ವಿಜಯಪುರ: ನೀವೇನಾದರೂ ಮಾಜಿ ಯೋಧ, ಹುತಾತ್ಮ ಯೋಧರ ಮಕ್ಕಳೇ? ಮಿಲಿಟರಿ ಶಾಲೆಯಲ್ಲಿ (Military School) ಕಲಿಯಬೇಕೆನ್ನುವ ಗುರಿಯನ್ನು ಇಟ್ಟುಕೊಂಡಿದ್ದೀರ? ಹಾಗಿದ್ರೆ ವಿಜಯಪುರದ ಮಿಲಿಟರಿ ಶಾಲೆಯಲ್ಲಿ ಉಚಿತ ಪ್ರವೇಶಕ್ಕಾಗಿ (Free Admission) ಈ ಕೂಡಲೇ ಅರ್ಜಿ ಸಲ್ಲಿಸಿ. ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಹೇಗೆ ಅರ್ಜಿ ಸಲ್ಲಿಸಬಹುದು? ಈ ಎಲ್ಲ ಮಾಹಿತಿ ಇಲ್ಲಿದೆ ನೋಡಿ.
ಶಾಲೆಯ ಹೆಸರು | ಮಿಲಿಟರಿ ಸ್ಕೂಲ್ ವಿಜಯಪುರ |
ಯಾವ ತರಗತಿಗಳಿಗೆ ಅರ್ಜಿ ಆಹ್ವಾನ? | 6ರಿಂದ 10ನೇ ತರಗತಿ |
ಅರ್ಜಿ ಸಲ್ಲಿಕೆ ಹೇಗೆ? | ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆ, ವಿಜಯಪುರ ಇಲ್ಲಿ ಅರ್ಜಿ ಸಿಗಲಿದೆ |
ಕೊನೆಯ ದಿನಾಂಕ | ಮೇ 25 |
ಹೆಚ್ಚಿನ ಮಾಹಿತಿಗಾಗಿ | 08352-250913 ಅಥವಾ ಮೊಬೈಲ್ ಸಂಖ್ಯೆ 7020473849 |
ಇದನ್ನೂ ಓದಿ: Business Idea: ವೀಳ್ಯದೆಲೆ ಬೆಳೆದು ವರ್ಷಕ್ಕೆ 15 ಲಕ್ಷ ಸಂಪಾದನೆ! ವಿಜಯಪುರದ ಈ ರೈತನ ಸಕ್ಸಸ್ ಕಥೆ ಕೇಳಿ
ಅರ್ಜಿ ಸಲ್ಲಿಕೆ ಹೇಗೆ?
ವಿಜಯಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಮಾಜಿ ಸೈನಿಕರ ಮಕ್ಕಳು ಪ್ರವೇಶ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆ, ವಿಜಯಪುರ ಕಚೇರಿಯಿಂದ ಪಡೆದು, ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ
ಅರ್ಹ ಅಭ್ಯರ್ಥಿಗಳು ಪಡೆದ ಅರ್ಜಿಯನ್ನು ಸೂಕ್ತ ದಾಖಲಾತಿಯೊಂದಿಗೆ ಮೇ 25ರ ಒಳಗಾಗಿ ಸಲ್ಲಿಸಬೇಕು.
ಇದನ್ನೂ ಓದಿ: Vijayapura: ಮನೆ ಮನೆಗೆ ಭೇಟಿ ಕೊಡೋ ದೇವರು, ದುಷ್ಟಶಕ್ತಿಯಿದ್ರೆ ಆಗುತ್ತೆ ಹಾಜರ್!
ಹೆಚ್ಚಿನ ಮಾಹಿತಿಗಾಗಿ
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08352-250913, ಮೊಬೈಲ್ ಸಂಖ್ಯೆ 7020473849 ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ