• Home
  • »
  • News
  • »
  • vijayapura
  • »
  • Vijayapura: ವಿಜಯಪುರದಲ್ಲಿ ಫಲಪುಷ್ಪ ಪ್ರದರ್ಶನದ ಸೊಬಗು, ಸಿದ್ದೇಶ್ವರ ಶ್ರೀಗಳ ಸಂದೇಶವೇ ಆಕರ್ಷಣೆ

Vijayapura: ವಿಜಯಪುರದಲ್ಲಿ ಫಲಪುಷ್ಪ ಪ್ರದರ್ಶನದ ಸೊಬಗು, ಸಿದ್ದೇಶ್ವರ ಶ್ರೀಗಳ ಸಂದೇಶವೇ ಆಕರ್ಷಣೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

Vijayapura Flowers Show: ಕಲ್ಲಂಗಡಿ ಹಣ್ಣಿನಲ್ಲಿ ಗುರು ಪ್ರಭುಲಿಂಗ ಸ್ವಾಮೀಜಿ ಹಾಗೂ ಸಿದ್ದೇಶ್ವರ ಶ್ರೀಗಳ ಸೈಕಲ್ ಸವಾರಿ, ಧ್ಯಾನ, ಪ್ರವಚನ ನೀಡುತ್ತಿರುವ ದೃಶ್ಯಗಳು ಆಧ್ಯಾತ್ಮಿಕತೆಯ ಸೆಲೆ ಒಳಗೊಂಡಿದ್ದವು.

  • News18 Kannada
  • Last Updated :
  • Bijapur, India
  • Share this:

    ವಿಜಯಪುರ: ಪುಷ್ಪಾಲಂಕಾರದಿಂದ ಕೂಡಿದ ವಿವಿಧ ಕಲಾಕೃತಿಗಳು, ಭಕ್ತಿ ಭಾವ ಹೆಚ್ಚಿಸಿದ ಸಿದ್ದೇಶ್ವರ ಸ್ವಾಮೀಜಿಗಳು, ಕಲ್ಲಂಗಡಿಯಲ್ಲಿ ರಚಿತವಾದ ಶಿವಲಿಂಗ, ನಿಂಬೆ ಹಣ್ಣಿನ ನಂದಿ, ಮನಸ್ಸು ಗೆಲ್ಲೋ ರೋಸ್ ಹಾರ್ಟ್. ಹೌದು, ಹೀಗೆ ಫಲ ಪುಷ್ಪಗಳಿಂದ ಹೊಸ ಲೋಕವೊಂದು ತೆರೆದುಕೊಂಡಿತ್ತು. ಬಗೆ ಬಗೆಯ ಹೂವುಗಳು ಮನಸ್ಸಿಗೆ ಮುದ ನೀಡಿದ್ರೆ, ಅವುಗಳಿಂದ ಸೃಷ್ಟಿಯಾದ ಕಲಾಕೃತಿಗಳು ವ್ಹಾವ್ ಅನ್ನೋ ಉದ್ಘಾರ ತೆಗೆಯುವಂತಿತ್ತು.

    ಯೆಸ್, ಈ ಎಲ್ಲ ದೃಶ್ಯ ಕಂಡು ಬಂದಿದ್ದು ವಿಜಯಪುರ ನಗರದಲ್ಲಿ. ತೋಟಗಾರಿಕೆ ಇಲಾಖೆ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಹಾಗೂ ಎನ್ಎಚ್ ಬಿ ಸಹಯೋಗದಲ್ಲಿ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ನಡೆದ ಫಲ-ಪುಷ್ಪ ಪ್ರದರ್ಶನ ನಗರದ ಜನರನ್ನ ಕೈ ಬೀಸಿ ಕರೆಯಿತು. ಅದರಲ್ಲೂ ಈ ಬಾರಿ ಫಲಪುಷ್ಪ ಪ್ರದರ್ಶನದ ಮೂಲಕ ಶತಮಾನದ ಸಂತ ಸಿದ್ದೇಶರ ಸ್ವಾಮೀಜಿಗೆ ಅರ್ಥಪೂರ್ಣ ನಮನ ಸಲ್ಲಿಸಲಾಯಿತು.


    ಸಿದ್ದೇಶ್ವರ ಸ್ವಾಮೀಜಿಗಳ ಸಂದೇಶ
    ಸಿದ್ದೇಶ್ವರ ಸ್ವಾಮೀಜಿಗಳನ್ನೇ ಪ್ರಧಾನವಾಗಿಟ್ಟುಕೊಂಡು ಅವರ ಜೀವನದ ಪ್ರಮುಖ ಘಟ್ಟಗಳನ್ನು, ಸಂದೇಶಗಳನ್ನ ಬಿತ್ತರಿಸಲಾಯಿತು. ಪ್ರವಾಸಿಗರಂತೂ ಇದನ್ನ ಕಂಡು ಭಾವಪರವಶರಾದರು. ಕೈ ಮುಗಿದು ನಮಸ್ಕರಿಸಿ ಮುಂದೆ ಸಾಗಿದರು.



    ಕಲ್ಲಂಗಡಿ ಹಣ್ಣಿನಲ್ಲಿ ಮಹಾನ್ ನಾಯಕರ ಚಿತ್ರಗಳು
    ಇನ್ನು ಕಲ್ಲಂಗಡಿಯಲ್ಲಿ ರಚಿತವಾದ ಹಲವು ಮಹಾನ್ ನಾಯಕರು ಚಿತ್ರಗಳು ಗಮನ ಸೆಳೆದವು. ಕಲ್ಲಂಗಡಿಯಲ್ಲಿ ತಯಾರಿಸಿದ ಶಿವಲಿಂಗವಂತೂ ಭಾರೀ ಮೆಚ್ಚುಗೆ ಪಡೆಯಿತು. ಸಾವಿರಾರು ನಿಂಬೆ ಹಣ್ಣುಗಳಿಂದ ತಯಾರಿಸಿ ನಂದಿ ವಿಗ್ರಹವೂ ಪ್ರವಾಸಿಗರ ಕಣ್ಮನ ಸೆಳೆಯಿತು. ಇನ್ನು ಗುಲಾಬಿ ಹೂಗಳಿಂದ ರಚಿಸಲಾಗಿದ್ದ ಹೃದಯದ ಆಕೃತಿಯಂತೂ ಆಗಮಿಸಿದವರ ಫೋಟೋ ಸ್ಪಾಟ್ ಆಯಿತು.


    ಸೆಲ್ಫಿಗಳಿಗಂತೂ ಬರವೇ ಇಲ್ಲ!
    ಅಲ್ಲೇ ನಿಂತು ಯುವ ಜೋಡಿಗಳು, ಯುವಕ, ಯುವತಿಯರು ಫೋಟೋ ಕ್ಲಿಕ್ಕಿಸಿಕೊಂಡರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಾರುವ ಹೂಗಳಿಂದ ನಿರ್ಮಾಣವಾದ ಭಾರತ ನಕ್ಷೆ, ಜೋಡೆತ್ತುಗಳ ಜೊತೆ ಎತ್ತಿನ ಬಂಡಿ ಓಡಿಸುತ್ತಿರುವ ರೈತ, ಅಲ್ಲಲ್ಲಿ ಹೂವುಗಳಿಂದ ನಿರ್ಮಿತವಾದ ಮೂರ್ತಿಗಳು ಮೇಳಕ್ಕೆ ಜನರನ್ನು ಕೈಬೀಸಿ ಕರೆಯುವಂತಿತ್ತು.


    ಇದನ್ನೂ ಓದಿ: Vijayapura: ನಾಯಿಗಳಿಗೂ ಬೇಕು ಆಸರೆ, ಚಳಿಯಿಂದ ರಕ್ಷಿಸೋಕೆ ಬೆಡ್​ಶೀಟ್ ರಕ್ಷಣೆ


    ಇನ್ನು ಸಂಪೂರ್ಣವಾಗಿ ಹೂಗಳಿಂದಲೇ ಜ್ಞಾನಯೋಗಾಶ್ರಮದ ಪ್ರಣವ ಮಂಟಪ ನಿರ್ಮಿಸಿದ್ದು ವಿಶೇಷವಾಗಿತ್ತು. ದೇಶ ವಿದೇಶದ ಹೂವುಗಳು ಸೇರಿದಂತೆ ಕೆಂಪು ಮತ್ತು ಬಿಳಿ ಗುಲಾಬಿಯಲ್ಲಿ ಮಂಟಪವನ್ನ ನಿರ್ಮಿಸಲಾಗಿತ್ತು. ಪ್ರಭುಲಿಂಗ ಶಿವಯೋಗಿಗಳ ಮೂರ್ತಿ ನಿರ್ಮಿಸಿ ಹೂವುಗಳಿಂದ ಅಲಂಕೃತಗೊಳಿಸಿದ್ದು, ಸಂತನ ನಡೆ ಗುರುವಿನ ಕಡೆ ಎನ್ನುವ ಸಂದೇಶ ಬಿತ್ತರಿಸಲಾಗಿತ್ತು.ಕಲ್ಲಂಗಡಿ ಹಣ್ಣಿನಲ್ಲಿ ಗುರು ಪ್ರಭುಲಿಂಗ ಸ್ವಾಮೀಜಿ ಹಾಗೂ ಸಿದ್ದೇಶ್ವರ ಶ್ರೀಗಳ ಸೈಕಲ್ ಸವಾರಿ, ಧ್ಯಾನ, ಪ್ರವಚನ ನೀಡುತ್ತಿರುವ ದೃಶ್ಯಗಳು ಆಧ್ಯಾತ್ಮಿಕತೆಯ ಸೆಲೆ ಒಳಗೊಂಡಿದ್ದವು.


    ಇದನ್ನೂ ಓದಿ: Siddheshwar Temple: ವಿಜಯಪುರದ ಸಿದ್ದೇಶ್ವರ ಜಾತ್ರೆಯ ವೈಭವ ಹೀಗಿತ್ತು ನೋಡಿ


    ಇನ್ನು ವಿವಿಧ ತರಕಾರಿ, ಹಣ್ಣು ಹಂಪಲುಗಳನ್ನು ಮಾಹಿತಿ ಜೊತೆಗೆ ಪ್ರದರ್ಶಿಸಲಾಯಿತು. ಒಟ್ಟಿನಲ್ಲಿ ನಗರದ ಮಂದಿ ಫಲ ಪುಷ್ಪ ಪ್ರದರ್ಶನದಲ್ಲಿ ಹತ್ತು ಹಲವು ಮಾಹಿತಿ ತಿಳಿಯುವಂತಾಯಿತು. ಮಾತ್ರವಲ್ಲದೇ ಇತ್ತೀಚೆಗೆ ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿಗಳನ್ನ ಮತ್ತೊಮ್ಮೆ ಕಂಡು ಧನ್ಯರಾಗುವಂತಾಯಿತು.


    ವರದಿ: ಪ್ರಶಾಂತ ಹೂಗಾರ, ವಿಜಯಪುರ

    Published by:ಗುರುಗಣೇಶ ಡಬ್ಗುಳಿ
    First published: