• Home
 • »
 • News
 • »
 • vijayapura
 • »
 • Vijayapura Gandhi: ವಿಜಯಪುರದಲ್ಲಿ ಗಾಂಧಿ! ಬಾಪು ಇಲ್ಲೇ ಇದ್ದಾರೆ ನೋಡಿ

Vijayapura Gandhi: ವಿಜಯಪುರದಲ್ಲಿ ಗಾಂಧಿ! ಬಾಪು ಇಲ್ಲೇ ಇದ್ದಾರೆ ನೋಡಿ

ಗಾಂಧೀಜಿ ಇಲ್ಲಿದ್ದಾರೆ ನೋಡಿ

"ಗಾಂಧೀಜಿ ಇಲ್ಲಿದ್ದಾರೆ ನೋಡಿ"

ಶಾಲಾ ದಾಖಲಾತಿಯಿಂದ ಹಿಡಿದು ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಸೇರಿ ಎಲ್ಲಾ ಕಡೆನೂ ನೇತಾಜಿ ಗಾಂಧಿನೇ ಆಗಿದ್ದಾರೆ ಇವರು.

 • Share this:

  ವಿಜಯಪುರ: ಅರೇ! ಇಲ್ನೋಡಿ‌ ಮಹಾತ್ಮಾ ಗಾಂಧೀಜಿ! ಈಗ್ ಹೇಗೆ ಪ್ರತ್ಯಕ್ಷವಾದ್ರು ಅಂತೀರಾ? ಎಳೆಯ ಮಕ್ಕಳಿಗೆ ಗಾಂಧಿ ಪಾಠ ಹೇಳಿಕೊಡುತ್ತಿರುವ ಇವರು ಕೂಡಾ ಪಕ್ಕಾ ಗಾಂಧಿ (Mahatma Gandhi)  ಅನುಯಾಯಿ. ಕೇವಲ ವಿಚಾರಧಾರೆ ಮಾತ್ರವಲ್ಲ, ಇವರ ಇಡೀ ಜೀವನವೇ ಗಾಂಧಿಮಯ. ಬಾಪೂಜಿಯನ್ನೇ ಧ್ಯಾನಿಸಿ ಧ್ಯಾನಿಸಿ ಇವರೇ ಸ್ವತಃ ಗಾಂಧಿಯಾಗಿಬಿಟ್ಟಿದ್ದಾರೆ! ಮಕ್ಕಳಿಗೆ ಗಾಂಧಿ ಪರಿಚಯ ಮಾಡುತ್ತಾ ತನ್ನೊಳಗೂ ಓರ್ವ ಗಾಂಧಿಯನ್ನ (Gandhi Jayanti 2022) ಪೋಷಿಸುತ್ತಿರುವ ಇವರು ಹೆಸರು ಕೂಡಾ ಅಷ್ಟೇ ವಿಶೇಷ. ಅದ್ಕೇ ಹೇಳಿದ್ದು ನೋಡಿ ಇವರು ತಮ್ಮನ್ನೇ ತಾವು ಗಾಂಧಿಗೆ ಅರ್ಪಿಸಿಕೊಂಡವರು. ಅಂದಹಾಗೆ ಇವರೇ ವಿಜಯಪುರದ ನೇತಾಜಿ ಗಾಂಧಿ.


  ಶಾಲಾ ದಾಖಲಾತಿಯಿಂದ ಹಿಡಿದು ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಸೇರಿ ಎಲ್ಲಾ ಕಡೆನೂ ನೇತಾಜಿ ಗಾಂಧಿನೇ ಆಗಿದ್ದಾರೆ ಇವರು.


  ಇವರ ಮಕ್ಕಳ ಹೆಸರು ಕೇಳೀ!
  ಗಾಂಧಿ ಜೊತೆಗೆ ಸುಭಾಷ್ ಚಂದ್ರ ಬೋಸ್, ಗೋಖಲೆ, ರವೀಂದ್ರನಾಥ ಟಾಗೋರ್ ಅವರನ್ನೂ ಇಷ್ಟಪಡುವ ಇವರು ತಮ್ಮ ಮಕ್ಕಳಿಗೂ ಅವರದ್ದೇ ಹೆಸರಿಟ್ಟಿದಾರೆ. ಇಬ್ಬರು ಮಕ್ಕಳಲ್ಲಿ ಓರ್ವನಿಗೆ 'ಗಾಂಧಿ ತಿಲಕ್ ಟಾಗೋರ್' ಅಂತಾನೂ, ಇನ್ನೊಬ್ಬ ಮಗನಿಗೆ 'ಗಾಂಧಿ ಗೋಖಲೆ ಟಾಗೋರ್' ಎಂದು ನಾಮಕರಣ ಮಾಡಿದ್ದಾರೆ. ಅಷ್ಟರಮಟ್ಟಿಗೆ ಇವರ ಹೆಸರು, ಉಸಿರಲ್ಲಿಯೂ ಮಹಾತ್ಮಾ ಗಾಂಧಿ ಅಚ್ಚಾಗಿದ್ದಾರೆ.


  ಇದನ್ನೂ ಓದಿ: Success Story: ಕಾಲೇಜ್​ಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ! ಇಡೀ ಊರಿಗೇ ಬಂತು ಭಾಗ್ಯ!


  ಗಾಂಧಿ ಫಿಲಾಸಫಿಕಲ್ ಯುಥ್ ಫೋರಂ ಸ್ಥಾಪನೆ
  ಗಾಂಧಿ ವಿಚಾರಧಾರೆಯನ್ನ ಜಗದಗಲ ಪಸರಿಸಬೇಕು ಅನ್ನೋ ಆಸೆ ಇವರದ್ದು. ಹಾಗಾಗಿ ಶಾಲಾ, ಕಾಲೇಜುಗಳಿಗೆ ತೆರಳಿ ಅವರ ವಿಚಾರಧಾರೆಗಳ ಬಗ್ಗೆ ಉಪನ್ಯಾಸ ನೀಡುತ್ತಾರೆ.‌ ಯಂಗ್ ಇಂಡಿಯಾ' ಹೆಸರಿನ ಕನ್ನಡ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದ್ದಾರೆ.‌ ಬೇನಾಳಗ್ರಾಮದಲ್ಲಿ ' ಗಾಂಧಿ ಫಿಲಾಸಫಿಕಲ್ ಯುಥ್ ಫೋರಂ' ಎಂಬ ಸಂಘವನ್ನೂ ಸ್ಥಾಪಿಸಿದ್ದಾರೆ.


  ಇದನ್ನೂ ಓದಿ: Drone In Agriculture: ಕೃಷಿಯಲ್ಲಿ ಡ್ರೋನ್ ಬಳಕೆ ಹೇಗೆ? ಈ ರೈತರನ್ನು ನೋಡಿ!


  ಒಟ್ಟಿನಲ್ಲಿ ಗಾಂಧಿ, ಬೋಸ್, ಗೋಖಲೆ ಇವರೆಲ್ಲರನ್ನೂ ತಮ್ಮ ಮನೆಯಲ್ಲಿಯೇ ಕಾಣುವ ಜೊತೆಗೆ, ಅವರದ್ದೇ ಆಶಯಗಳನ್ನು ಮೈಗೂಡಿಸಿಕೊಂಡ ನೇತಾಜಿ ಗಾಂಧಿ ಜೀವನಶೈಲಿ ನಿಜಕ್ಕೂ ವಿಶೇಷವೇ ಸರಿ.


  ವರದಿ: ಪ್ರಶಾಂತ ಹೂಗಾರ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published: