• Home
  • »
  • News
  • »
  • vijayapura
  • »
  • Skill Development Training: ಈ ಟ್ರೇನಿಂಗ್ ಪಡೆದರೆ ಕೆಲಸ ಪಕ್ಕಾ! ಈಗಲೇ ಅಪ್ಲೈ ಮಾಡಿ

Skill Development Training: ಈ ಟ್ರೇನಿಂಗ್ ಪಡೆದರೆ ಕೆಲಸ ಪಕ್ಕಾ! ಈಗಲೇ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯಾವೆಲ್ಲ ಕೋರ್ಸ್​ಗಳನ್ನು ಉಚಿತವಾಗಿ ಪಡೆಯಬಹುದು? ಎಲ್ಲ ವಿವರ ಇಲ್ಲಿದೆ ನೋಡಿ.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ  ಜಿಲ್ಲೆಯ (Vijayapura News) ಯುವಕ ಯುವತಿಯರಿಗೆ ಒಂದು ಒಳ್ಳೆಯ ಸುದ್ದಿ ಇಲ್ಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ವಿವಿಧ ಕೋರ್ಸ್​ಗಳ ತರಬೇತಿ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್​ಸಿ ಉತ್ತೀರ್ಣರಾದ 18 ರಿಂದ 40 ವರ್ಷದ ಒಳಗಿನ ಯುವಕ, ಯುವತಿಯರು ಈ ಕೆಳಗಿನ ಹಲವಾರು ತರಬೇತಿಗಳನ್ನು ಉಚಿತ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. ಯಾವೆಲ್ಲ ಕೋರ್ಸ್​ಗಳನ್ನು (Free Training) ಉಚಿತವಾಗಿ ಪಡೆಯಬಹುದು? ಎಲ್ಲ ವಿವರ ಇಲ್ಲಿದೆ ನೋಡಿ.


    ಈ ಎಲ್ಲ ತರಬೇತಿಗಳೂ ಉಚಿತ!
    ಸೌರಶಕ್ತಿ ಪ್ಯಾನೆಲ್ ಅಳವಡಿಕೆ ಮತ್ತು ರಿಪೇರಿ ತರಬೇತಿ, ಜೆಸಿಬಿ-ಟ್ರಾಕ್ಟರ್ ರೋಡ್ ರೋಲರ್- ಅರ್ಥ್ ಮೂವರ್ಸ್ ಚಾಲನಾ ತರಬೇತಿ, ಎ.ಸಿ.ಕಂಪ್ಯೂಟರ್ ಮತ್ತು ಮೊಬೈಲ್ ರಿಪೇರಿ ತರಬೇತಿ, ಪಿಯುಸಿ ಕಾಮರ್ಸ್ ಪಾಸಾದ 21 ರಿಂದ 40 ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ಅಕೌಂಟ್ ಆಂಡ್ ಟ್ಯಾಲಿ ತರಬೇತಿ, ಬಿ.ಇ ಪದವಿ ಪಡೆದು ಪಾಸಾದ 21 ರಿಂದ 40 ವರ್ಷದ ವಯಸ್ಸಿನ ಅಭ್ಯರ್ಥಿಗಳಿಗೆ ಕ್ಯಾಡ್-ಕ್ಯಾಡ್ ಜಾವಾ ಪೈಥಾನ್ ತರಬೇತಿ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪಡೆದ ಅಭ್ಯರ್ಥಿಗಳಿಗೆ ವೆಬ್ ಡಿಸೈನಿಂಗ್, 2ಡಿ ಅನಿಮೇಶನ್ ತರಬೇತಿಗೆ ಹಾಗೂ ಡಿಪ್ಲೋಮಾ ಪತ್ರಿಕೋದ್ಯಮದಲ್ಲಿ ಪದವಿ ಪಡೆದ 21 ರಿಂದ 40 ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ಟೆಲಿ ಜರ್ನಲಿಸಂ ಹಾಗೂ ವೃತ್ತಿ ಕೌಶಲ್ಯ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.


    ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಇದರ ಉಪಯೋಗವನ್ನ ಪಡೆದುಕೊಳ್ಳಬಹುದಾಗಿದೆ.


    ಹೇಗೆ ಅರ್ಜಿ ಸಲ್ಲಿಸುವುದು? ಇಲ್ಲಿದೆ ನೋಡಿ ವಿವರ
    ತರಬೇತಿ ಪಡೆಯಲಿಚ್ಚಿಸುವ ಅರ್ಹ ಅಭ್ಯರ್ಥಿಗಳು ನವೆಂಬರ್ 30 2022 ರ  ಒಳಗಾಗಿ  ಅಗತ್ಯ ಸೂಕ್ತ ದಾಖಲೆಯೊಂದಿದೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸೇವಾ ಸಿಂಧು ವೆಬ್​ಸೈಟ್ ಅಥವಾ ಗ್ರಾಮ ಒನ್, ಕರ್ನಾಟಕ ಒನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಂಬೇಡ್ಕರ್ ಅಭಿವೃದ್ದಿ ನಿಗಮದ ವಿಜಯಪುರ ಜಿಲ್ಲಾ ವ್ಯವಸ್ಥಾಪಕರು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: