ವಿಜಯಪುರ: ಬರದನಾಡಲ್ಲಿ ಸೊಂಪಾಗಿ ಬೆಳೆದ ಜೋಳ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ ರೈತರು. ಹೌದು, ಜೋಳದ ಕಣಜ (Vijayapura News) ಅಂದಾಗ ನೆನಪಾಗೋದೆ ವಿಜಯಪುರ. ಆದ್ರೆ ಅಂತಹ ನಾಡಲ್ಲೇ ಇತ್ತೀಚೆಗೆ ಜೋಳ ಬೆಳೆ ಕುಸಿತವಾಗಿ ತೊಗರಿ ರಾರಾಜಿಸುತ್ತಿದೆ. ಇತ್ತೀಚೆಗೆ ಮತ್ತೆ ಜೋಳದತ್ತ (Corn Farmers) ಗಮನಹರಿಸಿರೋ ರೈತರು (Corn Farmers) ತೊಗರಿ ಜೊತೆಗೆ ಹೊಸ ತಳಿಯ ಜೋಳವನ್ನ ಬೆಳೆಯುತ್ತಿದ್ದಾರೆ.
ಯೆಸ್, ಕಳೆದ 8-10 ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಜೋಳ ಬೆಳೆಯುವ ಕ್ಷೇತ್ರ ಕಡಿಮೆ ಯಾಗುತ್ತಿದೆ. ಹೀಗಾಗಿ ರೊಟ್ಟಿ ಊಟ ಮಾಡುವವರು ಜೋಳ ಇಲ್ಲದೇ ಬೇರೆ ಜಿಲ್ಲೆಯಿಂದ ಹೆಚ್ಚುವರಿ ಹಣ ತೆತ್ತು ಜೋಳ ಖರೀದಿಸುವ ಸ್ಥಿತಿಯಿದೆ. ಇದಕ್ಕೆ ಮುಖ್ಯ ಕಾರಣ ಇಳಿಕೆಯಾಗ್ತಿರೋ ಇಳುವರಿ.
ಹಿಟ್ನಳ್ಳಿಯ ಕೃಷಿ ಸಂಶೋಧನಾ ಕೇಂದ್ರದ ಸಾಧನೆ
ಹೀಗಾಗಿ ಗುಮ್ಮಟ ನಗರಿಯ ರೈತರು ಜೋಳ ಬಿಟ್ಟು ತೊಗರಿ ಬೆಳೆಗೆ ಮಾರುಹೋಗಿದ್ದರು. ಆದ್ರೆ ಹಿಟ್ನಳ್ಳಿಯ ಕೃಷಿ ಸಂಶೋಧನಾ ಕೇಂದ್ರವು ಎರಡು ಹೊಸ ತಳಿಗಳನ್ನ ಸಂಶೋಧಿಸಿದ್ದು ರೈತರು ಮತ್ತೆ ಮರಳಿ ಜೋಳ ಬೆಳೆಯ ಟ್ರ್ಯಾಕ್ಗೆ ಬಂದಿದ್ದಾರೆ.
ಕಪ್ಪು ಭೂಮಿಯಲ್ಲಿ ಹೆಚ್ಚು ಇಳುವರಿ
ಬಿಜೆವಿ-44 ಮತ್ತು ಸಿಎಸ್ ವಿ-29/6 ಈ ಎರಡು ತಳಿಗಳನ್ನು ಹಿಟ್ನಳ್ಳಿ ಕೃಷಿ ಕೇಂದ್ರವು ಸಂಶೋಧಿಸಿ ಅಭಿವೃದ್ಧಿಪಡಿಸುತ್ತಿದೆ. ಕಡಿಮೆ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚು ಜೋಳ ಬೆಳೆಯುವುದು, ಹಾಗೂ ಕಪ್ಪು ಭೂಮಿಯಲ್ಲಿ ಹೆಚ್ಚು ಇಳುವರಿ ಕೊಡುವುದು ಈ ಎರಡು ಹೊಸ ತಳಿಗಳ ಗುಣವಾಗಿದೆ.
ಇದನ್ನೂ ಓದಿ: Vijayapura Viral Video: ಬೇವಿನ ಮರದಲ್ಲಿ ಜಿನುಗುತ್ತಿದೆ ಹಾಲಿನಂತಹ ನೊರೆ!
ಜೋಳದ ಅಭಾವದಿಂದ ಬೆಲೆ ಏರಿಕೆ
ಹೀಗಾಗಿ ಮತ್ತೆ ರೈತರು ಜೋಳದತ್ತ ಗಮನಹರಿಸಿದ್ಧಾರೆ. ಹಿಂದೆ 10 ವರ್ಷದ ಹಿಂದೆ 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಜೋಳ, ನಂತರ ಕೇವಲ 50 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಗಿತ್ತು. ಜೋಳದ ಅಭಾವ ಅದರ ಬೆಲೆ ಏರಿಕೆಗೂ ಕಾರಣವಾಗಿತ್ತು.ಈಗ ಹೊಸ ತಳಿಗಳ ಸಂಶೋಧನೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಇದನ್ನೂ ಓದಿ: Viral Video: 5 ಲಕ್ಷಕ್ಕೆ ಖರೀದಿಸಿದ್ದ ಎತ್ತು 14 ಲಕ್ಷಕ್ಕೆ ಮಾರಾಟ!
ಈ ಹೊಸ ತಳಿಯ ಜೋಳ ಬಿಡಿಸಿದ ಮೇಲೆ ಉಳಿಯುವ ದಂಟುಗಳು ಜಾನುವಾರುಗಳ ಮೇವಿಗೆ ಹೆಚ್ಚು ಉಪಯೋಗ ಸಹ ಆಗಬಲ್ಲದು. ಒಟ್ಟಿನಲ್ಲಿ ಹೊಸ ತಳಿಯ ಸಂಶೋಧನೆ ಜೋಳ ಬಿತ್ತನೆ ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದ್ದಂತೂ ಸುಳ್ಳಲ್ಲ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ