಕರಿಂದ ಒಂದು ಕಡೆ ಸರ್ಕಸ್, ಇನ್ನೊಂದು ಕಡೆ ನಾಮುಂದು ತಾಮುಂದು ಎಂದು ಒಬ್ರಗಿಂತ ಒಬ್ರು ಜೋರಾಗಿ ಹಗ್ಗ ಎಳಿತಿರೋ‌ ಉತ್ಸಾಹಿಗಳು. ನಿನಗಿಂತ ನನ್ನ ರಂಗೋಲಿನೇ ಚಂದ ಅಂತಿರೋ ಯುವತಿಯರು! ಹೀಗೆ ಅಲ್ಲೊಂಥರಾ ಜಾತ್ರೆಯೇ (Festival) ಸೇರಿತ್ತು. ಗಣೇಶನ ಹಬ್ಬದ ಹೆಸರಲ್ಲಿ ಊರೋರೆಲ್ಲಾ ಕೂಡಿ ಖುಷಿಯಿಂದ ಜಾನಪದ ಉತ್ಸವ ಏರ್ಪಡಿಸಿದ್ರು. ಇದು ಮತ್ತೆಲ್ಲೂ ಅಲ್ಲ, ನಮ್ಮ ವಿಜಯಪುರ ಜಿಲ್ಲೆಯ (Vijayapura) ನಿಡಗುಂದಿಯ ಕಮದಾಳ ಪುನರ್ವಸತಿ ಕೇಂದ್ರದಲ್ಲಿ.

    ಮಡಿಕೆ ಒಡೆಯಲು ಆಸಕ್ತಿ
    ಅದ್ರಲ್ಲೂ ಹೆಚ್ಚಾಗಿ ಮಡಿಕೆ ಒಡೆಯೋ ಸ್ಪರ್ಧೆಲಿ ಭಾಗವಹಿಸೋಕೆ ಭಾರೀ ಉತ್ಸಾಹ ಎದ್ದು ಕಾಣ್ತಿತ್ತು. ಸಂಜೆಯಾಗ್ತಿದ್ದಂತೆ ಒಬ್ಬೊಬ್ಬರಾಗಿ ತಮ್ಮ ತಮ್ಮ‌ ಹೆಸರನ್ನ ನೋಂದಾಯಿಸಿ ಆಟಕ್ಕೆ ಇಳಿದೇಬಿಟ್ರು.

    ಇದನ್ನೂ ಓದಿ: Real Bahubali Vijayapura: ಈ ಬಾಲಕ ರಿಯಲ್ ಬಾಹುಬಲಿ! ತಾಕತ್ತಿಗೆ ಬೆಚ್ಚಿಬೀಳುವಿರಿ!

    ಈ ಆಟಕ್ಕೆ ಮೂರು ನಿಮಿಷಗಳ ಸಮಯ ನಿಗದಿಯಾಗಿತ್ತು. ಆಟ ಆರಂಭಕ್ಕೂ ಮುನ್ನ ಸ್ಪರ್ಧೆಗಿಳಿದ ವ್ಯಕ್ತಿಯ ಕಣ್ಣುಗಳಿಗೆ ತೆಳು ಬಟ್ಟೆ ಕಟ್ಟಿ ಮೂರು ಸುತ್ತು ತಿರುಗಿಸಿ ಆ ವ್ಯಕ್ತಿಯ ಕೈಗೆ ಒಂದು ಕಟ್ಟೆಗೆ ಕೊಟ್ಟಿದ್ರು.

    ಮಡಿಕೆ ಒಡೆದವ್ರಿಗೆ ಸಿಕ್ತು ಇನಾಮು
    ಸಮಯ ಆರಂಭವಾದ ಕೂಡಲೇ ಸ್ಪರ್ಧಾಳುಗಳು ಕೈ ಎತ್ತರಕ್ಕೆ ಕಟ್ಟಿರುವ ಮಡಿಕೆಯನ್ನ ಒಡೆಯಲು ಕಸರತ್ತು ನಡೆಸ್ತಿದ್ದರು. ಮೂರು ನಿಮಿಷದ ಅವಧಿಯಲ್ಲಿ ಯಾರು ಮಡಿಕೆಯನ್ನ ಒಡೀತಾರೋ ಅವರಿಗೆ 1500 ರೂಪಾಯಿ ಸಂಭಾವನೆನೂ ಕೊಡಲಾಯ್ತು.

    ಇದನ್ನೂ ಓದಿ:Raichur: ಮೊಹರಂಗೆ ಧರ್ಮ ಬೇಧವಿಲ್ಲ! ಬೇಕಾದ್ರೆ ಇಲ್ಲಿ ನೋಡಿ

    ಹಳ್ಳಿ ಆಟಗಳ ಮಜಾ
    ಆಟ ಅಂದ್ರೆ ಪಬ್ಜಿ, ಛೋಟಾ ಭೀಮ್‌, ಕ್ಯಾಂಡಿ ಕ್ರಶ್‌ ಅಂತಲೇ ಇರೋ‌ ಮನೋಭಾವ ದೂರ ಮಾಡ್ಬೇಕು. ಚಿಕ್ಕವರಿಂದ ಹಿಡಿದು ಮುದಿ ಮುದಿ ಅಜ್ಜಂದಿರವರೆಗೂ ಇರೋ ಈ ಆನ್ ಲೈನ್ (Online) ಗೇಮ್‌ ಹುಚ್ಚು ಬಿಡಿಸಬೇಕು. ಮತ್ತೆ ಹಗ್ಗಜಗ್ಗಾಟ, ಚೌಕಾಬಾರ, ಪಗಡೆ, ಹಾವು-ಏಣಿಯಂಥ ಆಟಗಳನ್ನು ಹವಾ ಎಬ್ಬಿಸ್ಬೇಕು ಅಂತ ಗಣೇಶನ ಹಬ್ಬಕ್ಕೆ ಈ ಜಾನಪದ ಆಟಗಳ ಸ್ಪರ್ಧೆ ಸಖತ್ ಮಜಾ ಕೊಟ್ಟಿದ್ದಂತೂ ಹೌದು.

    ವರದಿ: ಪ್ರಶಾಂತ್ ಹೂಗಾರ, ವಿಜಯಪುರ
    Published by:ಗುರುಗಣೇಶ ಡಬ್ಗುಳಿ
    First published: