ವಿಜಯಪುರ: ಬಿಎಲ್ಡಿಇ ಡೀಮ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ವಿಜಯಪುರ ಜಿಲ್ಲೆಯ (Vijayapura News) ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಮತ್ತು ಕೊಲ್ಹಾರ ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣೆ (Free Health Checkup Camp) ಮತ್ತು ಚಿಕಿತ್ಸಾ ಬೃಹತ್ ಶಿಬಿರ ಆಯೋಜಿಸಲಾಗಿದೆ.
ಈ ಆರೋಗ್ಯ ತಪಾಸಣಾ ಉಚಿತ ಶಿಬಿರವು ಬಬಲೇಶ್ವರ ತಾಲೂಕಿನ ನಿಡೋಣಿ ಬಸ್ ನಿಲ್ದಾಣ ಬಳಿ ಇರುವ ವಿರಕ್ತಮಠದ ಆವರಣದಲ್ಲಿ ನಡೆಯಲಿದೆ. ಈ ಶಿಬಿರವು ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆಗೆ ಶಿಬಿರ ಮುಕ್ತಾಯವಾಗಲಿದೆ. ಕೊಲ್ಹಾರ ಪಟ್ಟಣದ ಶ್ರೀ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ವೃತ್ತದ ಬಳಿ ಇರುವ ಎಸ್. ಕೆ. ಬೆಳ್ಳುಬ್ಬಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜು ಆವರಣ ಮೈದಾನದಲ್ಲಿ ಜನವರಿ 16 ರಂದು ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಶಿಬಿರ ನಡೆಯಲಿದೆ.
ಇದನ್ನೂ ಓದಿ: Bagalkot: ತೆರಬಂಡಿ ಸ್ಪರ್ಧೆಯಲ್ಲಿ ಗೆದ್ದರೆ ಕಾರ್, ಬೈಕ್ ಬಹುಮಾನ!
ಶಿಬಿರದಲ್ಲಿ ಯಾವ ಚಿಕಿತ್ಸೆ ಲಭ್ಯ?
ಹೌದು, ಈ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ, ಎಲುವು ಮತ್ತು ಕೀಲು, ಕಿವಿ, ಮೂಗು ಹಾಗೂ ಗಂಟಲು, ಹೆರಿಗೆ ಮತ್ತು ಪ್ರಸೂತಿ, ಚಿಕ್ಕಮಕ್ಕಳ ಆರೋಗ್ಯ, ಚರ್ಮ, ನೇತ್ರ, ಹೃದಯ, ನರರೋಗ ಹಾಗೂ ದಂತ ಚಿಕಿತ್ಸಾ ವಿಭಾಗಗಳ ತಜ್ಞವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Vijayapura: ಮಣ್ಣು ಉಳಿಸೋಕೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಕಾಲ್ನಡಿಗೆ ಹೊರಟ ಯುವಕ!
ನಿಡೋಣಿ ಮತ್ತು ಕೊಲ್ಹಾರ ಜನರಿಗೆ ಅನುಕೂಲ
ಈ ಶಿಬಿರ ಸಂಪೂರ್ಣವಾಗಿ ಉಚಿತವಾಗಿದೆ. ಸಾರ್ವಜನಿಕರು ಭಾಗಿಯಾಗಿ ನುರಿತ ತಜ್ಞವೈದ್ಯರ ಸಲಹೆ, ಸೂಚನೆ ಪಡೆಯುವುದರೊಂದಿಗೆ ಸೂಕ್ತ ಚಿಕಿತ್ಸೆಯನ್ನ ಪಡೆದುಕೊಳ್ಳಬಹುದಾಗಿದೆ.
ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕಡ್ಡಾಯ
ಶಿಬಿರದಲ್ಲಿ ಪಾಲ್ಗೊಳ್ಳುವವರು ಬಿಪಿಎಲ್ ಮತ್ತು ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ 95916 82224 ಅಥವಾ 89511 78777 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ