• Home
 • »
 • News
 • »
 • vijayapura
 • »
 • Vijayapura: ಬಿರಿಯಾನಿ, ಸಮೋಸಾ ತಯಾರಿಸಿದ ವಿದ್ಯಾರ್ಥಿಗಳು! ಇದು ಮಕ್ಕಳ ಆಹಾರ ಮೇಳದ ಸ್ಪೆಷಲ್

Vijayapura: ಬಿರಿಯಾನಿ, ಸಮೋಸಾ ತಯಾರಿಸಿದ ವಿದ್ಯಾರ್ಥಿಗಳು! ಇದು ಮಕ್ಕಳ ಆಹಾರ ಮೇಳದ ಸ್ಪೆಷಲ್

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸುಮಾರು 80 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರತಿ ನಾಲ್ವರು ವಿದ್ಯಾರ್ಥಿಗಳು ವ್ಯಾಪಾರ ವಹಿವಾಟು ನಡೆಸಿದರು. ಪಕ್ಕಾ ಹೊಟೆಲ್ ಸ್ಟೈಲ್​ನಲ್ಲಿ ಹಾಗೂ ಬೀದಿ ಬದಿಯ ಚಾಟ್ಸ್ ಅಂಗಡಿಗಳಲ್ಲಿ ಅದ್ಯಾವ ರೀತಿ ವ್ಯವಹರಿಸ್ತಾರೋ ಅದೇ ರೀತಿ ವ್ಯವಹರಿಸಿದರು.

 • News18 Kannada
 • 5-MIN READ
 • Last Updated :
 • Bijapur, India
 • Share this:

  ವಿಜಯನಗರ: ಹತ್ತ್ ರೂಪಾಯಿ.. ಹತ್ತ್ ರೂಪಾಯಿ.. ಪ್ಲೇಟಿಗೆ ಹತ್ತ್ ರೂಪಾಯಿ. ಇಲ್ಲಿ ಬರ್ರೀ. ಹತ್ತ್ ರೂಪಾಯಿ. ಹೀಗೆ ಪುಟಾಣಿ ವ್ಯಾಪಾರಿಗಳ ಕೂಗಿಗೆ ಗ್ರಾಹಕರೂ ಓಡೋಡಿ ಬರ್ತಿದ್ರು. ತಮ್ಮಿಷ್ಟದ ತಿಂಡಿ ತಿನಿಸನ್ನ (Variety Of Food) ಹಣ ಕೊಟ್ಟು ಖರೀದಿಸುತ್ತಿದ್ರು. ಮಕ್ಕಳ ಮಾರ್ಕೆಟ್​ನಲ್ಲಿ (Student's Market) ಹಿರಿಯರೆಲ್ಲ ಗ್ರಾಹಕರಾದ್ರೆ, ಮಕ್ಕಳೆಲ್ಲರೂ ವ್ಯಾಪಾರಿಗಳಾಗಿದ್ರು. ಅಷ್ಟಕ್ಕೂ ಈ ಮಕ್ಕಳ ಸಂತೆ ಕಂಡು ಬಂದಿದ್ದು ಎಲ್ಲಿ ಅಂತೀರಾ? ಹೇಳ್ತೀವಿ ನೋಡಿ.


  ಸಮೋಸಾ, ಬಜ್ಜಿ, ವೆಜ್ ಬಿರಿಯಾನಿ, ಮಸಾಲಾ ರೈಸ್, ಚುರುಮುರಿ, ಅವಲಕ್ಕಿ ಒಗ್ಗರಣೆ, ಕ್ಯಾರೆಟ್ ಹಲ್ವಾ, ಚಕ್ಕುಲಿ, ರವೆ ಉಂಡೆ ಹೀಗೆ ಹತ್ತಾರು ವೆರೈಟಿಯ ತಿಂಡಿ ತಿನಿಸುಗಳು ಬಾಯಿ ಚಪ್ಪರಿಸುವಂತೆ ಮಾಡುವ ಈ ದೃಶ್ಯ ಕಂಡು ಬಂದಿದ್ದು ವಿಜಯಪುರ ನಗರದ ಶ್ರೀ ರವೀಂದ್ರನಾಥ ಠಾಗೋರ್ ಶಾಲೆಯ ಫುಡ್ ಫೆಸ್ಟ್​ನಲ್ಲಿ. ವಿದ್ಯಾರ್ಥಿಗಳೇ ಬಾಣಸಿಗರಾಗಿದ್ದ  ಈ ಸಂತೆಯಲ್ಲಿ ಭರ್ಜರಿ ವ್ಯಾಪಾರವೂ ನಡೆಯಿತು.


  ಗ್ರಾಹಕರಿಂದ ತುಂಬಿ ತುಳುಕಿದ ಸಂತೆ
  ಊರಲ್ಲಿ ನಡೆಯುವ ವಾರದ ಸಂತೆ ಮಾದರಿಯಲ್ಲಿ ಗ್ರಾಹಕರು ತುಂಬಿ ತುಳುಕಿದ್ದರು. ಪುಟ್ಟ ವ್ಯಾಪಾರಿಗಳಿಂದ ತಮ್ಮಿಷ್ಟದ ತಿಂಡಿ, ತಿನಿಸು ಖರೀದಿಸಿ ಗ್ರಾಹಕರು ಖುಷಿಪಟ್ಟರು. ಮಕ್ಕಳ ಪೋಷಕರಂತೂ ತಮ್ಮ ತಮ್ಮ ಮಕ್ಕಳ ಮಳಿಗೆಗೆ ಬೇಕಾದ ಪ್ರೋತ್ಸಾಹ ನೀಡಿದ್ರು.


  ಶಾಲಾ ಆಡಳಿತ ಮಂಡಳಿಯಿಂದ ವಿಶಿಷ್ಟ ಕಾರ್ಯ
  ಮಕ್ಕಳಲ್ಲಿ ವ್ಯಾಪಾರ-ವಹಿವಾಟು, ಲಾಭ ಕುರಿತು ಅರಿವು ಮೂಡಿಸಲು ಶಾಲಾ ಆಡಳಿತ ಮಂಡಳಿಯು ಇಂಥದ್ದೊಂದು ವಿಶಿಷ್ಟ ಕಾರ್ಯಕ್ರಮ ರೂಪಿಸಿತ್ತು. ಅದರಂತೆ ಮಕ್ಕಳು ಪೋಷಕರ ನೆರವಿನಿಂದ ಬಗೆ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಶಾಲಾ ಆವರಣದಲ್ಲಿಯೇ ಮಳಿಗೆ ತೆರೆದು ಮಾರಾಟ ಮಾಡಿದರು.


  ಇದನ್ನೂ ಓದಿ: Narasimha Devaru: ಸಮುದ್ರದ ನಡುವೆ ನರಸಿಂಹ ದೇವರು!


  ಜೊತೆಗೆ ಖರ್ಚುವೆಚ್ಚ ಹಾಗೂ ತಾವು ಗಳಿಸಿದ ಲಾಭಾಂಶ ಕುರಿತು ಶಿಕ್ಷಕರಿಗೆ ವರದಿ ನೀಡಿದರು. ಸುಮಾರು 80 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರತಿ ನಾಲ್ವರು ವಿದ್ಯಾರ್ಥಿಗಳು ವ್ಯಾಪಾರ ವಹಿವಾಟು ನಡೆಸಿದರು. ಪಕ್ಕಾ ಹೊಟೆಲ್ ಸ್ಟೈಲ್​ನಲ್ಲಿ ಹಾಗೂ ಬೀದಿ ಬದಿಯ ಚಾಟ್ಸ್ ಅಂಗಡಿಗಳಲ್ಲಿ ಅದ್ಯಾವ ರೀತಿ ವ್ಯವಹರಿಸ್ತಾರೋ ಅದೇ ರೀತಿ ವ್ಯವಹರಿಸಿದರು.


  ಸಂಜೆ 4 ರಿಂದ 7 ಗಂಟೆಯವರೆಗೆ ಮಾತ್ರ!
  ಸಂಜೆ 4 ಕ್ಕೆ ಆರಂಭಗೊಂಡ ಆಹಾರ ಮೇಳ ಸಾಯಂಕಾಲ 7 ರ ಹೊತ್ತಿಗೆ ಮುಕ್ತಾಯವಾಯಿತು. ಪೋಷಕರು, ಅವರ ಸಂಬಂಧಿಕರು, ಶಿಕ್ಷಕರು ಅಲ್ಲದೇ ಸಾರ್ವಜನಿಕರೂ ಕೂಡ ತಿನಿಸುಗಳನ್ನು ಖರೀದಿಸಿ ಸವಿದರು.


  ಇದನ್ನೂ ಓದಿ: Banashankari Temple: ಇವ್ರೇ ನೋಡಿ ಸಾಲುಮಂಟಪದ ಅನ್ನಪೂರ್ಣೇಶ್ವರಿಯರು!


  ಒಟ್ಟಿನಲ್ಲಿ ಪ್ರತಿದಿನ ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಪೆನ್ನು, ಪುಸ್ತಕ ಅಂತ ಕೂತಿರ್ತಿದ್ದ ಮಕ್ಕಳು, ಮಕ್ಕಳ ಸಂತೆಯಲ್ಲಿ ವೃತ್ತಿಪರ ವ್ಯಾಪಾರಸ್ಥರನ್ನೇ ಮೀರಿಸುವ ರೇಂಜಿಗೆ ವ್ಯಾಪಾರ ಗಿಟ್ಟಿಸಿಕೊಂಡರು. ಈ ಮೂಲಕ ಮಕ್ಕಳಲ್ಲಿರುವ ಕೌಶಲ್ಯವನ್ನು ಒರಗೆ ಹಚ್ಚುವಲ್ಲಿ ಶಾಲಾ ಆಡಳಿತ ಮಂಡಳಿಯೂ ಯಶಸ್ವಿಯಾಯಿತು.


  ವರದಿ: ಪ್ರಶಾಂತ ಹೂಗಾರ್, ವಿಜಯಪುರ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು