ವಿಜಯಪುರ: ವಿದ್ಯಾರ್ಥಿಗಳೇ ಗಮನಿಸಿ, ವಿಜಯಪುರ ಜಿಲ್ಲೆಯಲ್ಲಿ (Vijayapura News) ಸಂಸ್ಕೃತಿ ಶಿಬಿರ ಎಂಬ ವಿಶೇಷ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಬಸವ ಪಾಟೀಲ್ ನೇತೃತ್ವದ ಆರೂರ ಗೆಳೆಯರ ಬಳಗದಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಬೇಸಿಗೆ ರಜೆಯಲ್ಲಿ (Summer Holidays) ಉಚಿತ ಶಿಬಿರವನ್ನ (Summer Holidays For Students) ಆಯೋಜಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಲುವಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.
ಈ ಸಂಸ್ಕಾರ ಶಿಬಿರದಲ್ಲಿ 8 ಮತ್ತು 9 ಹಾಗೂ 10ನೇ ತರಗತಿಯ ಶಾಲಾ ಮಕ್ಕಳಿಗೆ ಆಯಾ ಕ್ಷೇತ್ರದಲ್ಲಿ ಪರಿಣಿತರಿಂದ ವಿವಿಧ ವಿಷಯಗಳನ್ನು ಕಲಿಸಲಾಗುತ್ತದೆ. ಯೋಗ, ಧ್ಯಾನ, ಜೀವನ ಕೌಶಲ್ಯ, ಶಿಸ್ತಿನ ಮಹತ್ವ, ವ್ಯಕ್ತಿತ್ವ ವಿಕಸನ, ಆರೋಗ್ಯ ತಪಾಸಣೆ, ಶಾಲಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಬೆಳವಣಿಗೆಗೆ ಪೂರಕವಾಗುವ ಕೌಶಲ್ಯವನ್ನ ಮಕ್ಕಳಿಗೆ ಈ ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ.
ಇದನ್ನೂ ಓದಿ: Free Admission: ಸೈನಿಕ ಶಾಲೆಯಲ್ಲಿ ಫ್ರೀ ಅಡ್ಮಿಶನ್, ಇಲ್ಲಿದೆ ನೋಡಿ ವಿವರ
ನೋಂದಣಿ ಹೇಗೆ?
ಈ ಶಿಬಿರವು ಸಂಪೂರ್ಣ ಉಚಿತವಾಗಿದೆ. ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗಿಯಾಗಬೇಕಾದರೆ ಕೊಂಡಗೂಳಿ ಗ್ರಾಮದ ಗೆಳೆಯರ ಬಳಗಕ್ಕೆ ಭೇಟಿ ನೀಡಿ ಹೆಸರು ನೊಂದಾಯಿಸಬೇಕಿದೆ.
ಶಿಬಿರದ ಉದ್ದೇಶ
ಕೋವಿಡ್ ಮತ್ತು ಲಾಕ್ಡೌನ್ ನಂತರ ಸಮರ್ಪಕ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಹೀಗಾಗಿ ಮತ್ತೆ ಮಕ್ಕಳನ್ನ ಸರಿದಾರಿಗೆ ತರುವುದರೊಂದಿಗೆ ಮಕ್ಕಳ ಪ್ರತಿಭೆ ಅರಳಿಸುವ ಉದ್ದೇಶದಿಂದ ಈ ಶಿಬಿರವನ್ನ ನಡೆಸಲಾಗುತ್ತಿದೆ.
ಇದನ್ನೂ ಓದಿ: Jolada Ambali Recipe: ಬೇಸಿಗೆಗೆ ಬೆಸ್ಟ್ ಈ ಜೋಳದ ಅಂಬಲಿ, ರೆಸಿಪಿ ಇಲ್ಲಿದೆ ನೋಡಿ
ಹೆಚ್ಚಿನ ಮಾಹಿತಿಗಾಗಿ
ಆಸಕ್ತ ಅಭ್ಯರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲು ಸದಾಶಿವಯ್ಯ ಮಠ 9036394061, ಗೌರಿಶಂಕರ ಪುರಾಣಿಕಮಠ 9481574387 ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಹೆಸರು ನೋಂದಾಯಿಸಬಹುದಾಗಿದೆ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ