Vijayapura Travel Plan: ಲಕ್ಷ ಲಕ್ಷ ಬೆಲೆಯ ಮೀನುಗಳನ್ನ ನೋಡ್ಬೇಕಿದ್ರೆ ಇಲ್ಲಿಗೆ ಬನ್ನಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಅಕ್ವೇರಿಯಂನ ಲೈಟಿಂಗ್‌, ನೀರೊಳಗೆ ಈಜುತ್ತಾ ಅತ್ತಿಂದಿತ್ತ ಓಡುವ ಈ ಮೀನುಗಳನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಸೋಜಿಗ.

  • Share this:

ವಿಜಯಪುರ: ನೆರೆದವರಿಗೆಲ್ಲ ಕುತೂಹಲವೋ ಕುತೂಹಲ. ಯಾವತ್ತೂ ನೋಡಿರದ ಮೀನುಗಳನ್ನು ಕಂಡು ಖುಷಿಯೋ ಖುಷಿ. ಒಂದೊಂದು ಪುಟ್ಟದಾದ ಮೀನುಗಳಾದ್ರೆ, ಇನ್ನು ಕೆಲವು ದೈತ್ಯ ಆಕಾರದವುಗಳು. ಕೆಲವದ್ದು ಸಾವಿರ ಬೆಲೆಯಾದ್ರೆ, ಇನ್ನು ಕೆಲವು ಮೀನುಗಳದ್ದು ಲಕ್ಷ ರೂಪಾಯಿ ಮೌಲ್ಯ. ಜನರಿಗಂತೂ ಈ ಮೀನುಗಳ ಅಂದ ಚೆಂದ ಕಣ್ಣಿಗೆ ಮುದ ನೀಡಿತು. ಒಂದೊಂದು ಮೀನಿನ ಫೋಟೋ ಕ್ಲಿಕ್ಕಿಸ್ತಾ, ಅದ್ರ ಹೆಸರು, ಮಾಹಿತಿ ತಿಳ್ಕೊಳ್ಳುತ್ತಾ ಎಂಜಾಯ್‌ ಮಾಡಿದ್ರು.


ಯೆಸ್‌, ಇಂತಹದ್ದೊಂದು ಮೀನುಗಳ ಪ್ರದರ್ಶನ ಏರ್ಪಾಡು ಮಾಡಿದ್ದು ವಿಜಯಪುರ ನಗರದ ಮೀನುಗಾರಿಕೆ ಇಲಾಖೆಯ ಆವರಣದಲ್ಲಿ. ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಮೀನು ಸಾಕಾಣಿಕೆ ಬಗ್ಗೆ ಅರಿವು ಮೂಡಿಸುವ ಜೊತೆಗೆ ಪ್ರದರ್ಶನವನ್ನು ಆಯೋಜಿಸಲಾಗಿದೆ. ಅದ್ರಲ್ಲೂ ಬೇಸಿಗೆ ರಜೆಯಿದ್ದು ಗುಮ್ಮಟ ನಗರಿಗೆ ಬಂದ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರು ಮೀನುಗಳ ಪ್ರದರ್ಶನವನ್ನು ಕಂಡು ಖುಷಿಪಟ್ಟರು.


ಇಲ್ಲಿ ವಿಡಿಯೋ ನೋಡಿ


ಇದನ್ನೂ ಓದಿ: Sapota Farmers: ರಸ್ತೆ ಬದಿ ಚಿಕ್ಕು ಮಾರಿ ಸಖತ್ ಆದಾಯ, ಈ ರೈತರ ಸಕ್ಸಸ್ ಸ್ಟೋರಿ ಕೇಳಿ


ದುಬಾರಿ ಬೆಲೆಯ ಮೀನುಗಳು!
ಇನ್ನು ಅತ್ಯಂತ ದುಬಾರಿ ಬೆಲೆಯ, ಅಮೆರಿಕಾ ಅಮೆಜಾನ್‌ ನದಿಯಲ್ಲಿ ಕಾಣಸಿಗುವ ಡೈಮಂಡ್ ಸ್ಟಿಂಗ್ ರೇ, ಎರಡು ಲಕ್ಷದವರೆಗೆ ಬೆಲೆ ಬಾಳುವ ಪ್ಲಾಟಿನಂ ಅಲಿಗೇಟರ್ ಗಾರ್, ಚೀನಾದ ಪ್ಲಾವರ್ ಹಾರ್ನ್, ಎಲಿಫೆಂಟ್ ನೋಸ್ ಪ್ರಪಂಚದ ಅದ್ಭುತ ಮೀನಿನ ಜಗತ್ತನ್ನ ನೋಡುಗರ ಕಣ್ಣ ಮುಂದೆಯಿರಿಸಿತ್ತು.




ಅಷ್ಟೇ ಅಲ್ಲ, ದೇಶಿ ಮೀನುಗಳಾದ ಗೋಲ್ಡ್‌ ಫಿಶ್, ಅರೋವಾ, ತೆತ್ರಾ, ಗೌರಮಿ, ಬಾರ್ಬ, ಸ್ವಾರ್ಡ ಟೈಲ್, ಆ್ಯಂಜಲ್, ರೇನ್ ಬೋ ಫಿಶ್ ಹಾಗೂ ವಿದೇಶಿ ಮೀನುಗಳಾದ ಪ್ಲಾಟಿನಮ್ ಅಲಿಗೇಟರ್, ಅಲಿಗೇಟರ್ ಗಾರ್‌ ಸೇರಿ ನೂರಾರು ಬಗೆಯ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.


ಇದನ್ನೂ ಓದಿ: Business Idea: ವೀಳ್ಯದೆಲೆ ಬೆಳೆದು ವರ್ಷಕ್ಕೆ 15 ಲಕ್ಷ ಸಂಪಾದನೆ! ವಿಜಯಪುರದ ಈ ರೈತನ ಸಕ್ಸಸ್ ಕಥೆ ಕೇಳಿ


ಪ್ರವಾಸಿಗರೇ ಗಮನಿಸಿ
ಇನ್ನು ಕೆಲವು ದಿನಗಳ ಕಾಲ ಪ್ರವಾಸಿಗರಿಗಾಗಿ ಈ ಮೀನುಗಳ ಪ್ರದರ್ಶನ ನಡೆಯಲಿದೆ. ಅಕ್ವೇರಿಯಂನ ಲೈಟಿಂಗ್‌, ನೀರೊಳಗೆ ಈಜುತ್ತಾ ಅತ್ತಿಂದಿತ್ತ ಓಡುವ ಈ ಮೀನುಗಳನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗದು ಸೋಜಿಗ.


ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ

top videos
    First published: